AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬೆಂಗಳೂರು ಸಿಎ ಇನ್ಸಿಟ್ಯೂಟ್ ಗೆ ದೇಶದಲ್ಲೇ ಅತ್ಯುತ್ತಮ ಬ್ರಾಂಚ್ನ ಗರಿ #avintvcom

1 min read
Featured Video Play Icon

ಬೆಂಗಳೂರು ಸಿಎ ಇನ್ಸಿಟ್ಯೂಟ್‌ ಗೆ ದೇಶದಲ್ಲೇ ಅತ್ಯುತ್ತಮ ಬ್ರಾಂಚ್‌ನ ಗರಿ

ಬೆಂಗಳೂರು ಫೆಬ್ರವರಿ 10: ಕರೋನಾ ಸಾಂಕ್ರಾಮಿಕ ಕಾಲದಲ್ಲೂ ಅತ್ಯುತ್ತಮ ಕಾರ್ಯಚಟುವಟಿಕೆಗಳನ್ನು ತೋರಿಸಿದ ಇನ್ಸಿಟ್ಯೂಟ್‌ ಆಫ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ – ಬೆಂಗಳೂರು ಶಾಖೆಗೆ ಈ ಬಾರಿಯ ಅತ್ಯುತ್ತಮ ಬ್ರಾಂಚಿನ ಪ್ರಶಸ್ತಿ ದೊರೆತಿದೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಅರುಣ್‌ ಸಿಂಗ್‌ ಅವರು ಐಸಿಎಐ ಅಧ್ಯಕ್ಷರಾದ ಸಿಎ ಅತುಲ್‌ಕುಮಾರ್‌ ಗುಪ್ತಾ ಅವರ ಉಪಸ್ಥಿತಿಯಲ್ಲಿ ಬೆಂಗಳೂರು ಸಿಎ ಇನ್ಸಿಟ್ಯೂಟ್‌ನ ಅಧ್ಯಕ್ಷರಾದ ಸಿಎ ರವಿಂದ್ರ ಎಸ್‌ ಕೋರೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಇನ್ಸಿಟ್ಯೂಟ್‌ ಆಫ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ – ಬೆಂಗಳೂರು ಶಾಖೆಯ ಅಧ್ಯಕ್ಷ ರವೀಂದ್ರ ಎಸ್‌ ಕೋರೆ ಮಾತನಾಡಿ, ಕರೋನಾ ಸಾಂಕ್ರಾಮಿಕದ ಕಾರಣ  ಕಾಲದಲ್ಲೂ ಕೂಡಾ ತಂತ್ರಜ್ಞಾನದ ಸಹಯೋಗದಲ್ಲಿ ನಮ್ಮ ಶಾಖೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವರ್ಷದಾದ್ಯಂತ ಜ್ಞಾನ ದಾಸೋಹ ಹೆಸರಿನಲ್ಲಿ ನಡೆಸಿದ ಕಾರ್ಯಕ್ರಮಗಳು ದೇಶಾದ್ಯಂತ ಹೆಸರು ಗಳಿಸುವಲ್ಲಿ ಯಶಸ್ವಿಯಾದವು.  ವಿದ್ಯಾರ್ಥಿಗಳು ಅಷ್ಟೇ ಅಲ್ಲದೆ ಚಾರ್ಟೆಡ್‌ ಅಕೌಂಟೆಂಟ್‌ ಗಳಿಗೂ ಕೂಡಾ ಜ್ಞಾನಾರ್ಜನೆಗೆ ಹಲವು ಯೋಜನೆಗಳನ್ನು ಆಯೋಜಿಸಿದ್ದೇವು. ಇದನ್ನ ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಸಾಂಕ್ರಾಮಿಕ ಸಂಧರ್ಭದಲ್ಲೂ ಇದನ್ನು ಸಾಧಿಸಲು ಸಾಧ್ಯವಾಗಿರುವುದು ನಮಗೆ ಬಹಳ ಸಂತಸ ತಂದಿದೆ ಎಂದು ಹೇಳಿದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author