AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಗಾಲ್ಫ್ ಕ್ಲಬ್ ನಿಂದ 4000 ಮಾಸ್ಕ್ ಕೊಡುಗೆ.#avintvcom

1 min read
Featured Video Play Icon

…….ಸಹಾಯ ಹಸ್ತ…..

ಚಿಕ್ಕಮಗಳೂರು ಗಾಲ್ಫ್ ಕ್ಲಬ್ ನಿಂದ 4000 ಮಾಸ್ಕ್ ಕೊಡುಗೆ.

ಕೋವಿಡ್ ಸಂಬಂಧಪಟ್ಟ ಕಾರ್ಯಗಳಲ್ಲಿ ತೊಡಗಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ಮತ್ತಿತರರಿಗೆ ವಿತರಿಸಲು ಅನುಕೂಲವಾಗುವಂತೆ 4000 ಮಾಸ್ಕ್ ಗಳನ್ನು ಚಿಕ್ಕಮಗಳೂರು ಗಾಲ್ಫ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಬಿ ಸುದರ್ಶನ್ ರವರು ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಆಯುಕ್ತ ಎಂ ಎನ್ ಷಡಕ್ಷರಿ ಮತ್ತು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಶ್ರೀನಿವಾಸ್ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುದರ್ಶನ್ ಅವರು ಈ ಕಷ್ಟದ ಸಮಯದಲ್ಲಿ ಸಮಾಜದ ಅವಶ್ಯಕತೆಗಳಿಗೆ ಸ್ಪಂದಿಸುವುದು ಪ್ರತಿಯೊಬ್ಬ ನಾಗರಿಕ ಹಾಗೂ ಸಂಸ್ಥೆಯ ಕರ್ತವ್ಯವಾಗಿದೆ ಎಂದು ಹೇಳಿ, ಕೋವಿಡ್ ವಾರಿಯರ್ಸ್ ಗೆ ಮತ್ತೇನಾದರೂ ತುರ್ತು ಅವಶ್ಯಕತೆ ಇದ್ದರೆ ಅದನ್ನು ನಾವು ಸಾಧ್ಯವಾದಷ್ಟು ಸಹಾಯ ಮಾಡಲು ಬದ್ದರಿದ್ದೇವೆ ಎಂದರು.

ಗಾಲ್ಫ್ ಕ್ಲಬ್ ನ ಕ್ಯಾಪ್ಟನ್ ರವಿಶಂಕರ್ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯವರು ಮಾಡುತ್ತಿರುವ ಸೇವೆಯನ್ನು ಗಮನಿಸಿ ಈ ಗುರುತರ ಜವಾಬ್ದಾರಿಯನ್ನು ವಹಿಸುತ್ತಿದ್ದೇವೆ ಹಾಗೂ ನಮ್ಮ ಕುಟುಂಬದ ಕಡೆಯಿಂದ ಇತರೆ ಅವಶ್ಯಕತೆಗಳನ್ನು ಸಾಕಷ್ಟು ಮಟ್ಟಿಗೆ ಪೂರೈಸುವ ಪ್ರಯತ್ನ ಮಾಡಲಾಗುವುದು ಎಂದರು.

ಗಾಲ್ಫ್ ಕ್ಲಬ್ ನ ಕಾರ್ಯದರ್ಶಿ ಎ ಎನ್ ಶಂಕರಗೌಡ, ಹಾಗು ಖಜಾಂಚಿ ಎಸ್ ಎನ್ ಸತ್ಯನಾರಾಯಣ, ಸದಸ್ಯರಾದ ರಾಜೇಶ್, ನರೇಂದ್ರ ಪೈ, ಹಾಗೂ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಪಣಿರಾಜ್, ಸಂಘಟಕರು ಗಳಾದ ಕಿರಣ್ ಕುಮಾರ್, ನವೀನ್ ಕುಮಾರ್ ಹಾಜರಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author