ಜಮಖಂಡಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಬಕಾರಿ ಹಿರಿಯ ನಿರೀಕ್ಷಕ #avintvcom
1 min read
ಲೈಂಗಿಕ ಕಿರುಕುಳ :ದೂರು ದಾಖಲು.
ಆ್ಯಂಕರ್:
ಜಮಖಂಡಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಬಕಾರಿ ಹಿರಿಯ ನಿರೀಕ್ಷಕ ಅಧಿಕಾರಿಯೊಬ್ಬರು ಮಹಿಳಾ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ , ಮಾನಸಿಕ ಹಿಂಸೆನೀಡಿದ ಬಗ್ಗೆ ಜಿಲ್ಲಾ ಮಹಿಳಾಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅಬಕಾರಿ ಇಲಾಖೆ ಹಿರಿಯ ನಿರೀಕ್ಷಕರೊಬ್ಬರು ಕಳೆದ ಒಂದು ವರ್ಷದಿಂದ ತಮ್ಮ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಅವಾಚ್ಯ ಶಬ್ದ ಬಳಕೆ ಮಾಡಿ , ಅವರ ಸೌಂದರ್ಯದ ಬಗ್ಗೆ ವರ್ಣಿಸುವ ಹಾಗೂ ಮೊಬೈಲ್ನಲ್ಲಿ ಎಲ್ಲಿ ಇದ್ದೀರಿ ?, ಹೇಗೆ ಇದ್ದೀರಿ ? ಅಂತ ಲೈಂಗಿಕ ಕಿರುಕುಳ ನೀಡುತ್ತಿದ್ದು , ಕೆಲವು ಸಂದರ್ಭದಲ್ಲಿ ರಾತ್ರಿ ವೇಳೆ ಫೋನ್ ಮಾಡುತ್ತಿದ್ದು , ಇದರಿಂದ ಮಾನಸಿಕ ತೊಂದರೆ ಅನುಭವಿಸುತ್ತಿದ್ದರು . ಇದರಿಂದ ಮನನೊಂದ ಸಂತ್ರಸ್ತೆ ಬಾಗಲಕೋಟೆ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ . ಚುರುಕುಗೊಂಡ ತನಿಖೆ ಈ ಪ್ರಕರಣದಲ್ಲಿ ಶನಿವಾರ ಜಿಲ್ಲಾ ಮಹಿಳಾ ಸಿಪಿಐ ಎಸ್,ಎಸ್,ತೇಲಿ ಅವರು ಇಲ್ಲಿನ ಅಬಕಾರಿ ಇಲಾಖೆ ಕಚೇರಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ , ತನಿಖೆ ಚುರುಕುಗೊಳಿಸಿದ್ದಾರೆ . ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿತ ಅಬಕಾರಿ ನಿರೀಕ್ಷಕ 15 ದಿನ ರಜೆ ಮೇಲೆ ತೆರಳಿದ್ದಾರೆ .
ವರದಿ: ಪರಶುರಾಮ್. ಕಾಂಬಳೆ