लाइव कैलेंडर

October 2026
M T W T F S S
 1234
567891011
12131415161718
19202122232425
262728293031  
29/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

✍🏻ಬರಹ.

ಕವಯತ್ರಿ ಶೋಭಾ ಶ್ರೀಕಾಂತ್ ಪಾಟೀಲ್.

(SSP writer)

ದಾಂಡೇಲಿ,ಉತ್ತರ ಕನ್ನಡ.

ನಾನಾದೆ ಬಾನೆತ್ತರಕ್ಕೆ ಹಾರಾಡುವ ಹಕ್ಕಿಯಂತೆ

ಮಕ್ಕಳು ತಾಯಿಯನ್ನು

ಹಕ್ಕಿಯು ಗೂಡನ್ನು

ಬಿತ್ತಿದ ಬೆಳೆ ಮಳೆಯನ್ನು ಬಯಸುವಂತೆ …

ನಾನಾಗ ಬಯಸುವ

ಬಾನೆತ್ತರಕ್ಕೆ ಹಾರಾಡುವ ಹಕ್ಕಿಯಂತೆ…

ದೌರ್ಜನ್ಯವೆಂಬ ಸುಳಿಯಿಂದ

ಪಾರಾಗಲು ಅವಮಾನ, ಅನುಮಾನ ಬೆನ್ನಿಗಂಟಿ ಕಾಡದಿರಲು

ಸುಳ್ಳು, ಮೋಸ, ವಂಚನೆ, ಕಪಟವೆಂಬ

ಸಂಕೋಲೆಯಿಂದ ಬಿಡುಗಡೆ ಹೊಂದಲು

ಭಯ, ಆತಂಕ, ಸುಳಿಯದಿರಲು

ಧೈರ್ಯವೆಂಬ ಆತ್ಮ ವಿಶ್ವಾಸ ಮೂಡಲು

ನನ್ನಲ್ಲಿ ಜ್ಞಾನದ ಬೆಳಕು ಬೆಳಗಬೇಕಿದೆ ..

ಅದಕ್ಕೆ ಶಿಕ್ಷಣ ಒಂದೇ ಮಾರ್ಗವೆಂದು

ಛಲತೊಟ್ಟು ನಿಂತೆ…

ಕಡಲಿನಾಳದಲ್ಲಿ ಹೂತಿರುವ ಕನಸುಗಳೆಲ್ಲ

ಕಾರಂಜಿಯಂತೆ ಚಿಮ್ಮಿ

ಭೂಮಿಗೆ ಬೀಳುವ ಸಮಯದಲ್ಲಿ

ಅಂಜದೆ, ಅಳುಕದೆ, ತಲೆಬಾಗದೆ,

ಎನ್ನ ಅನ್ನವ ಸ್ವಯಂ ದುಡಿದು,

ಕೀಳಾಗಿ ನೋಡುವವರ

ಎದುರೇ, ನಿಂತು ಬದುಕಲು

ಜೀವನ ಮಾರ್ಗವ ತೋರಿದ

ತ್ರಿರತ್ನರಾದ ಎನ್ನ

‘ತಂದೆ’ ‘ ತಾಯಿ”ಗುರು’ಗಳಿಗೆ ಪುಣಾಮಗಳು…

ಈ ಹಣ್ಣು ಜೀವ ಬದುಕು ನಡೆಸಲು ಉದ್ಯೋಗವೆಂಬ ಆಧಾರ ಕೈ ಹಿಡಿದಿದೆ…

ಆತ್ಮ ಗೌರವ ಹೆಚ್ಚಿಸಿ

ಸ್ವಾಭಿಮಾನಿಯಂತೆ…

ತಲೆಯೆತ್ತಿ ಬದುಕಲು

ಕಾರಣಿಕೃತವಾಗಿ ಬೇರೂರಿದೆ …

ಈಗ ನಾನಾದೆ ಬಾನೆತ್ತರಕ್ಕೆ

ಹಾರಾಡುವ ಹಕ್ಕಿಯಂತೆ…

ಸಂಗ್ರಹ.

ಸಿದ್ದಿಕ್ ಚಕ್ಕಮಕ್ಕಿ.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

More Stories

Leave a Reply

Your email address will not be published. Required fields are marked *

You may have missed