लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
27/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆಲ್ದೂರಿನಲ್ಲಿ ಪ್ರವಾದಿ ಮುಹಮ್ಮದ್ ಅವರ 1501ನೇ ಈದ್ ಮಿಲಾದ್ ಸಂಭ್ರಮ….

1 min read

ಆಲ್ದೂರಿನಲ್ಲಿ ಪ್ರವಾದಿ ಮುಹಮ್ಮದ್ ಅವರ 1501ನೇ ಈದ್ ಮಿಲಾದ್ ಸಂಭ್ರಮ


ಆಲ್ದೂರು:
ಆಲ್ದೂರಿನಲ್ಲಿ ಪ್ರವಾದಿ ಹಜರತ್ ಮುಹಮ್ಮದ್ ಅವರ 1501ನೇ ಈದ್ ಮಿಲಾದ್ ಅಂಗವಾಗಿ ಜಾಮಿಯಾ ಮಸೀದಿ ವತಿಯಿಂದ ಮೆರವಣಿಗೆಯನ್ನು ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ನಡೆಸಲಾಯಿತು.

ಜಾಮಿಯಾ ಮಸೀದಿಯ ಕಬರಸ್ತಾನದಲ್ಲಿ ಕುರಾನ್ ಪಟ್ಟಣದ ಬಳಿಕ ಆರಂಭಗೊಂಡ ಮೆರವಣಿಗೆಯು ಪ್ರವಾದಿ ಮುಹಮ್ಮದ್ ರವರ ಜೀವನ, ಶಾಂತಿ, ಸಹೋದರತ್ವ, ಮಾನವೀಯತೆ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ಸಾರುತ್ತಾ ಆಲ್ದೂರಿನ ರಾಜ ಬೀದಿಗಳಲ್ಲಿ ಸಾಗಿತು. ಬಳಿಕ ವಗರ್ ರಸ್ತೆಯಲ್ಲಿರುವ ನೂರಾನಿ ಅರಬಿ ಮದ್ರಸ ತಲುಪಿ, ಅಲ್ಲಿಂದ ಮದೀನಾ ಮಸೀದಿ ಕಬರಸ್ತಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ನಂತರ ಮೆರವಣಿಗೆಯು ಆಲ್ದೂರು ಜಾಮಿಯಾ ಶಾದಿ ಮಹಲ್‌ವರೆಗೆ ಸಾಗಿಬಂದು ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಗುರುಗಳಾದ ನಸೀಮ್ ಶಾ ಅವರು ಪ್ರವಾದಿ ಮುಹಮ್ಮದ್ ಅವರ ಪವಿತ್ರ ಜೀವನ ಚರಿತ್ರೆ ಹಾಗೂ ಅವರು ಸಾರಿದ ಶಾಂತಿ, ಪ್ರೀತಿ, ಸಹೋದರತ್ವ ಮತ್ತು ಮಾನವೀಯತೆಯ ಸಂದೇಶಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮದೀನಾ ಮಸೀದಿಯ ಗುರುಗಳಾದ ಗುಲಾಮ್ ರಝಾ, ಹಂಝತುಲ್ ಕರ್ರಾರ್ ಜುಮ್ಮಾ ಮಸೀದಿಯ ಇಮ್ತಿಯಾಜ್ ಸಾಕಾಫಿ, ಅಬೂಬಕ್ಕರ್ ಸಿದ್ದೀಕ್, ಜಾಮಿಯಾ ಮಸೀದಿ ಅಧ್ಯಕ್ಷರಾದ ಇಕ್ಬಾಲ್ ಸಾಬ್,ಮದೀನಾ ಮಸೀದಿ ಅಧ್ಯಕ್ಷರಾದ ಅಫ್ಜಲ್ ಪಾಷಾ ಹಾಗೂ ಹಂಸತುಲ್ ಕರ್ರಾರ್ ಮಸೀದಿ ಅಧ್ಯಕ್ಷ ಹ ಅಚ್ಚು ಸೇರಿದಂತೆ ಧಾರ್ಮಿಕ ಮುಖಂಡರು, ಮಸೀದಿ ಆಡಳಿತ ಮಂಡಳಿ ಸದಸ್ಯರು ಸಮುದಾಯದ ಭಕ್ತಾದಿಗಳು ಭಾಗವಹಿಸಿದ್ದರು.

About Author

More Stories

Leave a Reply

Your email address will not be published. Required fields are marked *

You may have missed