ಭಾರತೀಯ ಬೌದ್ಧ ಮಹಾಸಭಾ ಮೂಡಿಗೆರೆ ವತಿಯಿಂದ ಧಮ್ಮ ಪರಿವರ್ತನ ದಿನ ಆಚರಣೆ…..
1 min read
ಭಾರತೀಯ ಬೌದ್ಧ ಮಹಾಸಭಾ ಮೂಡಿಗೆರೆ ವತಿಯಿಂದ ಧಮ್ಮ ಪರಿವರ್ತನ ದಿನ ಆಚರಣೆ.
ಮೂಡಿಗೆರೆ ಪಟ್ಟಣದ ಹೌಸಿಂಗ್ ಬೋರ್ಡ್ ಲೀ ಇರುವ ಜೈ ಭೀಮ್ ಹಾಲ್ ನಲ್ಲಿ ಬೌದ್ಧ ಮಹಾ ಸಭಾ ಮೂಡಿಗೆರೆ ಇವರ ವತಿಯಿಂದ ಧಮ್ಮ ಪರಿವರ್ತನ ದಿನ ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ನಿವೃತ್ತ ಶಿಕ್ಷಕರಾದ ಬಸವರಾಜ್ ರವರು ಉದ್ಘಾಟಿಸಿದರು
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ
ಮಹೇಂದ್ರ ಮೌರ್ಯ -ಬುದ್ಧರ ಸಂದೇಶಗಳನ್ನು ಗ್ರಾಮೀಣ ಮಟ್ಟದಲ್ಲಿ ತೆಗೆದುಕೊಂಡು ಹೋಗುವ ಮೂಲಕ ಬುದ್ಧರ ವಿಚಾರಗಳನ್ನು ಕೊಂಡೊಯ್ಯುವುದು ನಮ್ಮೆಲ್ಲರ ದೊಡ್ಡ ಜವಾಬ್ದಾರಿ ಆಗಿದೆ ಎಂದರು.
ಬೆಟ್ಟಗೆರೆ ಶಂಕರ್ ಮಾತನಾಡಿ ಬುದ್ಧರ ವಿಚಾರಗಳನ್ನು ಒಂದಷ್ಟು ಜನರಿಗೆ ತಲುಪಿಸುವಲ್ಲಿ ಡಿ ಎಸ್ ಎಸ್ ಕಾರ್ಯ ಶ್ಲಾಘನೀಯ ಅದರಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದು ಈಗಲೂ ಕೂಡ ಅಂತಹ ವಿಚಾರಗಳಿಗೆ ಯುವಕರನ್ನು ತಲುಪಿಸುವಂಥ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಆಗಬೇಕು ಎಂದರು.
ಪಿ ಕೆ ಮಂಜುನಾಥ್ ಮಾತನಾಡಿ
– ನನ್ನ ಬದುಕಿನಲ್ಲಿ ವೈಜ್ಞಾನಿಕತೆಗೆ ತೊಡಗಿಸಿಕೊಂಡಿದ್ದೇನೆ ಮೌಡತ್ಯತೆಯಿಂದ ದೂರ ಇದ್ದೇನೆ ಎಂದು ಹೇಳುತ್ತಾ ಇಂದು ಸಮಾಜದಲ್ಲಿ ಅಶಾಂತಿ ಉದ್ಭವಾಗಿದೆ ಅಂದರೆ ಅದಕ್ಕೆ ಕಾರಣ ಬುದ್ಧ ಧಮ್ಮವನ್ನು ಅಲ್ಲಿರುವ ವಿಚಾರಗಳನ್ನು ಸಮಾಜಕ್ಕೆ ಅರ್ಥ ಮಾಡಿಸುವ ಕೆಲಸವಾಗಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ಭಾರತೀಯ ಬೌದ್ಧ ಮಹಾಸಭಾ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದರು.
ಬುದ್ಧ ವಂದನೆಯನ್ನು ಫಲ್ಗುಣಿ ಜಗದೀಶ್ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಬೌದ್ಧ ಮಹಾಸಭಾ ಮೂಡಿಗೆರೆ ಇದರ ಅಧ್ಯಕ್ಷರಾದ ಎಸ್ ಬಿ ಹಾಲಯ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾವಿತ್ರಿ ಮಹೇಂದ್ರ ಮೌರ್ಯ, ಶೇಖರ್ , ಬಿ. ಪಿ ಮಂಜುನಾಥ್, ಲಕ್ಷ್ಮಣ್ ದೊಡ್ಡಯ್ಯ, ನಾಗೇಶ್ ಯು ಬಿ, ನಾಗರಾಜ್, ರವೀಂದ್ರ , ಜೈಪಾಲ್, ಸಂದೀಪ , ಸುಂದರೇಶ್, ಕುಮಾರ್, ಬಕ್ಕಿ ಮಂಜುನಾಥ್ . ಇದ್ದರು

