लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಯಾರಿಗೋ ತೊಂದರೆ ಕೊಡದೆ ತಮ್ಮಷ್ಟಕ್ಕೆ ತಾವಾಗಿ ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ಜೀವನ‌ ಮಾಡುತ್ತಿದ ಆ ಹಿರಿ ಜೋಡಿ ಇಂದು ಮಾಡದ ತಪ್ಪಿಗೆ ದೂರವಾಗಿದ್ದಾರೆ….

1 min read

‎ಒಬ್ಬ ಮಹಿಳೆ ಕಾಡಾನೆ ಮಾನವ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ..
‎ಯಾರಿಗೋ ತೊಂದರೆ ಕೊಡದೆ ತಮ್ಮಷ್ಟಕ್ಕೆ ತಾವಾಗಿ ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ಜೀವನ‌ ಮಾಡುತ್ತಿದ ಆ ಹಿರಿ ಜೋಡಿ ಇಂದು ಮಾಡದ ತಪ್ಪಿಗೆ ದೂರವಾಗಿದ್ದಾರೆ.
‎ಸಚಿವರಾದ ಕೆ.ಎಂ. ಶಿವಲಿಂಗಯ್ಯನವರೇ…
‎ಬೇಲೂರು ನಿಮ್ಮದೇ ಹಾಸನ ಜಿಲ್ಲೆಯ ಒಂದು ಕ್ಷೇತ್ರ ಮಾತ್ರ ಅಲ್ಲಾ ನೀವು ಶಾಸಕರಾಗಿ ಗೆದ್ದ ಅರಸೀಕೆರೆ ಕ್ಷೇತ್ರದ ಪಕ್ಕದ ಕ್ಷೇತ್ರ ಬೇಲೂರು..
‎
‎ನೀವು ನಮ್ಮ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಕ್ಕಿದೆ ಎ ಮಂಜು ರವರ ನಂತರ ನಮ್ಮದೇ ಜಿಲ್ಲೆಯ ಒಬ್ಬರು ಜಿಲ್ಲಾ ಉತ್ಸುವಾರಿ ಆಗಿದ್ದೀರ ಇದು ಜನ ನಿಮಗೆ ಕೊಟ್ಟ ಒಂದು ದೊಡ್ಡ ಕರ್ತವ್ಯ ಆದರೆ ನೀವು ಸಚಿವರಾದ ಮೇಲೆ ಮೊದಲು ಮಾಡಬೇಕಾಗಿದ್ದ ಕೆಲಸ ರೈತ ಪರ ಬಡವರ ಪರ ಕೆಲಸ ಅದರಲ್ಲಿ ಪ್ರಮುಖವಾದದ್ದು ಕಾಡಾನೆ ಮಾನವ ಸಂಘರ್ಷ.
‎
‎ಕೇವಲ 87 ಜನರ ಸಾವಲ್ಲ ಕಾಡಾನೆ ಸಮಸ್ಯೆಯಿಂದ ಲಕ್ಷಾಂತರ ಜನರ ಬದುಕು ಸಾವಿಗಿಂತ ಕಡೆಯಾಗಿದೆ..
‎
‎ಬೆಳೆ ಬೆಳೆಯಲು ಸಾದ್ಯವಾಗ್ತ ಇಲ್ಲಾ ಬೆಳೆದ ಬೆಳೆ ಆನೆಗಳು ನಾಶ ಮಾಡ್ತಾ ಇದ್ದಾವೆ ಕಾಫಿ ತೋಟಗಳನ್ನು ಕಿತ್ತು ಹಾಳು ಮಾಡುತ್ತಿವೆ ಇವೆಲ್ಲಾ ಸಮಸ್ಯೆಗಳನ್ನು ಬಿಟ್ಟು ನೀವು ಮತ್ತು ನಿಮ್ಮ ಅಧಿಕಾರಿಗಳು ಜನರಿಗೆ ಉಪಯೋಗಕ್ಕೆ ಬಾರದ ಕೆಲಸ ಮಾಡುವಲ್ಲಿ ಮಗ್ನರಾಗಿದ್ದೀರ..
‎
‎ಕಾಡಾನೆ ಶಾಶ್ವತ ಪರಿಹಾರಕ್ಕೆ ನೀವು ನಿಮಗೆ ಸಿಕ್ಕ ಅವಕಾಶದಲ್ಲಿ ಒಂದು ಸ್ವಲ್ಪ ವಾದರು ಪ್ರಯತ್ನಿಸಿ..
‎
‎ಇವತ್ತಿನ ಹೋರಾಟದ ಸಭೆಯಲ್ಲಿ ನನಗೆ ತಿಳಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಸಂಸದರು ಸಚಿವರು ಎಲ್ಲಾ ಸೇರಿಕೊಂಡು ಒಂದು ನಿಯೋಗ ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ನಮ್ಮ ಜನರಿಗೆ ಶಾಶ್ವತವಾಗಿ ಪರಿಹಾರ ಒದಗಿಸುವ ಕೆಲಸ ಮಾಡಿಕೊಡಬೇಕಿದೆ.
‎
‎ಕೇವಲ ಸಾವು ಅದಾಗ ಬಂದು ಚೆಕ್ ಕೊಟ್ಟು ಸಮಾಧಾನ ಪಡಿಸುವ ಕೆಲಸ ಆಗದೆ ಕರ್ನಾಟಕದಲ್ಲಿ ಇರುವ 6000 ಆನೆಗಳಲ್ಲಿ 5900 ಆನೆಗಳನ್ನು ನೀವು ಕಾಡುಗಳಲ್ಲಿ ರಕ್ಷಣೆ ಮಾಡಿ ನಮ್ಮ ಜಿಲ್ಲೆಯಲ್ಲಿರುವ 100 ಆನೆಗಳನ್ನು ಮಾತ್ರ ನಿಮಗೆ ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಅರ್ಥ ಏನು.
‎ಇದರ ಹಿಂದೆ ಯಾವ ಕಾಣದ ಕೈಗಳು ಕೆಲಸ ಮಾಡುತ್ತಿವೆ ತಿಳಿಸಿ.
‎
‎ಉತ್ತರ ಬೇಡ ಶಾಶ್ವತ ಪರಿಹಾರ ನೀಡಿ..
ಬಿಕ್ಕೋಡು ಸುತ್ತಮುತ್ತಲಿನಲ್ಲಿ ಪ್ರತಿ ದಿನ‌ ಕಾಡಾನೆ ಸಮಸ್ಯೆ ಇದೆ. ಬಂದು ಭೇಟಿ ನೀಡಿ ನಿಮ್ಮ ಅರಣ್ಯಾಧಿಕಾರಿಗಳು ಯಾವ ರೀತಿ ಕೆಲಸ ಮಾಡ್ತಾ ಇದ್ದಾರೆ ಪರೀಕ್ಷಿಸಿ. ಜನರ ಸಮಸ್ಯೆ ಸರ್ಕಾರಕ್ಕೆ ತಲುಪಿಸಿ ಅದನ್ನು ಮಾಡೋಕೆ ನಿಮ್ಮನ್ನು ಸರ್ಕಾರದ ಪ್ರತಿನಿಧಿಯಾಗಿ ಆಯ್ಕೆ ಮಾಡಿರೋದು..

About Author

More Stories

Leave a Reply

Your email address will not be published. Required fields are marked *

You may have missed