लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಾವು ಭಾಷೆ ಕಲಿಯುವುದರಿಂದ ಭಾಷೆಗೆ ಆಗುವ ಲಾಭಕ್ಕಿಂತ ನಮಗೆ ಆಗುವ ಲಾಭವೇ ಹೆಚ್ಚು, ಇಂಗ್ಲೀಷ್ ಒಂದು ಭಾಷೆ ಅಷ್ಟೇ,ಈ ಇಂಗ್ಲೀಷ್ ಭಾಷೆಯಲ್ಲಿ ಜಗತ್ತಿನ ಸಂಪೂರ್ಣ ಜ್ಞಾನವೆಲ್ಲವು ಅಡಗಿಲ್ಲ ,…

1 min read

ಅವಿನ್ ಟಿವಿ ಸುದ್ದಿಜಾಲ ✍️:
ನಾವು ಭಾಷೆ ಕಲಿಯುವುದರಿಂದ ಭಾಷೆಗೆ ಆಗುವ ಲಾಭಕ್ಕಿಂತ ನಮಗೆ ಆಗುವ ಲಾಭವೇ ಹೆಚ್ಚು, ಇಂಗ್ಲೀಷ್ ಒಂದು ಭಾಷೆ ಅಷ್ಟೇ,ಈ ಇಂಗ್ಲೀಷ್ ಭಾಷೆಯಲ್ಲಿ ಜಗತ್ತಿನ ಸಂಪೂರ್ಣ ಜ್ಞಾನವೆಲ್ಲವು ಅಡಗಿಲ್ಲ ,

ಅಣ್ಣನ ನೆನಪು ಪುಸ್ತಕದಲ್ಲಿ ಭಾಷೆ ಕುರಿತು ಪೂಚಂತೇ ಅವರು ದಾಖಲಿಸಿರುವ ಈ ಕೆಳಕಂಡ ಸಾಲುಗಳು ನ್ಯೂಸ್ ಕಿಂಗ್ ಓದುಗರಿಗಾಗಿ….
•••••••••••••••••
ನೀನು ಇಂಗ್ಲಿಷ್ ಚೆನ್ನಾಗಿ ಕಲಿಯಬೇಕಾಗಿರುವುದು ನಿನ್ನ ಅಗತ್ಯಕ್ಕಾಗೇ ಹೊರತು, ಇಂಗ್ಲಿಷಿನವರ ಅಗತ್ಯಕ್ಕಾಗಿ ಅಲ್ಲ. ನಿನಗೆ ಅದರಲ್ಲಿರುವ ಪ್ರಪಂಚದ ಜ್ಞಾನವೆಲ್ಲಾ ಬೇಕಾದರೆ ಈ ಸಬೂಬುಗಳನ್ನೆಲ್ಲಾ ಬಿಟ್ಟು ಕಷ್ಟಪಟ್ಟು ಕಲಿ. ಅದು ಬಿಟ್ಟು ಕನ್ನಡದಲ್ಲೇ ಎಲ್ಲಾ ಇದೆ ಎಂದು ತಿಳಿದು ಕೂಪಮಂಡೂಕ ಆಗಬೇಡ. ಬೇಕಾದಷ್ಟು ಜನ ಕನ್ನಡ ಪಂಡಿತರು ಪೋಲಿ ಜೋಕುಗಳನ್ನು ಮಾಡಿಕೊಂಡು ಪಾಠ ಮಾಡುತ್ತಾ ಕಾಲೇಜಿನ ಕೋಡಂಗಿಗಳಾಗಿ ಕಾಲಯಾಪನೆ ಮಾಡುತ್ತಿರುವುದಕ್ಕೆ ಕಾರಣ ಈ ರೀತಿಯ ಹುಸಿ ಪಾಂಡಿತ್ಯ.

ಕನ್ನಡದಲ್ಲಿ ಏನೂ ಇಲ್ಲ ಎಂದು ತಿಳಿಯುವುದಕ್ಕಿಂತ, ಕನ್ನಡದಲ್ಲಿ ಎಲ್ಲಾ ಇದೆ ಎಂದು ತಿಳಿಯುವುದು ಸಾಹಿತ್ಯದ ವಿದ್ಯಾರ್ಥಿಗಳಿಗೆ ಹೆಚ್ಚು ಅಪಾಯಕಾರಿಯಾದ ಮೌಢ್ಯ. ಇಂಗ್ಲಿಷರು ಸಹ ತಮ್ಮ ಭಾಷೆ ಕುರಿತು ಇಂಥ ಮಾತುಗಳನ್ನಾಡುವುದಿಲ್ಲ. ಯಾವ ಭಾಷೆಯಲ್ಲೂ ಎಲ್ಲಾ ಇದೆ ಎಂದು ತಿಳಿಯುವವನು ಮೂರ್ಖ” ಎಂದರು.

ಇಡೀ ಜೀವಮಾನವನ್ನೇ ಕನ್ನಡಕ್ಕೆ ಮುಡುಪಾಗಿಟ್ಟ ಅಣ್ಣ (ಕುವೆಂಪು) ಅವತ್ತು ನನಗೆ ಹೇಳಿದ ಮಾತುಗಳನ್ನು ಆ ಸನ್ನಿವೇಶದಿಂದ ಪ್ರತ್ಯೇಕಿಸಿ ನೋಡಿದರೆ ಕನ್ನಡದ ದ್ವೇಷಿ ಎಂದೇ ತಿಳಿದುಬಿಡಬಹುದೇನೋ! ಭಾಷೆಯ ಬಗ್ಗೆ, ಸಾಹಿತ್ಯದ ಬಗ್ಗೆ ಯಾವ ಸಂದರ್ಭದಲ್ಲೂ ಅಂಧಾಭಿಮಾನಕ್ಕೆ ಬಲಿಯಾಗದೆ ವಿವೇಕಯುತ ವಿವೇಚನೆ ಮಾಡುತ್ತಿದ್ದುದ್ದಕ್ಕೆ ಅಣ್ಣನ ಅವತ್ತಿನ ಮಾತುಗಳು ನನಗೆ ಸಾಕ್ಷಿಯಾಗಿವೆ.

ಉಲ್ಲೇಖ: -‘ಇಂಗ್ಲಿಷ್ ಕಾಟ’ (ಅಧ್ಯಾಯ- 32)
ಕೃಪೆ: -‘ಅಣ್ಣನ ನೆನಪು’ (1996)
•••••••••••••ಸಂಗ್ರಹ
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

More Stories

Leave a Reply

Your email address will not be published. Required fields are marked *

You may have missed