लाइव कैलेंडर

October 2026
M T W T F S S
 1234
567891011
12131415161718
19202122232425
262728293031  
31/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಉಸ್ತುವಾರಿ ಸಚಿವರು ಕೇವಲ ಧ್ವಜಾರೋಹಣಕ್ಕೆ ಸೀಮಿತ : ರಾಮೇಗೌಡ

1 min read

‎ಉಸ್ತುವಾರಿ ಸಚಿವರು ಕೇವಲ
ಧ್ವಜಾರೋಹಣಕ್ಕೆ ಸೀಮಿತ : ರಾಮೇಗೌಡ
‎
‎
‎ಚಿಕ್ಕಮಗಳೂರು: ಪಂಪ್‌ಸೆಟ್‌ಗಳಿಗೆ ಸಮರ್ಪಕ ಎಳು ಗಂಟೆಗಳ ಕೃಷಿ ವಿದ್ಯುತ್ ನೀಡಬೇಕು  ಹಾಗೂ ತಾಲೂಕಿನ ಅಂಬಳೆ ಹೋಬಳಿ ಕೆ.ಆರ್.ಪೇಟೆಗೆ ನಿರಂತರ ಜ್ಯೋತಿ ಯೋಜನೆಯ ಅನುಷ್ಠಾನ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷೀಯ ಮಂಡಳಿ ತಾಲ್ಲೂಕು ಸದಸ್ಯ ಡಿ.ರಾಮೇಗೌಡ ಒತ್ತಾಯಿಸಿದ್ದಾರೆ.
‎
‎ಈ ಕುರಿತು ಹೇಳಿಕೆಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಧ್ವಜಾರೋ ಹಣಕೆ ಮಾತ್ರ ಸೀಮಿತವಾದಂತಿದೆ. ರೈತರ ನೆಲ, ಜಲ ಹಾಗೂ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕೊಡದೇ ಮೂರ್ಖಪ್ರೇಕ್ಷಕರಾಗಿದ್ದಾರೆ ಎಂದು ದೂರಿದ್ದಾರೆ.
‎
‎ಜಿಲ್ಲಾ ಸಚಿವರು ಪ್ರತಿ ಸ್ವಾತಂತ್ರ್ಯ ದಿನಾಚರಣೆ, ಗಣ-ರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮಗಳಿಗೆ ಆಗಮಿಸಿ ಮನವಿಗಳನ್ನು ಸ್ವಿಕರಿಸುತ್ತಾರೆ. ಆದರೆ ಮನವಿಗಳ ಮೇಲೆ ಕ್ರಮವಿಲ್ಲ, ಅಧಿಕಾ-ರಿಗಳ ಸಭೆಯಿಲ್ಲ, ಸಮಸ್ಯೆಗಳ ಪರಿಹಾರಕ್ಕೆ ಕಾಲಮಿತಿಯಿಲ್ಲ. ಸಚಿವರಿಗೆ ಮನವಿ ಸಲ್ಲಿ ಸುವುದೇ ರೈತರ ಪಾಲಿಗೆ ಒಂದು   ಔಪಚಾರಿಕತೆಯಾಗಿದೆಯೇ ಎಂಬ ಪ್ರಶ್ನೆ ಮೂಡಿದೆ ಎಂದಿದ್ದಾರೆ.
‎
‎ಜಿಲ್ಲೆಯಲ್ಲಿ ಕಳೆದ 25 ವರ್ಷಗಳ ನೀರಾವರಿ ವೈಫಲ್ಯ, 10 ವರ್ಷಗಳ ನಿರಂತರ ಜ್ಯೋತಿ ಭರವಸೆ, ಕೃಷಿಗೆ ಸಮರ್ಪಕ ವಿದ್ಯುತ್ ಇಲ್ಲ, ಮನವಿಗಳಿಗೆ ಸ್ಪಂದನೆಯೂ ಇಲ್ಲ. ಕನ್ನಡ ನಾಡಿನ ನೆಲ, ಜಲ, ನುಡಿ ಮತ್ತು ಸಂಸ್ಕೃತಿಯ ರಕ್ಷಣೆಯಿಲ್ಲ. ಜಿಲ್ಲೆಯ ರೈತರ ಬದುಕಿನ ಮೂಲಭೂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹೋರಾಟವೇ ಒಂದು ದಾರಿ ಎಂದಿದ್ದಾರೆ.
