ಸಂಚಾರಿ ನಿಯಮಗಳನ್ನು ಪಾಲಿಸಿ .#avintvcom
1 min read
ಸಂಚಾರಿ ನಿಯಮಗಳನ್ನು ಪಾಲಿಸಿ : ಪಿಎಸೈ ಮಗದುಮ ಬಾಗಲಕೊಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ : ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿ, ಸುರಕ್ಷತೆಯಿಂದ ವಾಹನ ಚಲಾಯಿಸಿ, ಸಾರಾಯಿ ಸೇವಿಸಿ ವಾಹನ ಚಲಾಯಿಸಬೇಡಿ ಹೀಗೆ ಹಲವಾರು ಘೋಷಣಾ ವಾಕ್ಯಗಳನ್ನು ಕೂಗುತ್ತಾ ಶಾಲಾ ಮಕ್ಕಳು ಸಾವಳಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಮೂಲಕ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದರು. ಸಾವಳಗಿ ಪೋಲಿಸ ಠಾಣೆಯ ಅಧಿಕಾರಿ ಹಾಗು ಸಿಬ್ಬಂದಿ ವರ್ಗ ಸೇರಿದಂತೆ ಶಿಕ್ಷಕರೊಂದಿಗೆ 32 ನೇಯ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಿದರು. ಪಿ.ಎಸ್.ಐ. ಬಿ.ಸಿ.ಮಗದುಮ ಮಾತನಾಡಿ ಚಾಲಕರು ರಸ್ತೆ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಅಪಘಾತಗಳನ್ನು ತಪ್ಪಿಸಬೇಕು. ಕಡ್ಡಾಯವಾಗಿ ಹೆಲ್ಮೇಟ್ ಹಾಕಿಕೊಂಡು ಚಲಾಯಿಸಿ, ಮೂವರು ಬೈಕ ಚಾಲನೆ ಮಾಡಬಾರದು, ಕಡ್ಡಾಯವಾಗಿ ಲೈಸನ್ಸ, ಇನ್ಸೂರೆನ್ಸ ಇದ್ದರೇ ಮಾತ್ರ ವಾಹನ ಚಲಾಯಿಸಬೇಕೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಪೋಲಿಸ ಸಿಬ್ಬಂದಿಗಳಾದ ಹೆಚ್ಚುವರಿ ಪಿ.ಎಸ್.ಐ ಪಿ.ಬಿ.ಪೂಜಾರಿ, ಎಸ್.ಜೆ ಮಕಾಂದಾರ, ರವಿ ಬಸನ್ನವರ, ಧರೆಪ್ಪ ಕುಂಬಾರ, ಮಂಜುನಾಥ ಕಾರಜೋಳ, ಮೈಬೂಬ ಕುಡಗಿ, ರವಿ ತಳವಾರ ಸೇರಿದಂತೆ ಹಲವರು ಇದ್ದರು. ಪೋಟೊ ವಿವರ : ಸಾವಳಗಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಜರುಗಿತು. www.avintv.com