ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ದ್ವಂಸ ಮಹಿಳೆ ಅಸ್ವಸ್ಥ #avintvcom
1 min read
ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ದ್ವಂಸ
ಮಹಿಳೆ ಅಸ್ವಸ್ಥ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರಿನಲ್ಲಿ ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ದ್ವಂಸಗೊಂಡು ಮಹಿಳೆಯೊಬ್ಬರು ಅಸ್ವಸ್ಥಗೊಂಡ ಘಟನೆ ನಡೆದಿದೆ.
ಮಂಗಳವಾರ ಸಂಜೆ ಬಾಳೂರಿನ ಬಾಬು ಎಂಬುವವರ ಮನೆಯ ವಿದ್ಯುತ್ ಉಪಕರಣಗಳು ಸಿಡಿಲಿನಿಂದ ದ್ವಂಸಗೊಂಡಿದ್ದು ಬಾಬು ಅವರ ಪತ್ನಿ ಅಕ್ಕು ಅವರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಕ್ಕು ಅವರನ್ನು ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆಕೊಡಿಸಲಾಗಿದ್ದು ಚೇತರಿಸಿಕೊಂಡಿದ್ದಾರೆ. ಸಿಡಿಲಿನಿಂದ ಭಯಗೊಂಡು ಮನೆ ಮಂದಿಯಲ್ಲ ಭಯ ಪೀಡಿತರಾಗಿದ್ದಾರೆ.
ತಾಲೂಕು ಆಡಳಿತ ಕೂಡಲೆ ಸ್ಥಳಕ್ಕೆ ದಾವಿಸಿ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಓತ್ತಾಯಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.