ಕೋವಿಡ್ ಪಾಸಿಟಿವ್ ವರದಿಗೆ ಹೆದರಿ ನೀರು ತುಂಬಿದ ಕಲ್ಲಿನ ಕೋರೆಗೆ ಹಾರಿ ಮಹಿಳೆ ಆತ್ಮಹತ್ಯೆ#avintvcom
1 min read
https://youtu.be/kJg5HQzzHCc
ಕೋವಿಡ್ ಪಾಸಿಟಿವ್ ವರದಿಗೆ ಹೆದರಿ ನೀರು ತುಂಬಿದ ಕಲ್ಲಿನ ಕೋರೆಗೆ ಹಾರಿ ಮಹಿಳೆ ಆತ್ಮಹತ್ಯೆ
ಹುಬ್ಬಳ್ಳಿ- ಕೊರೊನಾ ಪಾಸಿಟಿವ್ ಬಂದಿದ್ದಕ್ಕೆ ಹೆದರಿ, ಮಹಿಳೆಯೊಬ್ಬರು ನೀರು ತುಂಬಿದ ಕಲ್ಲಿನ ಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದಿದೆ.
ಅದರಗುಂಚಿಯ ಬಸಮ್ಮ ಸಹದೇವ ಬಳ್ಳೂರ (50) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇಂದು ಬೆಳಗ್ಗೆ ಕೋವಿಡ್ ಪಾಸಿಟಿವ್ ಇರುವ ಬಗ್ಗೆ ವರದಿ ಬಂದಿತು ಎನ್ನಲಾಗಿದ್ದು, ಇದರಿಂದ ಹೆದರಿ ಗ್ರಾಮ ಸರಹದ್ದಿನಲ್ಲಿರುವ ಕಲ್ಲು ಕೋರೆಯಲಿದ್ದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು
ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ.ಸುರೇಶ್ ಜಾದವ್ ಹುಬ್ಬಳ್ಳಿ