‎
‎ಅಂಬಳೆ ಹೋಬಳಿ, ಮಳಲೂರು ಹಾಗೂ ಕೆ ಆರ್ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾವಣಿಗೆ ನಾಡಿನ ರೈತರ ಜೀವನಾಡಿಯಾಗಿದ್ದ ಅರಸನ ನಾಲೆಯೂ ಅವೈಜ್ಞಾನಿಕ ಕಾಮಗಾ-ರಿಗಳು ಹಾಗೂ ಹಾದಿಹಳ್ಳಿ ಭಾಗದ ರೈಲ್ವೆ ಕಾಮಗಾರಿಯಿಂದ ಅಡೆತಡೆ ಎದುರಿಸುತ್ತಿದೆ. ಸ್ವಾಭಾವಿಕ ನಾಲೆಯ ಹರಿವನ್ನು ಪುನಃಸ್ಥಾಪಿಸಿ ರೈತರ ಜಮೀನುಗಳಿಗೆ ನೀರು ತಲುಪಿಸುವ ಕೆಲಸವೂ ಆಗಿಲ್ಲ ಎಂದು ಹೇಳಿದ್ದಾರೆ.
‎
‎ಈ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕೇವಲ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಆಚರಣೆಗೆ ಸೀಮಿತಗೊಳಿಸದೆ, ಕೃಷಿ ಪರಿಕರಗಳ ಸ್ತಬ್ಧಚಿತ್ರಗಳು ಹಾಗೂ ನೂರಾರು ರೈತರ ಭಾಗವಹಿಸುವಿಕೆಯೊಂದಿಗೆ ನೆಲ, ಜಲ, ನಾಡು, ನುಡಿ ಮತ್ತು ರೈತ ಸಂಸ್ಕೃತಿಯ ಅಭಿಮಾನದ ಸಂಕೇತವಾಗಿ ಆಚ-ರಿಸಲಿದ್ದೇವೆಂದಿದ್ದಾರೆ.
‎
‎ಅಲ್ಲದೇ ಕಾಫಿ ಬೆಳೆಗಾರರ 10 ಹೆಚ್ ಪಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನಿರ್ಧಾರದ ಜಾರಿ ಮಾಡಬೇಕು, ಮಳಲೂರು ಏತ ನೀರಾವರಿ ಯೋಜನೆಯಿಂದ ತಕ್ಷಣ ಪ್ರಾಯೋಗಿಕ ನೀರು ಹರಿಸಬೇಕು ಬೆಳೆಗಳನ್ನು ಉಳಿಸಬೇಕು, ಅರಸನ ನಾಲೆಯ ಪುನಃಸ್ಥಾಪನೆ ಮಾಡಬೇಕು ಬೆಳೆಗಳನ್ನು ಉಳಿಸುವುದು, ಬರ ಪರಿಹಾರವನ್ನು ಸಣ್ಣ ಮತ್ತು ದೊಡ್ಡ ರೈತ ಎಂಬ ತಾರತಮ್ಯ ಇಲ್ಲದೆ ಎಲ್ಲಾ ರೈತರಿಗೂ “ರೈತರಿಗೂ ಎಕರೆವಾರು ಪಾವತಿಸಬೇಕು, ಬರಗಾಲದಿಂದ ತತ್ತರಿಸಿರುವ ರೈತರ ಬೆಳೆ ಸಾಲ ತಕ್ಷಣ ಮನ್ನಾ ಮಾಡಬೇಕು ಸೇರಿ ದಂತೆ ಕೃಷಿಕರ ವಿವಿಧ ಬೇಡಿಕೆಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ.

