AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೇಡಂ ತಾಲೂಕಿನ ಸಿಲಾರಕೋಟ್ ಗ್ರಾಮದಲ್ಲಿ ಬೋರವೆಲ್ ಹಾಕಲಾಯಿತು.#avintvcom

1 min read
Featured Video Play Icon

ಇಂದು ಸೇಡಂ ತಾಲೂಕಿನ ಸಿಲಾರಕೋಟ್ ಗ್ರಾಮದಲ್ಲಿ ಬೋರವೆಲ್ ಹಾಕಲಾಯಿತು..
.
ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸಿಲಾರಕೊಟ್ ಗ್ರಾಮದಲ್ಲಿ ತಾಲೂಕ ಪಂಚಾಯತ್ ವತಿಯಿಂದ ಅಂಗನವಾಡಿ ಕೇಂದ್ರ ಬಿ. ಹಾಗೂ ಅಂಬೇಡ್ಕರ್ ವಿಗ್ರಹದ ಎದುರಿಗೆ ನೀರಿನ ಬೋರವೆಲ್ ಹಾಕಲಾಯಿತು..
.
ಏಷ್ಟೋ ವರ್ಷಗಳಿಂದ ಇಲ್ಲಿ ನೀರಿನ ಸಮಸ್ಯೆ ಇತ್ತು.
ಇದಕ್ಕೆ ಮೊದಲು ಒಂದು ಬೋರವೆಲ್ ಇತ್ತು ಆದರೆ ಆ ನೀರು ಉಪ್ಪಿನ ನೀರಾಗಿ ಬರುತಿತ್ತು ಅದ ಕಾರಣ ಜನರಿಗೆ ಕುಡಿಯುವ ನೀರಿನ ತೊಂದರೆ ಇತ್ತು.
ಈಗ ಹಾಕಿರುವ ಬೋರವೆಲ್ ಇಂದ ತುಂಬಾ ಜನರಿಗೆ ಒಳ್ಳೆದಾಯಿತು..
.
ತುಂಬಾ ಕಲಹ ಮತ್ತು ಮಾತಿನ ದೌರ್ಜನ್ಯದ ಮದ್ಯದಲ್ಲಿ ಕೊನೆಗೂ ಬೋರವೆಲ್ ಹಾಕಲು ಅವಕಾಶ ಕಲ್ಪಿಸಿ ಕೊಡಲಾಯಿತು ಇಲ್ಲಿನ ಜನ ನಾಯಕರು..
.
ಈ ಸಂದರ್ಭದಲ್ಲಿ ಮೆದಕ್ ಗ್ರಾಮ ಪಂಚಾಯತ್ ಅಧ್ಯಕ್ಷರು ಸಾಯಿಲು ಸುಗ್ಗಾಳ, ಸದಸ್ಯರಾದ ಭೀಮ ರೆಡ್ಡಿ ದೇವಡಿ, ಮಹಿಪಾಲ್ ರೆಡ್ಡಿ ಆಕುದೋಟ, ಕಾಂಗ್ರೆಸ್ ಮುಖಂಡರು ಅದ ರಾಮಕೃಷ್ಣ ಹಡಪದ್.
.
ಹಾಗೂ ಬಿಜೆಪಿ ಮಾಜಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಭೀಮಪ್ಪ ಕುರ್ಕು.
ಹಾಗೂ ಬಿಜೆಪಿ ಮುಖಂಡರು ಇದ್ದರೂ.
.
ನೀರು 2 ಇಂಚು ಬಂದಿದು ತುಂಬಾ ಸಂತೋಷ ತೋರಿಸಿದರು ಗ್ರಾಮಸ್ಥರು.

ಈ ಸಂದರ್ಭವಾಗಿ ಗ್ರಾಮಸ್ಥರು ಹಾಗೂ ಹಿರಿಯ ಮುಖಂಡರು ತಮ್ಮ ಎಲ್ಲ ನಾಯಕರಿಗೆ ಕೃತಜ್ಞತೆ ತಿಳಿಸಿದರು..

ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.

Navachaitanya Old Age Home

Career | job

About Author