लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕದ ಖ್ಯಾತ ಸಂಸ್ಥೆ ಎಲ್ಜಿ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ11 ನೇ ಲೀಡರ್ಶಿಪ್ ಪ್ರಶಸ್ತಿ ಲಭಿಸಿದೆ.#avintvcom

1 min read

ಎಲ್ಜಿಟಿ ಇನ್ಪ್ರಾಸ್ಟ್ರಕ್ಚರ್ ಗೆ 11 ನೇ ಲೀಡರ್ಶಿಪ್ ಕಾಂಕ್ಲೇವ್ ಪ್ರಶಸ್ತಿ
ಬೆಂಗಳೂರು ಡಿಸೆಂಬರ್ 29: ಕರ್ನಾಟಕದ ಖ್ಯಾತ ನಿರ್ಮಾಣ ಸಂಸ್ಥೆ ಎಲ್ಜಿಟಿ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ 11 ನೇ ಲೀಡರ್ಶಿಪ್ ಕಾಂಕ್ಲೇವ್ ಪ್ರಶಸ್ತಿ ಲಭಿಸಿದೆ. ನೆಟ್ವರ್ಕ್ 7 ಮೀಡಿಯಾ ಗ್ರೂಪ್ ನೀಡುವ ಲೀಡರ್ಶಿಪ್ ಕಾಂಕ್ಲೇವ್ ಪ್ರಶಸ್ತಿ ಯಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಕಂಪನಿಯ ಸಾಧನೆಗಳನ್ನು ಗುರುತಿಸಿ ಇಂಡಿಯನ್ ಮೋಸ್ಟ್ ಅಡ್ಮೈರರ್ಡ್ & ವಾಲ್ಯೂಯೇಬಲ್ ಇನ್ಪ್ರಾಸ್ಟ್ರಕ್ಚರ್ ಕಂಪನಿ 2020 ಎನ್ನುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಹತ್ತು ಸಂಸ್ಥೆಗಳು ಈ ಪುರಸ್ಕಾರಕ್ಕಾಗಿ ಪೈಪೋಟಿ ನಡೆಸಿದ್ದು, ವೋಟಿಂಗ್ ಮೂಲಕ ಎಲ್ಟಿಜಿ ಸಂಸ್ಥೆ ಗೆಲುವು ಸಾಧಿಸಿದೆ. ಇದು ಕರ್ನಾಟಕಕ್ಕೆ ಸಂದ ಗೌರವವಾಗಿದೆ. ಹಳ್ಳಿಯಿಂದ ಬಂದು ಭಾರತದ ಅತ್ಯುತ್ತಮ ಗುಣಮಟ್ಟದ ಸಂಸ್ಥೆಯಾಗಿ ಎಲ್ಟಿಜಿಯನ್ನು ಸಾಧನೆ ಹಾದಿಯಲ್ಲಿ ನಡೆಸಿದ ಶ್ರೀ ಎಚ್.ಪಿ. ಲಕ್ಷ್ಮಣ ಅವರ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ.
ಕರ್ನಾಟಕದ ಖ್ಯಾತ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಎಲ್ಟಿಜಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಳೆದ 2 ದಶಕದಿಂದ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ತನ್ನ ಸೃಜನಶೀಲತೆ ಮತ್ತು ಗುಣಮಟ್ಟಕ್ಕಾಗಿ ISO 9001:14001 and 45001 ಸರ್ಟಿಫಿಕೆಟ್ ಅನ್ನು ತನ್ನದಾಗಿಸಿಕೊಂಡಿದೆ. ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್, ವೇರ್ಹೌಸ್, ಕೈಗಾರಿಕಾ ನಗರ, ವಸತಿ ಯೋಜನೆಗಳು, ಐಟಿ-ಬಿಟಿ ಪಾರ್ಕ್, ಕೋಲ್ಡ್ ಸ್ಟೋರೇಜ್ ಯುನಿಟ್, ಕೃಷಿ ವಲಯ ಸೇರಿದಂತೆ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಶ್ರೀ ಎಚ್.ಪಿ. ಲಕ್ಷ್ಮಣ ಅವರ ಸಾರಥ್ಯದಲ್ಲಿ ಎಲ್ಟಿಜಿ ಮೇಲಿನ ವಲಯಗಳಲ್ಲಿ ಸಾಧನೆ ಮೆರೆದಿದೆ. ಸದಾ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯನ್ನು ಗುರುತಿಸಿ ಹಲವಾರು ಪುರಸ್ಕಾರಗಳು ದೊರಕಿವೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author