लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಿವೃತ್ತಿ, ‎ಜೀವನದ ಅಂತ್ಯವಲ್ಲ-ಮತ್ತೊಂದು ಸುಂದರ ಅಧ್ಯಾಯದ ಆರಂಭ….

1 min read

ನಿವೃತ್ತಿ,
‎ಜೀವನದ ಅಂತ್ಯವಲ್ಲ-ಮತ್ತೊಂದು ಸುಂದರ ಅಧ್ಯಾಯದ ಆರಂಭ
‎ ನಿವೃತ್ತಿ ಜೀವನದ ಅಂತ್ಯವಲ್ಲ, ಅದು ಮತ್ತೊಂದು ಸುಂದರ ಅಧ್ಯಾಯದ ಆರಂಭ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.

‎ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಡಾ.ಕೆ.ಎನ್. ಲಕ್ಷ್ಮಿಕಾಂತ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‎
‎ಉದ್ಯೋಗಸ್ಥರಿಗೆ ನಿವೃತ್ತಿ ಮತ್ತು ವರ್ಗಾವಣೆ ಎನ್ನುವ ನೆರಳು ಸದಾ ಹಿಂಬಾಲಿಸುತ್ತಿರುತ್ತದೆ. ವೃತ್ತಿಗೆ ನಿವೃತ್ತಿ ಇದೆ, ಆದರೆ ಪ್ರವೃತ್ತಿಗೆ ನಿವೃತ್ತಿ ಇಲ್ಲ, ಇದನ್ನು ನಿವೃತ್ತಿ ಹೊಂದುವವರು ಅರ್ಥ ಮಾಡಿಕೊಂಡು ಮುಂದಿನ ಜೀವನವನ್ನು ಸಮಾಜಮುಖಿಗಳಾಗಿ ಕಳೆಯಬೇಕು ಎಂದು ಕಿವಿ ಮಾತು ಹೇಳಿದರು.
‎
‎ಲಕ್ಷ್ಮಿಕಾಂತ್ ಅವರಿಗೆ ಪ್ರಾಂಶುಪಾಲರಾಗುವ ಎಲ್ಲಾ ಅರ್ಹತೆಗಳೂ ಇದ್ದವು, ಆ ಅಧಿಕಾರವಿಲ್ಲದೆಯೂ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.
‎
ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಶಿಕ್ಷಕರ ಕೈಯಲ್ಲಿ ಇಡೀ ಸಮಾಜದ, ದೇಶದ ಹಿತವಿರುತ್ತದೆ, ಅವರು ಕಲಿಸುವ ಪಾಠದ ಮೇಲೆ ದೇಶದ ಭವಿಷ್ಯ ಅಡಗಿರುತ್ತದೆ ಎಂದರು.ಲಕ್ಷ್ಮೀಕಾಂತ್ ಸಾಮಾಜಿ-ಕವಾಗಿ, ಶೈಕ್ಷಣಿಕವಾಗಿ ಸಾರ್ಥಕವಾದ ಸೇವೆಯನ್ನು ಅವರು ಸಲ್ಲಿಸಿದ್ದಾರೆ. ಅವರು ಸದಾ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.

‎ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣಗೌಡ ಮಾತನಾಡಿ, ಜಗತ್ತಿನಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸಬೇಕಾದರೆ ಶಿಕ್ಷಕರು ಮಕ್ಕಳಿಗೆ ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳನ್ನೂ ಕಲಿಸಬೇಕು, ಆ ಕೆಲಸವನ್ನು ಲಕ್ಷ್ಮಿಕಾಂತ್ ಅವರು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದು ತಿಳಿಸಿದರು.
‎
‎ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಡಿ.ಎಂ. ಮಂಜುನಾಥಸ್ವಾಮಿ 32 ವರ್ಷಗಳ ಸೇವಾವಧಿಯಲ್ಲಿ ಲಕ್ಷ್ಮೀಕಾಂತ್ ಅವರು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಪ್ರಾಧ್ಯಾಪಕರ ಹುದ್ದೆ ನಿಭಾಯಿಸುವುದರ ಜೊತೆಗೆ ಸಾಹಿತಿಯಾಗಿ, ಸಂಘಟಕರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ, ಗೌರವಗಳಿಗೆ ಪಾತ್ರರಾಗಿದ್ದಾರೆ ಎಂದರು.
‎
‎ಸೇವೆಯಿಂದ ನಿವೃತ್ತರಾದ ಡಾ:ಕೆ.ಎನ್. ಲಕ್ಷ್ಮಿಕಾಂತ್ ದಂಪತಿಯನ್ನು ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಒಡನಾಡಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.
‎
‎ಸನ್ಮಾನ ಸ್ವೀಕರಿಸಿ ಮಾತನಾಡಿದ ಎನ್.ಲಕ್ಷ್ಮಿಕಾಂತ್ ಮೂರು ದಶಕಗಳ ಪ್ರಾಧ್ಯಾಪಕ ವೃತ್ತಿ ತಮಗೆ ಅತ್ಯಂತ ತೃಪ್ತಿ ಮತ್ತು ಸಾರ್ಥಕತೆ ತಂದಿದೆ. ಕಾಲೇಜಿನಲ್ಲಿ ಪ್ರಾಂಶುಪಾಲರ ಹುದ್ದೆಯೊಂದನ್ನು ಬಿಟ್ಟು ಉಳಿದ ಎಲ್ಲಾ ಕೆಲಸಗಳನ್ನೂ ಮಾಡಿದ್ದೇನೆ ಎಂದು ತಿಳಿಸಿದರು.
‎
‎ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು, ಸಹ ಪ್ರಾಧ್ಯಾಪಕಿ ಎ.ಆ‌ರ್.ಸುಧಾ ಅಭಿನಂದನಾ ನುಡಿಗಳನ್ನಾಡಿದರು. ಪ್ರಾಂಶುಪಾಲ ಎಚ್.ಎಂ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು, ಸಾಹಿತಿಗಳಾದ ಹಳೆಕೋಟೆ ರಮೇಶ್, ಕುಂದೂರು ಅಶೋಕ್, ಡಾ. ಬೆಳವಾಡಿ ಮಂಜುನಾಥ್, ಸಿಪಿಐ ಮುಖಂಡರಾದ ರಾಧಾ ಸುಂದರೇಶ್, ಪಲ್ಲವಿ ರವಿ ಮಾತನಾಡಿದರು.
‎
ಲಕ್ಷ್ಮೀಕಾಂತ್ ಅವರ ಪತ್ನಿ ಎಸ್.ಎಂ.ಮಮತ, ತಾಲೂಕು ಕಸಾಪ ಅಧ್ಯಕ್ಷ ಲೋಕೇಶಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆದಿಲ್, ಉಪನ್ಯಾಸಕ ಡಾ. ಮೋಹನ್‌ ಕುಮಾರ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed