AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಲಾಕ್ ಡೌನ್ ಎಪೆಕ್ಟ್ ವಿವಿಧ ಇಲಾಖೆಗಳ ಮಹಿಳೆಯರಿಗೆ ಸಾರಿಗೆ ಸಂಕಷ್ಟ #avintvcom

1 min read
Featured Video Play Icon

ಲಾಕ್ ಡೌನ್ ಎಪೆಕ್ಟ್ ‌ಮಹಿಳೆಯರಿಗೆ ಸಾರಿಗೆ ಸಂಕಷ್ಟ

ಅವಿನ್ ಟಿವಿಯ ವಿಶೇಷ-
ವರದಿ.ಸುರೇಶ್ ಜಾದವ್ ಹುಬ್ಬಳ್ಳಿ

ಹುಬ್ಬಳ್ಳಿ- ದಿನ ಕಳೆದಂತೆ ಕೊರೊನಾ ಕರ್ಪ್ಯೂ ಬಿಗಿಯಾಗುತ್ತಿದ್ದು , ಸಾರಿಗೆ ಬಸ್, ಆಟೋ ರಿಕ್ಷಾಗಳನ್ನು ನಂಬಿಕೊಂಡಿದ್ದ ಅಗತ್ಯ ಸೇವೆಗಳ ಕರ್ತವ್ಯದಲ್ಲಿರುವ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಎಲ್ಲಿಲ್ಲದ ಕಷ್ಟ ಅನುಭವಿಸುತ್ತಿದ್ದಾರೆ

ಹೌದು,,,, ಅವಳಿ ನಗರದ ನಡುವೆ ಸಂಚರಿಸುವ ವಿವಿಧ ಇಲಾಖೆಗಳ , ಬ್ಯಾಂಕ್, ಖಾಸಗಿ ಕಂಪನಿಗಳ ಉದ್ಯೋಗಿಗಳು ಸಾರಿಗೆ ಸಂಸ್ಥೆಯ ಬಸ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೀಗ ಕೋವಿಡ್ ಸಂದರ್ಭದಲ್ಲಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿರುವ ಪರಿಣಾಮ, ಬಹುತೇಕ ಸಿಬ್ಬಂದಿ ತಮ್ಮ ಖಾಸಗಿ ವಾಹನಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ತಮ್ಮ ಸ್ವಂತ ವಾಹನಗಳು ಇಲ್ಲದ, ಬೈಕ್ ಚಾಲನೆ ಮಾಡಲು ಬಾರದವರು ಕಚೇರಿ – ಮನೆಗೆ ಓಡಾಡುವುದು ಕಷ್ಟವಾಗಿದ್ದು, ಹೆಚ್ಚಾಗಿ ಮಹಿಳಾ ಸಿಬ್ಬಂದಿ ಈ ಸಮಸ್ಯೆ ಎದುರಿಸುತ್ತಿದ್ದು ನಡೆದಾಡುಕೊಂಡೆ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನು ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಕೆಲ ಇಲಾಖೆಗಳ ಸಿಬ್ಬಂದಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ಕೆಲ ಇಲಾಖೆಗಳಲ್ಲಿ ಶೇ.50 ಸಿಬ್ಬಂದಿ ಬಳಸಿಕೊಳ್ಳಲು ಸರಕಾರ ಸೂಚಿಸಿದೆ, ಆದರೆ ಅಗತ್ಯ ಸೇವೆಯಡಿ ಬರುವ ಸಿಬ್ಬಂದಿಗೆ ಸಮಸ್ಯೆಯಾಗುತ್ತಿದೆ.

ಬೈಟ್- ಐರಿನ್ ( ಹುಬ್ಬಳ್ಳಿ ನಿವಾಸಿ)

ಇನ್ನು ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್‌ ಹಾಗೂ ಕೆಲ ಅಗತ್ಯ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಕೋವಿಡ್ ನಿಯಮಗಳನ್ನು ಅನುಸರಿಸಿಕೊಂಡು ಬಿಎಂಟಿಸಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಹಾಗೆಯೇ ಹುಬ್ಬಳ್ಳಿ ಬಹುತೇಕ ಕಡೆಯಿಂದ ಬರುವ ಮಹಿಳೆಯರು, ತಮ್ಮ ವಾಹನವಿಲ್ಲದ ಕಾರಣ ಮುರ್ನಾಲ್ಕು ಕಿಲೋಮೀಟರ್ ನಡೆದಾಡುಕೊಂಡು ಕೆಲಸಕ್ಕೆ ಹಾಜಾರಾಗುತ್ತಿದ್ದು, ಮಹಿಳೆಯರ ಸಂಕಷ್ಟಕ್ಕೆ ಸರಕಾರ ಹಾಗೂ ಜಿಲ್ಲಾಡಳಿತ ಸ್ಪಂದಿಸುವ ಕೆಲಸ ಮಾಡಬೇಕಿದೆ. ಜೊತೆಗ ಸಂಚಾರ ಹಾಗೂ ಕಡಿಮೆ ದರದಲ್ಲಿ ಓಡಾಡುವ ಹಾಗೆ ಮಾಡಬೇಕು ಎಂಬುದು ಬಹುತೇಕ ಮಹಿಳೆಯರ ಒತ್ತಾಯವಾಗಿದೆ.

ಬೈಟ್- ಶೋಬಾ ( ಮಹಿಳಾ ಸಮಾಜ ಸೇವಕಿ )

ಒಟ್ಟಿನಲ್ಲಿ ಕೊರೊನಾ ವಾರಿಯರ್ಸ್‌ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಮಹಿಳೆಯರಿಗೆ, ಸಂಚಾರ ವ್ಯವಸ್ಥೆ ಮಾಡಿ ಅವರ ಕಷ್ಟಕ್ಕ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕಿದೆ
ವರದಿ.ಸುರೇಶ್ ಜಾದವ್ ಹುಬ್ಬಳ್ಳಿ

Navachaitanya Old Age Home

Career | job

About Author