लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
21/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪುನರ್ವಸತಿ ಕೇಂದ್ರವಾಯ್ತೇ ಭದ್ರಾ ಅಭಯಾರಣ್ಯ ‎ಚಿಕ್ಕಮಗಳೂರು: ರಾಜ್ಯದಲ್ಲಿ ಎಲ್ಲೇ ವನ್ಯಜೀವಿಗಳನ್ನು ಸೆರೆಹಿಡಿದರೂ ಅವುಗಳನ್ನು ಬಿಡಲು ಭದ್ರ ಅಭಯಾರಣ್ಯ ಪುನರ್ವಸತಿ ಕೇಂದ್ರವೇ?

1 min read

ಪುನರ್ವಸತಿ ಕೇಂದ್ರವಾಯ್ತೇ ಭದ್ರಾ ಅಭಯಾರಣ್ಯ
‎ಚಿಕ್ಕಮಗಳೂರು: ರಾಜ್ಯದಲ್ಲಿ ಎಲ್ಲೇ ವನ್ಯಜೀವಿಗಳನ್ನು ಸೆರೆಹಿಡಿದರೂ ಅವುಗಳನ್ನು ಬಿಡಲು ಭದ್ರ ಅಭಯಾರಣ್ಯ ಪುನರ್ವಸತಿ ಕೇಂದ್ರವೇ? ಈ ಹಿಂದೆ ಕರಡಿ ಹಾಗೂ ಹುಲಿಗಳನ್ನು ತಂದು ಭದ್ರಾ ಅಭಯಾಣ್ಯದಲ್ಲಿ ಬಿಟ್ಟು ಅವುಗಳ ಜೀವಕ್ಕೆ ಸಂಚಕಾರ ತರಲಾಗಿತ್ತು. ಇದೀಗ ಆ ಕಾಡಿಗೆ ಕಾಡಾನೆಗಳನ್ನು ತಂದು ಬಿಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾಮಾಜಿಕ ಹೋರಾಟಗಾರ ಹೊಲದಗದ್ದೆ ಗಿರೀಶ್ ಪ್ರಶ್ನಿಸಿದ್ದಾರೆ.
‎ಬೇಲೂರು ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ಇಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದರು. ಹೀಗಾಗಿ ಕಾಡಾನೆಗಳನ್ನು ಭದ್ರ ಅಭಯಾರಣ್ಯಕ್ಕೆ ಹಸ್ತಾಂತರಿಸುವ ಬಗ್ಗೆ ಪ್ರಸ್ತಾಪ ಅರಣ್ಯ ಇಲಾಖೆ ಮುಂದಿದೆ. ಆದರೆ ಭದ್ರ ಅಭಯಾರಣ್ಯದಲ್ಲಿ ಇರುವ ಆನೆಗಳಿಗೆ ಸೂಕ್ತ ಆಹಾರವಿಲ್ಲ. ಹೀಗಿರುವಾಗ ಹೊಸ ಆನೆಗಳನ್ನು ಇಲ್ಲಿಗೆ ತಂದು ಬಿಟ್ಟಾಗ ಸಮಸ್ಯೆ ಬಿಗಡಾಯಿಸುವುದು ಅನಿವಾರ್ಯವಾಗಲಿದೆ. ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಮಾಡುತ್ತೇವೆ ಎಂದು ಅರಣ್ಯ ಇಲಾಖೆ ಘೋಷಣೆ ಮಾಡಿರುವುದೇ ಇದೆಲ್ಲವಕ್ಕೂ ಮೂಲವೇ ಎನ್ನುವ ಅನುಮಾನ ಕಾಡಲಾರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಬೇರೆ ಪ್ರದೇಶದ ಆನೆಗಳನ್ನು ಭದ್ರ ಅಭಯಾರಣ್ಯಕ್ಕೆ ಅಟ್ಟಿದಲ್ಲಿ ಇಲ್ಲಿರುವ ಆನೆಗಳ ಜೊತೆ ಸಂಘರ್ಷ ಹೆಚ್ಚಾಗಿ ಆನೆಗಳು ಕಾಡಿನಿಂದ ಹೊರಬಂದು ಜನರಿಗೆ ಸಮಸ್ಯೆ ಮಾಡುವ ಸಾಧ್ಯತೆ ಹೆಚ್ಚಿದೆ. ಭದ್ರ ಅಭಯಾರಣ್ಯದಲ್ಲಿ ಈಗಿರುವ ಆನೆಗಳ ಜೊತೆಗೆ ಹೊಸ ಆನೆಗಳನ್ನು ತಂದು ಬಿಟ್ಟಲ್ಲಿ ಅವು ಸುರಕ್ಷಿತವಾಗಿರಲಿವೆಯೇ ಎಂಬ ಅನುಮಾನ ಪರಿಸರಾಸಕ್ತರಲ್ಲಿ ಮೂಡಿದೆ. ಇದರ ಮಧ್ಯೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಸನ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಆನೆಗಳನ್ನು ಭದ್ರ ಅಭಯಾರಣ್ಯಕ್ಕೆ ಹಸ್ತಾಂತರ ಮಾಡುತ್ತೇವೆ ಎಂದು ಹೇಳಿರುವ ಹೇಳಿಕೆ ಬಾಲಿಶವಾಗಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಹೇಳಿಕೆ ಹಿಂಪಡೆಯಲಿ. ಹಾಸನ ಉಸ್ತುವಾರಿ ಸಚಿವರಿಗೆ ಕಾಡು ಯಾವುದು ನಾಡು ಯಾವುದು ಎನ್ನುವುದು ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಆನೆಗಳ ಹಾವಳಿ ಅತಿ ಹೆಚ್ಚಾಗಿದೆ ಹೀಗಿರುವಾಗ ಯಾವುದೋ ಜಿಲ್ಲೆಯ ಆನೆಗಳನ್ನು ತಂದು ಚಿಕ್ಕಮಗಳೂರಿಗೆ ಬಿಡುವುದರಿಂದ ಇಲ್ಲಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಆನೆಗಳ ಹಾವಳಿ ಹೆಚ್ಚಾಗಲು ಕಾರಣೀಕರ್ತರು ಯಾರು ಎಂಬುದನ್ನು ಅರಣ್ಯ ಇಲಾಖೆ ಮೊದಲು ಯೋಚನೆ ಮಾಡಬೇಕಿದೆ. ಕಾಡಿನಲ್ಲಿ ಆಹಾರವಿಲ್ಲದೆ ಆನೆಗಳು ಸೇರಿದಂತೆ ವನ್ಯಜೀವಿಗಳು ನಾಡಿಗೆ ಬರುತ್ತಿವೆ. ಹೀಗಿರುವಾಗ ಆನೆಗಳಿಗೆ ಕಾಡಿನಲ್ಲಿ ಆಹಾರದ ವ್ಯವಸ್ಥೆ ಮಾಡಬೇಕಾದ ಜವಾಬ್ದಾರಿ ಅರಣ್ಯ ಇಲಾಖೆಯ ಜವಬ್ದಾರಿ ಎನ್ನುವುದನ್ನು ಮನಗಾಣಬೇಕಿದೆ ಎಂದು ಆಗ್ರಹಿಸಿದ್ದಾರೆ.
‎ಈಗಾಗಲೇ ಕಾಡುಕೋಣ ಹಾಗೂ ಕಾಡಾನೆ ದಾಳಿಯಿಂದ ಕಳೆದ ಎರಡು ವರ್ಷಗಳಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಟ್ಟರೆ ಸಾಕೇ‌. ಸಂತ್ರಸ್ಥ ಕುಟುಂಬದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು‌ ಇಲ್ಲದಿದ್ದಲ್ಲಿ ಇಡೀ ಬೆಳೆಗಾರರ ಸಮೂಹವವೇ ಹೋರಾಟ ನಡೆಸಲಿದೆ‌ ಎಂದು ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *