ಹೋರಾಟದ ಆಶಯ ಮರೆತರೆ ಕನ್ನಡಕ್ಕೆ ಅಪಾಯ….
1 min read
’ಹೋರಾಟದ ಆಶಯ ಮರೆತರೆ ಕನ್ನಡಕ್ಕೆ ಅಪಾಯ
ಮೈಸೂರು: ಕರ್ನಾಟಕ ಏಕೀಕರಣ ಹೋರಾಟದ
ಆಶಯ ಮರೆತರೆ ಕನ್ನಡಕ್ಕೆ ಆಪಾಯ ಎಂದು
ಕರ್ನಾಟಕ ಸುಗಮ ಸಂಗೀತ ಪರಿಷತ್
ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಎಚ್ಚರಿಸಿದರು.
ಹೂಟಗಳ್ಳಿ ಕೆಎಚ್ಬಿ ಕಾಲೋನಿಯ ಶ್ರೀ
ಅನಂತೇಶ್ವರ ಭವನದಲ್ಲಿ ಕಾವ್ಯಶ್ರೀ ಚಾರಿಟಬಲ್
ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,
ಅಸೋಸಿಯೇಷನ್ ಆಫ್ ಅಲೆಯನ್ಸ್ ಕ್ಲಬ್
ಇಂಟರ್ನ್ಯಾಷನಲ್, ಜಿ.ಎಸ್.ಹೈಟೆಕ್
ಸಲ್ಯೂಷನ್ಸ್ ಸಂಯುಕ್ತಾಶ್ರಯದಲ್ಲಿ ಭಾನು
ವಾರ ಏರ್ಪಡಿಸಿದ್ದ ‘ದ ಈವೆಂಟ್ ಆಫ್ ಸ್ಟಾರ್
ಆಫ್ ಕರ್ನಾಟಕ’ದ ಸರ್ವಾಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ಮಾತನಾಡುವ
ಜನ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ
ಹೋಗಿದ್ದರು. ಅವರನ್ನೆಲ್ಲಾ ಒಗ್ಗೂಡಿಸಿದ್ದು
ಏಕೀಕರಣ ಚಳವಳಿ, ಭಾಷಾವಾರು ಪ್ರಾಂತ್ಯಗಳ
ರಚನೆಯ ಆಧಾರದ ಮೇಲೆ ಬೀದರ್ನಿಂದ
ಚಾಮರಾಜನಗರದವರೆಗೆ
ಕನ್ನಡಿಗರು
ಒಂದಾಗಿ ಬಾಳುತ್ತಿದ್ದಾರೆ. ಇದನ್ನು ಅರ್ಥ
ಮಾಡಿಕೊಳ್ಳಬೇಕು ಎಂದರು.
ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.
ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್
ಕಾರ್ಯಕ್ರಮ ಉದ್ಘಾಟಿಸಿದರು. ಹುಬ್ಬಳ್ಳಿ
ಶ್ರೇಯಾ ಜನಸೇವಾ ಫೌಂಡೇಷನ್ ರಾಜ್ಯಾಧ್ಯಕ್ಷ
ವಿ.ಜಿ.ಪಾಟೀಲ್, ಜಿಲ್ಲಾ ಕಸಾಪ ಉಪಾಧ್ಯಕ್ಷ
ಟಿ.ತ್ಯಾಗರಾಜು, ಡಾ.ಪುನೀತ್ ರಾಜ್ ಕುಮಾರ್
ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಟಿ.
ಗೋವಿಂದರಾಜ್, ಬೆಂಗಳೂರು ದಕ್ಷಿಣ
ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಆರ್.ವೆಂಕಟೇಶ್ವರಲು
ನಾಯ್ಡು, ಎಂ.ಆರ್.ಶಿವಕುಮಾರ್, ಮೂಡಿ
ಗೆರೆಯ ಕಾಫಿನಾಡು ಸಮಾಜ ಸೇವಾ ಸಂಘದ
ಅಧ್ಯಕ್ಷ ಹಸೈನಾರ್ ಬಿಳಗುಳ, ಹುಬ್ಬಳ್ಳಿ ಕೌಟಿಲ್ಯ
ಗಣಿತ ಅಕಾಡೆಮಿ ನಿರ್ದೇಶಕ ಆರ್.ಬಿ.
ನವೀನ್ ಹಾಜರಿದ್ದರು..
ಹಸೈನಾರ್ ಬಿಳಗೊಳ.ಮೂಡಿಗೆರೆ..
ಎಂ.ಕೆ.ಅಬ್ದುಲ್ ರಹಿಮಾನ್..ಬಿಳಗೊಳ.ಮೂಡಿಗೆರೆ.
ಹಾಗು ಎಲ್ಲಾ ಜಿಲ್ಲೆಯ ಸಾದಕರಿಗೆ ಸನ್ಮಾನ ಮಾಡಲಾಯಿತು..
ಮೂಡಿಗೆರೆಯಿಂದ ಮೊಹಮದ್ ಬಿಳಗುಳ.ಹೆಚ್.ಅಬ್ದುಲ್ಲ ಬಿಳಗೊಳ..ಹನೀಫ಼್ ಮಹಮದ್ ಇದ್ದರು.
ನಾಗರತ್ನ ಗುಂಡಪ್ಪ ಪ್ರಾರ್ಥಿಸಿದರು.
ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ರಾಜ್ಯ ಪ್ರಧಾನ
ಕಾರ್ಯದರ್ಶಿ ಸಂಗೀತಾ ಮಠಪತಿ
ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ
ಕಾರ್ಯದರ್ಶಿ ಕೀರ್ತಿ ಮಠಪತಿ ಸ್ವಾಗತಿಸಿದರು.
ವಾಗೀಶ್ವರ ಭಜನಾ ಮಂಡಳಿಯ ಸದಸ್ಯರಾದ
ಕೆ.ಸುಶೀಲಾ ರಾವ್ ನೇತೃತ್ವದಲ್ಲಿ ಜಾನಪದ
ಗೀತೆ, ಪಿ.ಕೆ.ಲಕ್ಷ್ಮೀ ದಿನೇಶ್, ಶ್ವೇತ ದಿನೇಶ್
ಭಾವಗೀತೆ, ಚನ್ನರಾಯಪಟ್ಟಣ ಹಾಗೂ ನೂರಾರು ಜನ ಬಾಗವಹಿಸಿದ್ದರು.





