ಸಾರಿಗೆ ನೌಕರರ ಮುಷ್ಕರ ಅಂತ್ಯ! ಕೋಡಿಹಳ್ಳಿ ಇಲ್ಲದೆಯೇ ಸಂಧಾನ ಸಕ್ಸಸ್! ರಾತ್ರಿಯಿಂದಲೇ ಬಸ್ ಓಡಾಟ! #avintvcom
1 min read
ಸಾರಿಗೆ ನೌಕರರ ಮುಷ್ಕರ ಅಂತ್ಯ! ಕೋಡಿಹಳ್ಳಿ ಇಲ್ಲದೆಯೇ ಸಂಧಾನ ಸಕ್ಸಸ್! ರಾತ್ರಿಯಿಂದಲೇ ಬಸ್ ಓಡಾಟ!
ಸಾರಿಗೆ ನೌಕರರ ಮುಷ್ಕರ ಅಂತ್ಯ! ಇಲ್ಲದೆಯೇ ಸಂಧಾನ ಸಕ್ಸಸ್! ಇವತ್ತು ರಾತ್ರಿಯಿಂದಲೇ ಬಸ್ ಓಡಾಟ!
ಬೆಂಗಳೂರು-ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿದೆ. ಸರ್ಕಾರ ಪ್ರಮುಖ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿದೆ. ಆರನೇ ವೇತನ ಜಾರಿಗೆ ಸಮ್ಮತಿ ಸೂಚಿಸಿದ ಸರ್ಕಾರ, ನೌಕರರ ಮನವೋಲಿಸುವಲ್ಲಿ ಸಫಲವಾಗಿದೆ.
ಇಂದು ರಾತ್ರಿಯಿಂದಲೇ ಓಡಲಿದೆ ಸರ್ಕಾರಿ ಬಸ್
ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರಕ್ಕೆ ಬ್ರೇಕ್ ಬಿದ್ದಿದೆ. ಸಾರಿಗೆ ನೌಕರರರ ಮುಖಂಡರು ಮತ್ತು ಯೂನಿಯರ್ ಲೀಡರ್ಸ್ ಜೊತೆಗಿನ ಮಾತುಕತೆ ಮುಕ್ತಾಯವಾಗಿದ್ದು, ಸಭೆಯಲ್ಲಿ ನೌಕರರ ಕೆಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಮ್ಮತಿ
ಕರೊನಾದಿಂದ ಮೃತಪಟ್ಟವರಿಗೆ ಮೂವತ್ತು ಲಕ್ಷ
ದೊಡ್ಡ ಬೇಡಿಕೆ ಹೊರತುಪಡಿಸಿ ಉಳಿದ ಬೇಡಿಕೆ ಈಡೇರಿಸಲು ಒಪ್ಪಿಗೆ
ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಮನಸ್ಸು ಮಾಡಿದೆ. 2020ರಲ್ಲಿ ಹೆಚ್ಚಾದ ವೇತನವನ್ನು ಪಾವತಿಸುವ ಬಗ್ಗೆಯೂ ಸಕಾರಾತ್ಮಕ ಮಾತುಕತೆ ನಡೆದಿದೆ.. ಜೊತೆಗೆ ಕರೊನಾದಿಂದ ವಿಧಿವಶರಾದ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ನೀಡುವ ಬೇಡಿಕೆಗೂ ಒಪ್ಪಿಗೆ ಸೂಚಿಸಿದೆ.
ಎನ್ ಐ ಎನ್ ಸಿ ಯೋಜನೆ ರದ್ದು ಪಡಿಸುವ ಬೇಡಿಕೆಗೆ ಒಪ್ಪಿಗೆ ಸೂಚಿಸಿದೆ. ಆರನೇ ವೇತನ ಜಾರಿಗೆ ತರುವುದಕ್ಕೂ ಕೂಡ ಸರ್ಕಾರ ಒಪ್ಪಿಗೆ ಸೂಚಿಸಿದೆ. ಸಾರಿಗೆ ನೌಕರರ ಕಿರುಕುಳ ತಡೆಯಲು ವಿಶೇಷ ಕ್ರಮ ತರಲು ಒಪ್ಪಿಗೆ. ತರಭೇತಿ ಅವಧಿ ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಕೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಅಂತರ ನಿಗಮ ವರ್ಗಾವಣೆ ಮಾಡುವಾಗ ಆಗುವ ತೊಂದರೆಗಳನ್ನು ಸರಿಪಡಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಸರ್ಕಾರಿ ನೌಕರರನ್ನಾಗಿಸುವ ಬೇಡಿಕೆಗಿಲ್ಲ