About Author

More Stories

1 min read

🏡 ಮಾಕೋಡು ಗ್ರಾಮಸ್ಥರ ಒಕ್ಕೂಟ ಮಾಕೋಡು ಗ್ರಾಮ, ಚಿಕ್ಕಮಗಳೂರು ಜಿಲ್ಲೆ ಒಗ್ಗಟ್ಟೇ ನಮ್ಮ ಶಕ್ತಿ – ಗ್ರಾಮಾಭಿವೃದ್ಧಿಯೇ ನಮ್ಮ ಗುರಿ ವಿಷಯ: ಗ್ರಾಮಸ್ಥರ ಸ್ವಂತ ಹಣದಲ್ಲಿ ರಸ್ತೆ ಕಾಮಗಾರಿ – ಜನಪ್ರತಿನಿಧಿಗಳಿಗೆ ಒಂದು ನೇರ ಸಂದೇಶ. ಜನಪ್ರತಿನಿಧಿಗಳಿಗೆ ಗ್ರಾಮಸ್ಥರ ನೇರ ಪ್ರಶ್ನೆ! ನಮ್ಮ ಮಾಕೋಡು ಊರಿನ ರಸ್ತೆ ಅಭಿವೃದ್ಧಿಗೆ ನಾವೇ ಹಣ ಹಾಕಬೇಕಾದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ! ಊರಿನ ಅಭಿವೃದ್ಧಿ ಮಾಡುವುದು ಜನಪ್ರತಿನಿಧಿಗಳ ಜವಾಬ್ದಾರಿಯೇ ಹೊರತು, ಗ್ರಾಮಸ್ಥರ ಮೇಲೆ ಹೊರೆಯಾಗಬೇಕಾದ ಕೆಲಸವಲ್ಲ. ಆದರೆ ಇಂದು ನಮ್ಮ ಊರಿನ ಗ್ರಾಮಸ್ಥರು ರಾಜಕಾರಣಿಗಳ ಸಹಾಯಕ್ಕಾಗಿ ಕಾಯದೆ, ತಮ್ಮ ಸ್ವಂತ ಕಷ್ಟದ ದುಡಿಮೆಯ ಹಣವನ್ನು ಒಟ್ಟುಗೂಡಿಸಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಇದು ಕೇವಲ ರಸ್ತೆ ನಿರ್ಮಾಣವಲ್ಲ; ನಮ್ಮ ಊರಿನ ಜನರ ಒಗ್ಗಟ್ಟು, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಸಂಕೇತವಾಗಿದೆ. ಚುನಾವಣೆಯ ಸಮಯದಲ್ಲಿ ಊರಿನ ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡುವವರು, ಇಂದು ಗ್ರಾಮಸ್ಥರು ತಮ್ಮ ಹಣದಿಂದ ರಸ್ತೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಾಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮ್ಮ ಪ್ರಶ್ನೆ ಇಷ್ಟೇ: 1. ಜನಪ್ರತಿನಿಧಿಗಳಿದ್ದರೂ ಗ್ರಾಮಸ್ಥರು ತಮ್ಮ ಹಣದಲ್ಲಿ ರಸ್ತೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಏಕೆ? 2. ಅಭಿವೃದ್ಧಿಗಾಗಿ ಮೀಸಲಾದ ಅನುದಾನಗಳು ಗ್ರಾಮಗಳಿಗೆ ತಲುಪುತ್ತಿವೆಯೇ? 3. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರವೇ? ನಾವು ಯಾರನ್ನೂ ಟೀಕಿಸುವ ಉದ್ದೇಶ ಹೊಂದಿಲ್ಲ. ಆದರೆ ನಮ್ಮ ಊರಿನ ಅಭಿವೃದ್ಧಿ ನಮ್ಮ ಹಕ್ಕು ಎಂಬುದನ್ನು ನೆನಪಿಸಲು ಬಯಸುತ್ತೇವೆ. ರಾಜಕಾರಣಿಗಳೇ, ನೆನಪಿರಲಿ… ನಮಗೆ ಬೇಕಿರುವುದು ಕೇವಲ ಚುನಾವಣೆಯ ಭರವಸೆಗಳಲ್ಲ; ನಮ್ಮ ಊರಿಗೆ ಉತ್ತಮ ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಮೂಲಭೂತ ಸೌಕರ್ಯಗಳು. ಗ್ರಾಮಸ್ಥರ ಒಗ್ಗಟ್ಟಿಗೆ ನಮ್ಮ ಸಲಾಂ. ತಮ್ಮ ಊರಿನ ಅಭಿವೃದ್ಧಿಗಾಗಿ ಸ್ವಂತ ಹಣವನ್ನು ಖರ್ಚು ಮಾಡುತ್ತಿರುವ ಪ್ರತಿಯೊಬ್ಬ ಗ್ರಾಮಸ್ಥರಿಗೂ ಹೃತ್ಪೂರ್ವಕ ಅಭಿನಂದನೆಗಳು. ಊರಿನ ಅಭಿವೃದ್ಧಿ ನಮ್ಮ ಹಕ್ಕು, ಜನರ ಸೇವೆ ಜನಪ್ರತಿನಿಧಿಗಳ ಕರ್ತವ್ಯ! ಇಂತಿ, ಮಾಕೋಡು ಗ್ರಾಮ…..

Leave a Reply

Your email address will not be published. Required fields are marked *

You may have missed