लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಧಾರವಾಡ ಸಿಬಿಟಿಯಲ್ಲಿ ಕೊರೊನಾ ವೈರಾಣು ವೇಷಧಾರಿ! ಮಾಸ್ಕ್ ಧರಿಸಲು ಸಾರ್ವಜನಿಕರಿಗೆ ಜಾಗೃತಿ #avintvcom

1 min read
Featured Video Play Icon

ಸಿಬಿಟಿಯಲ್ಲಿ ಕೊರೊನಾ ವೈರಾಣು ವೇಷಧಾರಿ! ಮಾಸ್ಕ್ ಧರಿಸಲು ಸಾರ್ವಜನಿಕರಿಗೆ ಜಾಗೃತಿ

ಧಾರವಾಡ  ಕೊರೊನಾ ವೈರಾಣು ನಿಯಂತ್ರಣಕ್ಕೆ ಮಾಸ್ಕ್ ಧರಿಸುವಿಕೆ , ದೈಹಿಕ ಅಂತರ ಪಾಲನೆ ಅತ್ಯಗತ್ಯ. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ನಿರಂತರ ಪ್ರಯತ್ನ ಮಾಡುತ್ತಿವೆ. ಜಾಗೃತಿ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿಸಲು ಕೊರೊನಾ ವೈರಾಣು ವೇಷಧಾರಿಯೊಬ್ಬರು ಇಂದು ಸಿಬಿಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡರು.

ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಅವರ ಪರಿಕಲ್ಪನೆಯಲ್ಲಿ ಈ ಕಾರ್ಯ ಕೈಗೊಂಡಿದ್ದು, ಪ್ರತಿನಿತ್ಯ ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸುವ ಕಾರ್ಯಾಚರಣೆ ವೇಳೆಯಲ್ಲಿ ಕಲಾವಿದರೊಬ್ಬರನ್ನು ಬಳಸಿಕೊಂಡು ಅವರಿಗೆ ಕೊರೊನಾ ವೈರಾಣು ವೇಷ ಹಾಕಿಸಿ, ಜನ ನಿಬಿಡ ಸ್ಥಳಗಳಲ್ಲಿ ಹಠಾತ್ ಕಳಿಸಿ, ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೋವಿಡ್ ತಪಾಸಣೆಗೆ ಕರೆತರುವ ಕಾರ್ಯಾಚರಣೆ ಇಂದಿನಿಂದ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ.

ನಾದಝೇಂಕಾರ ಸಂಸ್ಥೆಯ ಯಮನಪ್ಪ ಜಾಲಗಾರ ಅವರು ತಮ್ಮ ತಂಡದ ಬಸವರಾಜ ಗುಡ್ಡಪ್ಪನವರ ಅವರಿಗೆ ಕೊರೊನಾ ವೇಷ ತೊಡಿಸಿ , ಜನರ ಮಧ್ಯೆ ಕಳಿಸುತ್ತಿದ್ದಾರೆ. ಪ್ರಸಾದನ ಕಲಾವಿದ ಸಂತೋಷ ಮಹಾಲೆ ಈ ವೇಷ ಭೂಷಣ ಸಿದ್ಧಪಡಿಸಿದ್ದಾರೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author