लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
23/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಣಕಲ್ ಬಿಎಸ್ಪಿ ಘಟಕದಿಂದ ಅಬ್ಬರದ ಪ್ರಚಾರ………
ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಬಹುಜನ ಸಮಾಜ ಪಾರ್ಟಿಯಿಂದ ಮುಂದಿನ ತಿಂಗಳು 6ರಂದು ನಡೆಯಲಿರುವ ಅಂಬೇಡ್ಕರ್ ಪರಿ ನಿರ್ವಾಣ ದಿನದ ಅಂಗವಾಗಿ ಬಹುಜನ ಸಂಕಲ್ಪ ದಿನದ ಕಾರ್ಯಕ್ರಮಕ್ಕೆ ಹಗಲು ರಾತ್ರಿ ಎನ್ನದೇ ಅಬ್ಬರದ ಪ್ರಚಾರ ಮಾಡುತ್ತಿದ್ದು ಜೊತೆಗೆ ಎಲ್ಲ ಮತದಾರರ ಬಳಿ ತೆರಳಿ ಆರ್ಥಿಕ್ ಸಹಯೋಗ ದಿವಸ್ ಎಂಬುವ ಕಾರ್ಯಕ್ರಮಕ್ಕೆ ದೇಣಿಗೆ ಪಡೆಯಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸಂಯೋಜಕರಾದ ಬಿ ಎಂ ಶಂಕರ್ ಇದೇ ಮೊಟ್ಟ ಮೊದಲ ಬಾರಿಗೆ ಮೂಡಿಗೆರೆಯಲ್ಲಿ ಮೈಸೂರು ವಲಯ ಮಟ್ಟದ ಬೃಹತ್ ಸಮಾವೇಶ ಕಾರ್ಯಕ್ರಮ ಸುಮಾರು 9ಜಿಲ್ಲೆಯಿಂದ ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಲಿದ್ದು ಸುಮಾರು 3ಸಾವಿರಕ್ಕೂ ಅಧಿಕ ಜನ ಭಾಗವಹಿಸುತ್ತಾರೆ ಹಾಗಾಗಿ ಬಣಕಲ್ ಹೋಬಳಿ ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಮತದಾರರು ಇದ್ದು ಎಲ್ಲರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಉಪಾಧ್ಯಕ್ಷ ಹೊನ್ನೇಶ್ ಬೆಟ್ಟಗೆರೆ ಮಾತನಾಡಿ, ಇದೇ ಕಾರ್ಯಕ್ರಮದಲ್ಲಿ ಈಗಾಗಲೇ ಬೇರೆ ಬೇರೆ ಪಕ್ಷದಿಂದ ಬೇಸತ್ತ ನಮ್ಮ ಹಲವಾರು ಸಮುದಾಯದ ಯುವಕರು ಪಕ್ಷ ಸೇರ್ಪಡೆಗೊಳ್ಳುವುದಾಗಿ ನನ್ನೊಂದಿಗೆ ಮಾತನಾಡಿದ್ದಾರೆ, ಈ ದೇಶದಲ್ಲಿ ಯಾವುದಾದರೂ ಒಂದು ಪಕ್ಷ ಮಾನವೀಯ ಮೌಲ್ಯದ ಮೇಲೆ ಸಮ ಸಮಾಜದ ನಿರ್ಮಾಣಕ್ಕೆ ಪಣ ತೊಟ್ಟು ಒಂದು ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿದ್ದರೆ ಅದು ಬಹುಜನ ಸಮಾಜ ಪಾರ್ಟಿ ಈ ಸತ್ಯವನ್ನು ಎಲ್ಲ ಜಾತಿಯ ಧರ್ಮದವರು ಅರಿಯಬೇಕು ಆ ಮುಖೇನ ಎಲ್ಲರೂ ಪಕ್ಷಕ್ಕೆ ಬೆಂಬಲಿಸಬೇಕು ಜೊತೆಗೆ ಒಂದು ಓಟು ಒಂದು ನೋಟು ಅನ್ನುವ ಕಾನ್ಷಿರಾಮ್ ಜೀ ರವರ ಆಶಯವನ್ನು ಬೆಂಬಲಿಸಬೇಕು ಎಂದರು.
ನಿವೃತ್ತ ಶಿಕ್ಷಕರಾದ ಹಾಲಯ್ಯ ಮಾತನಾಡಿ ಈ ತಾಲೂಕಿನಲ್ಲಿ ಹಲವಾರು ನನ್ನ ಸ್ನೇಹಿತರು ವೃತ್ತಿಯಲ್ಲಿ ತೊಡಗಿಸಿಕೊಂಡು ನಂತರ ನಿವೃತ್ತಿ ಹೊಂದಿ ಮನೆಯಲ್ಲೇ ಕುಳಿತು ಕಾಲ ಕಳೆಯುವ ಬದಲು ನಮ್ಮ ಬಹುಜನರ ವಿಮೋಚನಾ ರಥ ಎಳೆಯಲು ನೀವು ಆರ್ಥಿಕವಾಗಿ ನಮ್ಮೊಂದಿಗೆ ಕೈ ಸೇರಿಸಿ ಅಧಿಕೃತವಾಗಿ ಪಕ್ಷದ ಜೊತೆ ನಿಂತ್ಕೊಂಡು ಬಾಬಾ ಸಾಹೇಬರು ಹಾಕಿಕೊಟ್ಟ ರಾಜಕೀಯವಾಗಿ ಅಧಿಕಾರ ಹಿಡಿಯುವ ಬಹು ದೊಡ್ಡ ಕೆಲಸಕ್ಕೆ ಜೊತೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷರ ಕುಮಾರ್ ಕೋಳೂರು, ಹಳಿಕೆ ಲಕ್ಷ್ಮಣ ದೊಡ್ಡಯ್ಯ, ಬಕ್ಕಿ ಸುಮಿತ್ರ, ಅಣ್ಣಪ್ಪ ಬೆಟ್ಟಗೆರೆ, ಸಬ್ಲಿ ಸುಂದರೇಶ್, ರಾಜೇಶ್, ಪ್ರವೀಣ್, ಶಶಾಂಕ್, ಕಲ್ಲೇಶ, ರಮೇಶ, ಪೂರ್ಣೇಶ, ಮಹೇಶ, ವೆಂಕಟೇಶ್ ಇದ್ದರು.

About Author

More Stories

Leave a Reply

Your email address will not be published. Required fields are marked *

You may have missed