ಮಕ್ಕಳಿಗೆ ಜ್ಞಾನದ ಜೊತೆಗೆ ಸಂಸ್ಕಾರವು ಅಗತ್ಯ
1 min read
filter: 0; jpegRotation: 90; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
ಮಕ್ಕಳಿಗೆ ಜ್ಞಾನದ ಜೊತೆಗೆ ಸಂಸ್ಕಾರವು ಅಗತ್ಯ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ನ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯಲ್ಲಿ ಅಕ್ಷರಾಭ್ಯಾಸ ಮತ್ತು ಮಾತಾ-ಪಿತೃ-ಗುರುವಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ. ಮಾತನಾಡಿದ ಇವರು ಆಧುನಿಕ ಜೀವನ ಶೈಲಿಯಿಂದ ಮಕ್ಕಳು ಸಂಸ್ಕಾರವನ್ನು ಮರೆಯುತ್ತಿರುವುದು ಆತಂಕಕಾರಿಯಾದ ವಿಷಯವಾಗಿದೆ. ಮಕ್ಕಳಲ್ಲಿ ಜ್ಞಾನದ ಜೊತೆಗೆ ಸಂಸ್ಕಾರವನ್ನು ಕಲಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಜವಾಬ್ದಾರಿಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಶಾಸ್ತ್ರೋಕ್ತ ಅಕ್ಷರಾಭ್ಯಾಸದ ಜೊತೆಗೆ 10ನೇ ತರಗತಿಯ ವಿದ್ಯಾರ್ಥಿಗಳಿಂದ ತಮ್ಮ ಪೋಷಕರಿಗೆ ಮಾತಾ-ಪಿತೃ-ಗುರುವಂದನಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು. ಮಕ್ಕಳಲ್ಲಿ ತಂದೆ ತಾಯಿ ಮತ್ತು ಗುರುಗಳ ಮಹತ್ವವನ್ನು ತಿಳಿಸಿ ಅವರಲ್ಲಿ ಹಿರಿಯರ ಬಗೆಗೆ ಕಾಳಜಿ ಮತ್ತು ಗೌರವದ ಭಾವನೆಯನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಮಾದರಿಯಾಗಿದೆ ಎಂದರು. ಅರ್ಚಕರಾದ ಸಂತೋಷ್ ಭಟ್ ಮತ್ತು ರಾಮ್ ಭಟ್ ಇವರು ಗಣಹೋಮ ನಡೆಸಿ ಶಾರದಾ ಪೂಜೆಯೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು.ಪ್ರಸ್ತುತ ಶೈಕ್ಷಣಿಕ ಸಾಲಿನ ಎಲ್.ಕೆ.ಜಿ, ಯು.ಕೆ.ಜಿ ಮತ್ತು ಒಂದನೇ ತರಗತಿಗೆ ದಾಖಲಾದ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಸಮಿತಿಯ ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ.ಕೋಶಾಧಿಕಾರಿ ರಾಮಚಂದ್ರ ಹೊಳ್ಳ. ನಿರ್ದೇಶಕರಾದ ಬಿ.ರಮೇಶ್. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಟಿ.ಆರ್.ಮಾಲತಿ. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಸಿ.ನಾಗರಾಜು. ಉಪಮುಖ್ಯಶಿಕ್ಷಕ ವಸಂತ್ ಹಾರ್ಗೋಡು. ಶಿಕ್ಷಕರಾದ ಭಕ್ತೇಶ್. ವಿಜಯೇಂದ್ರ.
ಲಿಂಗರಾಜು. ಪ್ರತಾಪ್. ವಿಜೇಂದ್ರ. ಲೋಕೇಶ್. ದೈಹಿಕ ಶಿಕ್ಷಣ ಶಿಕ್ಷಕ ಜಯಪಾಲ್. ನೃತ್ಯ ಶಿಕ್ಷಕ ಕಿಶೋರ್. ಲೀಲಾಮಣಿ. ಶ್ವೇತಾ. ಕನ್ನಿಕ. ಸಾಯಿಕೀರ್ತನಾ. ಕುಸುಮ.ಎಸ್.ಶೆಟ್ಟಿ. ಗೀತಾ. ಕಮಲಮ್ಮ. ಅಶ್ವಿತಾ. ಆಶಾ. ಪೂಜಾ. ಅನುಷ. ಆರೋಗ್ಯವಾಣಿ. ಚಂದನ. ಪ್ರೀತಿ. ಸುಶ್ಮಿತಾ. ಶಾಲಾ ಬೋಧಕೇತರ ಸಿಬ್ಬಂದಿ . ಅಡುಗೆ ಸಿಬ್ಬಂದಿ.ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.







