ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ *ಪಿಪಿ ಕಿಟ್ ನೀಡಿದ ದಾನಿಗಳು*#avintvcom
1 min read
ಪಿಪಿ ಕಿಟ್ ನೀಡಿದ ದಾನಿಗಳು
ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡದ ಹಾಗೂ ಶಿವಗಿರಿ ಸೇವಕರು ತಂಡದ ಸೇವೆಯನ್ನು ಗುರುತಿಸಿ,
N95 ಮಾಸ್ಕ್ ಹಾಗೂ
ಪಿ ಪಿ ಕಿಟ್ ವಿತರಿಸಲು ಸಹಾಯ ಮಾಡಿದ ದಾನಿಗಳು.
ಮೂಡಿಗೆರೆ ಮೇ 2
ಎ ಆರ್ ಪಿ ಎಂಟರ್ಪ್ರೈಸಸ್ ಮೂಡಿಗೆರೆ ಇದರ ಮಾಲೀಕರಾದ* ರಂಜಿತ್. ಹೆಚ್ ಎನ್. ಹ್ಯಾರಗುಡ್ಡೆ ವಿಲೇಜ್ ಮೂಡಿಗೆರೆ.
ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು ತಂಡದ ಸೇವೆಯನ್ನು ಗುರುತಿಸಿ N95 ಮಾಸ್ಕ್ ಹಾಗೂ 20 ಬಿಪಿ ಕಿಟ್ ಗಳನ್ನು ವಿತರಿಸಲು ನಮ್ಮ ತಂಡಕ್ಕೆ ಕೊಡಿಸಿದ್ದಾರೆ.
ಅವರು ಕೊಡಿಸಿದ N95 ಮಾಸ್ಕ್ ಗಳನ್ನು ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ ನೀಡಲು ನಿರ್ಧರಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಮೃತರ ಅಂತ್ಯಸಂಸ್ಕಾರ ಮಾಡಬೇಕಾದರೆ ತಂಡದ ಸದಸ್ಯರು ರಕ್ಷಣೆಗಾಗಿ 20 ಪಿಪಿ ಕಿಟ್ ಗಳನ್ನು ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಶಿವಗಿರಿ ಸೇವಕರು ಹಾಗೂ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಪ್ರವೀಣ್ ಪೂಜಾರಿ ಅವರಿಗೆ N95 ಮಾಸ್ಕ್ ಹಾಗೂ ಪಿಪಿ ಕಿಟ್ ಗಳನ್ನು ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾತನಾಡಿ ಇಡೀ ದೇಶವೇ ಕೊರೊನಾದಿಂದ ತತ್ತರಿಸಿಹೋಗಿದೆ ಈ ಸಂದರ್ಭದಲ್ಲಿ ಎಲ್ಲ ಕೆಲಸವೂ ಸರಕಾರವೇ ಮಾಡುತ್ತದೆ ಎಂಬುದು ಸುಳ್ಳು ಜನಸಾಮಾನ್ಯರು ಈ ತರದ ಕೆಲಸಗಳಲ್ಲಿ ಭಾಗಿಯಾಗಬೇಕು ಹಾಗೂ ಶಿವಗಿರಿ ಸೇವಕರು ತಂಡ ಹಾಗೂ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡವು ಮೂಡಿಗೆರೆ ತಾಲ್ಲೂಕಿನ ಅತ್ಯಂತ ಒಳ್ಳೆಯ ಕೆಲಸಗಳನ್ನು ನಿರ್ವಹಿಸುತ್ತಿದೆ
ಎಂದು ಅಭಿಪ್ರಾಯಪಟ್ಟರು. ಪ್ರವೀಣ್ ಪೂಜಾರಿ ಮಾತನಾಡಿ ನೀವು ಕೊಡಿಸಿದ ಎಲ್ಲಾ ತರಹದ ಸಲಕರಣೆಗಳನ್ನು ಒಳ್ಳೆಯ ಕೆಲಸಕ್ಕೆ ಮೀಸಲು ಇಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಯೋಜಕ ಪ್ರವೀಣ್ ಪೂಜಾರಿ. ಅರುಣ್ ಪಿಂಟೋ. ರವಿ ಪೂಜಾರಿ, ಸಚಿನ್, ಶಶಿ ಕೆಲ್ಲೂರು, ಸಂತೋಷ್, ಇದ್ದರು
ವರದಿ
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.