ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಸಾಧಕರು
1 min read
ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಸಾಧಕರು
ಚಿಕ್ಕಮಗಳೂರು: ಜಿಲ್ಲೆಯ ಗಣ್ಯ ಸಾದಕರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅನುಪಮ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರದ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಎಂ.ಬಿ. ಜಯಶಂಕರ್: ಚಿಕ್ಕಮಗಳೂ
ರಿನ ಶತಮಾನಕ್ಕೂ ಹೆಚ್ಚು ಹಳೆಯ ಕಾಫಿ ತೋಟಗಾರಿಕೆ ಪರಂಪರೆಯ ಕುಟುಂಬಕ್ಕೆ ಸೇರಿದ ಉದ್ಯಮಿ ಎಂ.ಬಿ. ಜಯಶಂಕರ್ ಅವರು ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಕೊಡುಗೆಗಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾಫಿ ತೋಟಗಾರಿಕೆಯ ಪರಂಪರೆಯ ಕುಟುಂಬದಲ್ಲಿ ಬೆಳೆದ ಜಯಶಂಕರ್ ಅವರು ಕೃಷಿ ವಿಜ್ಞಾನದಲ್ಲಿ ಪದವಿ ಹಾಗೂ ಎಂಬಿಎ ಶಿಕ್ಷಣ ಪಡೆದಿದ್ದಾರೆ. ಕುಟುಂಬದ ಉದ್ಯಮ ಪರಂಪರೆಯ ನಡುವೆಯೂ ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಸಂಕಲ್ಪದೊಂದಿಗೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ರವೇಶಿಸಿದರು.
1986ರಲ್ಲಿ ಬ್ರಿಗೇಡ್ ಗ್ರೂಪ್ ಸ್ಥಾಪಿಸುವ ಮೂಲಕ ಉದ್ಯಮ ಪಯಣ ಆರಂಭಿಸಿದ ಅವರು, ಸಣ್ಣ ಖಾಸಗಿ ಸಂಸ್ಥೆಯಾಗಿ ಆರಂಭವಾದ ಉದ್ಯಮವನ್ನು ಇಂದು ಬಹುಮುಖ ಉದ್ಯಮ ಸಮೂಹವಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

