ಕಸದ ಕೊಂಪೆ ಹಾಕುತ್ತಿರುವ ಗೌಡಳ್ಳಿ ಗ್ರಾಮ ಪಂಚಾಯಿತಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕರವೇ ಮನವಿ #avintvcom
1 min read
ಕಸದ ಕೊಂಪೆ ಹಾಕುತ್ತಿರುವ ಗೌಡಳ್ಳಿ ಗ್ರಾಮ ಪಂಚಾಯಿತಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕರವೇ ಮನವಿ
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿ ಸೇರಿದ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಶಿವಪುರ ಗ್ರಾಮ ಈ ಗ್ರಾಮ ರಾಜ್ಯ ಹೆದ್ದಾರಿಗೆ ಸೇರಿರುತ್ತದೆ . ರಾಜ್ಯ ಹೆದ್ದಾರಿಯಲ್ಲಿ ಕೋಳಿ ಕಸವನ್ನು ಹಾಕಿರ್ತಾರೆ ಈ ಕೋಳಿ ಸ್ವಚ್ಚ ಮಾಡಿ ಕೋಳಿಯ ಕಸವನ್ನುರಾಜ್ಯ ಹೆದ್ದಾರಿಯ ರಸ್ತೆಯಲ್ಲಿ ಹಾಕಿರುತ್ತಾರೆ . ಇಲ್ಲಿ ವಾಸನೆಯಿಂದ ಕೂಡಿರುತ್ತದೆ ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಾಗದ ಸ್ಥಿತಿ ವಾಸನೆ ಬಂದಿರುತ್ತದೆ . ಇದನ್ನು ಯಾರು ಹಾಕಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು . ಸರಕಾರದಿಂದ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಕಸದ ವಾಹನ ಮತ್ತು ಒಣಕಸ ಮತ್ತು ಹಸಿಕಸ ಮಾಡಲು ಬಕೆಟ್ ಗಳು ಮತ್ತು ಕಂದಾಯ ಇಲಾಖೆಯಿಂದ ಕಸ ಹಾಕಲು ಜಾಗ ಸಹ ಕೊಟ್ಟಿರುತ್ತಾರೆ ಆದರೆ ಇದನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಗೌಡಳ್ಳಿ ಗ್ರಾಮ ಪಂಚಾಯಿತಿಯವರು . ಹಾಗಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಗಮನಿಸಿ ಇದನ್ನು ಸ್ವತ್ಛಗೊಳಿಸಬೇಕು ಮತ್ತು ಈ ಕೋಳಿ ಕಸ ಹಾಕಿದವರ ಮೇಲೆ ಕ್ರಮ ಕೈಗೊಳ್ಳಬೇಕು . ಇನ್ನು ಮುಂದೆಯಾದರೂ ಈ ಕಸ ಹಾಕದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಕೋಳಿ ಕಸ ಹಾಕಿದೋರಿಗೆ ಶಿಕ್ಷೆ ಆಗಬೇಕು ಎಂದು ಕರವೇ ಮನವಿ . ಇಲ್ಲದೆ ಹೋದರೆ ಕರವೇ ಕಾರ್ಯಕರ್ತರಿಂದ ಗೌಡಳ್ಳಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಅವರು ತಿಳಿಸುತ್ತಾರೆ.