ಇಂದು ಚಿಕ್ಕೋಡಿ ತಾಲ್ಲೂಕು ಆಸ್ಪತ್ರೆಯಲ್ಲಿ, ಕೋವಿಡ್–19 ವಿರುದ್ಧ ಜಗತ್ತಿನ ಅತಿ ದೊಡ್ಡ ದೇಶವ್ಯಾಪಿ ಲಸಿಕೆ #avintvcom
1 min read
ಚಿಕ್ಕೋಡಿ
ಕೊರೊನಾ ಮುಕ್ತ ಭಾರತಕ್ಕಾಗಿ ನಮ್ಮ ಶ್ರಮ ಅವಿರತ
ಇಂದು ಚಿಕ್ಕೋಡಿ ತಾಲ್ಲೂಕು ಆಸ್ಪತ್ರೆಯಲ್ಲಿ, ಕೋವಿಡ್–19 ವಿರುದ್ಧ ಜಗತ್ತಿನ ಅತಿ ದೊಡ್ಡ, ದೇಶವ್ಯಾಪಿ ಲಸಿಕೆ ಅಭಿಯಾನಕ್ಕೆ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಅವರು ವೀಕ್ಷಿಸಿದ ಬಳಿಕ, ಕೋವಿಡ್-19 ಲಸಿಕಾ ವಿತರಣೆ ಅಭಿಯಾನಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿದರು.
ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡು ಕೂಡ ಮೇಡ್ ಇನ್ ಇಂಡಿಯಾ ಲಸಿಕೆಗಳು ಅನ್ನೋದು ಹೆಮ್ಮೆಯ ವಿಚಾರ. ಕೊರೊನಾ ಮುಕ್ತ ಭಾರತಕ್ಕಾಗಿ, ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ವಿಜ್ಞಾನಿಗಳು, ಸಂಶೋಧಕರು ಹಾಗೂ ಎಲ್ಲಾ ಕೋವಿಡ್ ವಾರಿಯರ್ ಗಳ ಸತತ ಫರಿಶ್ರಮಕ್ಕೆ ಸಂದ ಫಲ ಇದಾಗಿದೆ. ಕೊರೊನಾವನ್ನು ಸಂಪೂರ್ಣ ಮುಕ್ತವಾಗಿಸಿ, ಪ್ರಜೆಗಳ ಹಿತಕ್ಕಾಗಿ ತಮ್ಮ ಸೇವೆ ಸದಾ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು
“कोरोना मुक्त भारतासाठी आमचे परिश्रम अविरत”
आज चिक्कोडी रुग्णालयात कोविड – 19 विरुद्ध जगातील सर्वात मोठ्या देशव्यापी लस मोहिमेला पंतप्रधान श्री. नरेंद्र मोदी जी यांनी व्हिडियो कॉन्फरन्सद्वारे चालना दिलेल्या कार्यक्रमास राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी पाहिल्यानंतर कोविड – 19 लस वितरण मोहिमेसाठी रोपांना पाणी घालून चालना दिले आणि तेथील व्यवस्था पाहिल्या गेल्या.
कोविशिल्ड आणि कोव्याक्सिन दोनीही मेड इन इंडियाचे लस असल्याचा अभिमान आहे. कोरोना मुक्त भारतासाठी, माननीय पंतप्रधान श्री नरेंद्र मोदी जी यांच्या नेतृत्वात वैज्ञानिक, संशोधक आणि सर्व कोविड वॉरियर्स यांच्या अथक प्रयत्नांचे हे परिणाम आहेत. कोरोना पूर्णपणे मुक्त करून नागरिकांच्या हितासाठी त्यांची सेवा नेहमीच असेल असे सांगीतले.
यावेळी मान्यवर, लोकप्रतिनिधी व आरोग्य कर्मचारी उपस्थित होते.