AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಅವಿನ್ ಟಿವಿಯ ವತಿಯಿಂದ ಪೊಲೀಸರಿಗೆ ನಮ್ಮದೊಂದು ಸಲಾಂ* ತಪ್ಪದೆ ವೀಕ್ಷಿಸಿ#avintvcom

1 min read
Featured Video Play Icon

ಪೊಲೀಸರಿಗೆ ನಮ್ಮದೊಂದು ಸಲಾಂ ತಪ್ಪದೆ ವೀಕ್ಷಿಸಿ

ಅವಿನ್ ಟಿವಿಯ ವಿಶೇಷ ವರದಿ
ಸುರೇಶ್ ಜಾದವ್ ಹುಬ್ಬಳ್ಳಿ

 

ಹುಬ್ಬಳ್ಳಿ- ಕೊರೊನಾ ಎರಡನೇ ಅಲೆ ದೇಶ ಹಾಗೂ ರಾಜ್ಯದಲ್ಲಿ ತನ್ನ ಕಬಂದ ಬಾಹು ಚಾಚುತ್ತಿರುವ ಹಿನ್ನೆಲೆಯಲ್ಲಿ, ಕೊರೊನಾ ತಡೆಗಟ್ಟಲು ಎಲ್ಲಾ ಕ್ರಮ ಕೈಗೊಳ್ಳಲು ಸರಕಾರ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ. ಸದ್ಯ ಪೊಲೀಸರು ತಮ್ಮ ಜೀವದ ಹ‌ಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಷ್ಟಕ್ಕೂ ಅವರು ಉದ್ವಿಗ್ನ ಪರಿಸ್ಥಿತಿಯಲ್ಲಿನ ಕೆಲಸ ಹೇಗಿರುತ್ತೆ ಎನ್ನುವುದನ್ನಾ ತೋರಸ್ತೇವಿ ನೋಡಿ.

ಹೌದು,,,,, ಕೊರೊನಾ ಅಂದ್ರೆ ಸಾಕು ಎಲ್ಲರಲ್ಲೂ ಭಯ, ಸರಣಿಯಲ್ಲಿ ಸಾವುಗಳು, ಅದೆಷ್ಟೋ ಕುಟುಂಬಗಳನ್ನು ದೂರ ಮಾಡಿದೆ ಈ ಹೆಮ್ಮಾರಿ, ಆರಕ್ಷಕರು ಜೀವದ ಹಂಗನ್ನು ತೊರೆದು ಜನರ ರಕ್ಷಣೆ ಮುಂದಾಗಿದ್ದಾರೆ. ಬೇರೆ ರೋಗಕ್ಕೆ ಭಯ ಇದೆ ಇಲ್ಲೊ ಗೊತ್ತಿಲ್ಲ, ಆದರೆ ಕೊರೊನಾ ಅಂದ್ರೆ ಸಾಕು ಜನರಲ್ಲಿ ಎಲ್ಲಿಲ್ಲದ ಆತಂಕ ಮೂಡಿಸುತ್ತಿದೆ. ದಿನದಿಂದ ದಿನಕ್ಕೆ ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸಾವಿನ ಸಂಖ್ಯೆ ಏರುತ್ತಿದೆ. ಇದರ ನಡುವೆ ಕೊರೊನಾ ತಡೆಗಟ್ಟಲು ತಮ್ಮ ಕುಟುಂಬ ಲೆಕ್ಕಿಸದೆ, ವಾಣಿಜ್ಯ ನಗರಿ ಹುಬ್ಬಳ್ಳಿ ಪೊಲೀಸರು, ಪ್ರತಿಯೊಂದು ವಾಹನಗಳ ಚೆಕ್ ಮಾಡುವುದರ ಜೊತೆಗೆ, ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವಂತಹ ವಾಹನಗಳನ್ನು ತಡೆದು ದಂಡ ವಿಧಿಸಿ ಬುದ್ದಿವಾದ ಹೇಳಿ ಕಳುಹಿಸುತ್ತಿದ್ದಾರೆ.

ಇನ್ನು ಕೊರೊನಾ ಹಾವಳಿ ನೋಡಿದರೆ ಇಂತಹ ಸಮಯದಲ್ಲಿ ಕೊರೋನಾ ರೋಗ ಇವರನ್ನು ಬಾಧಿಸಬಹುದು, ಆದರೆ ಇದಕ್ಕೆಲ್ಲಾ ಕ್ಯಾರೆ ಎನ್ನದೆ, ನಾಗರಿಕರ ಹಿತಾಸಕ್ತಿಗಾಗಿ ಅವರ ರಕ್ಷಣೆಗಾಗಿ ಪೊಲೀಸರು ಹಗಲು ರಾತ್ರಿ ಎನ್ನದೆ, ಶ್ರಮಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಪೊಲೀಸರೆಂದರೆ ಎಲ್ಲರಲ್ಲಿ ಬರುವುದು ಅವರು ದಂಡ ಹಾಕುತ್ತಾರೆ, ವಾಹನಗಳನ್ನು ಸೀಜ್ ಮಾಡುತ್ತಾರೆ, ಹೊಡೆಯುತ್ತಾರೆ ಎನ್ನುವುದು ಮಾತ್ರ ಗೊತ್ತು ಆದರೆ ಅವರು ತಮ್ಮ ಜೀವನವನ್ನು ಪಣಕ್ಕಿಟ್ಟು ಸಾರ್ವಜನಿಕರ ಸೇವೆ ಮಾಡುತ್ತಿದ್ದಾರೆ. ಅವರು ಕೇಳುವುದು ಒಂದೆ ಎಲ್ಲರು ಮನೆಯಲ್ಲಿ ಇರಿ, ಅನಾವಶ್ಯಕವಾಗಿ ಯಾರು ಹೊರಗೆ ಬರಬೇಡಿ ಎಂದು ಜನರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ತಮ್ಮ ಕಾರ್ಯ ನಿರ್ವಹಿಸುತ್ತಿರು ಈ ಆರಕ್ಷಕರಿಗೆ ಅವಿನ್ ಟಿವಿಯ ವತಿಯಿಂದ ಸಲಾಂ…

Navachaitanya Old Age Home

Career | job

About Author