ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಜೆಡಿಎಸ್ ತೆಕ್ಕೆಗೆ… #avintvcom
1 min read
ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಜೆಡಿಎಸ್ ತೆಕ್ಕೆಗೆ…
ಶಿಡ್ಲಘಟ್ಟ.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಮೀಸಲಾತಿಯು ಸಾಮಾನ್ಯ (ಮ) ಹಾಗೂ ಸಾಮಾನ್ಯ (ಪು) ಸೀಮಿತವಾಗಿದ್ದು ಮಂಗಳವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದಿಬ್ಬೂರಹಳ್ಳಿಯ ನಾಗರತ್ನಮ್ಮ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕದಿಬ್ಬೂರಹಳ್ಳಿ D R ರಾಮಚಂದ್ರರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಲ್ಲಿ 15 ಜನ ಸದಸ್ಯರಿದ್ದು ಅದರಲ್ಲಿ ಕೇವಲ ಒಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದು ಅವರು ಕೂಡ ಪ.ಪಂಗಡಕ್ಕೆ ಸೇರಿದ ಮಹಿಳೆಯಾಗಿದ್ದು ಅವರ ವಿರುದ್ಧ ಯಾರು ಕೂಡ ಅರ್ಜಿ ಸಲ್ಲಿಸದ ಕಾರಣ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಡಾ// ಧನುಂಜಯರೆಡ್ಡಿ ಹಾಗೂ D P ನಾಗರಾಜ್ ರವರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಗಿರುತ್ತದೆ. ಇದರಲ್ಲಿ ಪಂಚಾಯಿತಿ ಹಾಲಿ ಸದಸ್ಯರಾದ ಡಾ// ಧನುಂಜಯರೆಡ್ಢಿ ಮಾತನಾಡಿ ನಾವು ಈ ಪಂಚಾಯಿತಿಯಲ್ಲಿ 15 ಸದಸ್ಯರಿಗೆ 13 ಜನ ಜೆ.ಡಿ.ಎಸ್ ಸದಸ್ಯರೇ ಆಗಿದ್ದು ಎಲ್ಲರ ಒಮ್ಮತದಿಂದಲೇ ಆಯ್ಕೆ ಮಾಡಲಾಗಿದೆ ನಮ್ಮ ಜೆಡಿಎಸ್ ನಾಯಕರಾದ ಮೇಲೂರು ರವಿ ಅಣ್ಣನವರ ಅನುಮತಿಯಂತೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಮುನ್ನಡೆಸಲಾಗುವುದೆಂದು ಹೇಳಿದರು. ಇದರಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರೆಲ್ಲಾ ಹಾಜರಿದ್ದರು..