लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
21/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಭಯರಣ್ಯದಲ್ಲೊಂದು ಭರವಸೆಯ ಬೆಳಕು.
ಅಬ್ಬ ಸರ್ಕಾರಿ ಕಟ್ಟಡವೊಂದನ್ನು ಈ ಮಟ್ಟಕ್ಕೆ ಹೈಟೆಕ್ ಸ್ವರೂಪದಲ್ಲಿ ನಿರ್ಮಿಸಬಹುದೆಂದು ತೋರಿಸಿಕೊಟ್ಟವರು ನಮ್ಮ ಜಾನಕಿ ರಾಮ್, ಜಾನಿ ಅಣ್ಣ.
ಗ್ರಾಮ ಪಂಚಾಯಿತಿ ಕಾರ್ಯಾಲಯವೊಂದು ಇಷ್ಟರ ಮಟ್ಟಿಗೆ ಸುಸಜ್ಜಿತವಾಗಿ ನಿರ್ಮಾಣವಾಗಿದೆ ಎಂದರೆ ಇದಕ್ಕೆ ಇಚ್ಛಾಶಕ್ತಿಯೇ ಪ್ರಮುಖವಾಗಿ ಬೇಕಾದದ್ದು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ಮೇಲಿನ ಉಲುವತ್ತಿಯ ಪಂಚಾಯತ್ ಅಧ್ಯಕ್ಷರಾದ ಜಾನಕಿ ರಾಮ್ ಮತ್ತು ಉಳಿದ ಸದಸ್ಯ ತಂಡದವರು. ಭದ್ರಾ ಅಭಯಾರಣ್ಯದ ಮುತ್ತೋಡಿ ಕಾಡನ್ನು ನೋಡಿದ್ದೀರಾ ಆ ರಸ್ತೆಯಲ್ಲಿಯೇ ಮುಂದುವರೆದು ಹೋದರೆ ಇಂತಹದೊಂದು ಗ್ರಾಮಪಂಚಾಯತಿ ಕಾರ್ಯಾಲಯ ಗ್ರಾಮದ ಜನರಿಗಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರೆ ಆಶ್ಚರ್ಯವಾಗದೆ ಇರದು.
ಅಧ್ಯಕ್ಷ ಉಪಾಧ್ಯಕ್ಷರ ಕೊಠಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಕೊಠಡಿ, ಗುಮಾಸ್ತ, ಮತ್ತಿತರ ಕೆಲಸ ನಿರ್ವಹಿಸುವ ಸ್ಥಳ, ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಸಭೆಯನ್ನು ನಡೆಸುವ ಹಾಲ್. ಸುಸಜ್ಜಿತ ಶೌಚಾಲಯ ಇದನ್ನೆಲ್ಲ ನೋಡಿದರೆ. ಇಂಹತ ಜಾಗದಲ್ಲಿ ಕುಳಿತವರು ಜನಸಾಮಾನ್ಯರ ಕೆಲಸ ಮಾಡಿಕೊಡದೆ ಇರುತ್ತಾರ ಹೇಳಿ.
ಸುಮಾರು ಒಂದು ಕೋಟಿ ಮೂವತ್ತೈದು ಲಕ್ಷಕ್ಕೂ ಅಧಿಕ ಹಣವನ್ನು ಖರ್ಚುಮಾಡಿ ನಿರ್ಮಿಸಿರುವ ಈ ಕಟ್ಟಡ ಇಂದು ಲೋಕಾರ್ಪಣೆ ಗೊಂಡಿತು.
ಕೇವಲ ಸರ್ಕಾರದ ಹಣ ಮಾತ್ರವಲ್ಲದೆ, ದಾನಿಗಳ ದಾನದ ಪ್ರಮಾಣ ಅಧಿಕವಾಗಿದೆ.
ಸಾರ್ವಜನಿಕ ಕಚೇರಿಗಳ ಒಳಗೆ ಹೋದರೆ ಹೋ ಇಲ್ಲಿ ಕೆಲಸ ಆಗುತ್ತವೆ ಎನ್ನುವ ಭರವಸೆ ಬರಬೇಕು. ಅದು ಕೇವಲ ಲಂಚವನ್ನು ವರ್ಗಾವಣೆ ಮಾಡುವ ಕೂಪವಾಗದೆ, ಸಾರ್ವಜನಿಕ ಹಿತಾಸಕ್ತಿಗೆ ದುಡಿಯುವ ದೇವಾಲಯವಾದರೆ ಚುನಾಯಿತ ಪ್ರತಿನಿಧಿಯ ಮೇಲೆ ನಂಬಿಕೆ ಹೆಚ್ಚುತ್ತದೆ.
ಒಬ್ಬ ಇಚ್ಛಾಶಕ್ತಿ ಹೊಂದಿರುವ ವ್ಯಕ್ತಿ ಜನಸೇವೆಗಾಗಿಯೇ ತನ್ನನ್ನು ಸಮರ್ಪಿಸಿಕೊಂಡಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ.
ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದರು, ಅಲ್ಲಿಗೆ ಹೋದಮೇಲೆ ಎನ್ನಿಸಿದ್ದು ನಮ್ಮೂರಿಗೆ ಸೇರಲ್ಪಡುವ ಗ್ರಾಮ ಸೌಧವೂ ಇದೇ ಮಾದರಿಯಲ್ಲಿ ಆಗಬೇಕು ಅಂತ.

ಶಶಿ ಸನಾತನ.

ಆಲ್ದೂರು…

About Author

Leave a Reply

Your email address will not be published. Required fields are marked *