ಅಕ್ರಮ ಭೂ ಮಂಜೂರಾತಿ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧಾರ….
1 min read
ಅಕ್ರಮ ಭೂ ಮಂಜೂರಾತಿ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧಾರ.
ಮೂಡಿಗೆರೆ : ಅಕ್ರಮ ಭೂ ಮಂಜೂರಾತಿಯಿಂದಾಗಿ ತಾಲೂಕಿ ನಲ್ಲಿ ಸ್ಮಶಾನ, ನಿವೇಶನಕ್ಕೆ ಭೂಮಿ ಕೊರತೆ ಉಂಟಾಗಿದೆ. ಹಾಗಾಗಿ ಅಕ್ರಮ ಭೂ ಮಂಜೂರಾತಿಯಾಗಿರುವ ಎಲ್ಲಾ ಭೂಮಿಯನ್ನು ಸರಕಾರ ವಶಪಡಿಸಿ ಕೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಲು ಭೂಹೀನ ಬಡವರ ಐಕೃತಾ ಒಕ್ಕೂಟ ನಿರ್ಧರಿಸಿದೆ ಎಂದು ಒಕ್ಕೂಟದ ಮುಖಂಡ ರಮೇಶ್ ಕಳಗೂರು ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರ ತಾಲೂಕಿನಲ್ಲಾಗಿ ರುವ ಅಕ್ರಮ ಭೂ ಮಂಜೂರು ಬಗ್ಗೆ ತನಿಖಾ ತಂಡದ ಮೂಲಕ ವರದಿ ಪಡೆದುಕೊಂಡು, ಅಕ್ರಮ ಭೂ ಮಂಜೂ ರಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರು ವುದು ಸ್ವಾಗತಾರ್ಹ. ಇತ್ತೀಚೆಗೆ ವಿಧಾನಸಭಾ ಅಧಿವೇಶನದಲ್ಲಿ ತಾಲೂಕಿ ನಲ್ಲಿ 30572 ಎಕರೆ ಕಂದಾಯ ಇಲಾಖೆಯ ಸರಕಾರಿ ಜಮೀನು ಇದೆ. ಅದರಲ್ಲಿ 10785 ಎಕರೆ ಅಕ್ರಮ ಭೂ
ಭೂಮಿ ಇದ್ದರೂ ಬಡವರಿಗೆ ಸ್ಮಶಾನ, ನಿವೇಶನ ನೀಡಲು ಸಾಧ್ಯವಾಗಿಲ್ಲ. ಹಿಂದೆ
ನಿವೇಶನ ಹಾಗೂ ಸ್ಮಶಾನಕ್ಕೆ ಕಾಯ್ದಿರಿಸಿದ್ದ ಜಮೀನು ಹಾಗೂ ಭೂಮಿಯ ದಾಖಲೆ ದಲ್ಲಾಳಿಗಳು ಅಧಿಕಾರಿಗಳ ಹಾಗೂ ಉಳ್ಳವರಿಗೆ ಖಾತೆ ಮಾಡಿಸಿ ಕೊಟ್ಟಿದ್ದಾರೆಂದು ಆರೋಪಿಸಿದರು.
17000. ಎಪಿಎಲ್ ಕಾರ್ಡ್ ದಾರರಿದ್ದಾರೆ. ಸರಕಾರ ಈ ಅಕ್ರಮ ಭೂ ಮಂಜೂರಾತಿ ಮಾಡಿಕೊಂಡಿರುವ ಅರ್ಜಿಗಳನ್ನು ವಜಾ ಮಾಡಬೇಕು
ಬಡವರಿಗೆ ತಲಾ 2 ಎಕರೆ ಭೂಮಿ ನೀಡಬೇಕು. ಅಕ್ರಮ ಭೂ ಮಂಜೂರಿಗೆ ತಡೆಯಾಜ್ಞೆ ನೀಡುತ್ತಿದೆ. ಅಕ್ರಮ ಭೂ ಮಂಜೂರು ಬಗ್ಗೆ ಕಲೆ ಹಾಕಿರುವ ಮೀಸಲು ಬಗ್ಗೆ ಸಮಗ್ರ ತನಿಖೆ ನಡೆಸಿ, ದಲ್ಲಾಳಿ ದರಖಾಸ್ತು ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ನಾಶಪಡಿಸಿ ಕ್ರಮ ಕೈಗೊಳ್ಳಬೇಕು. ಈಗಾಗಲೇ ಮೂಡಿಗೆರೆ ತಾಲೂಕಿನಲ್ಲಿ ಅಕ್ರಮವಾಗಿ ಹೊರ ಜಿಲ್ಲೆ 2/4 ಹಾಗೂ ರಾಜ್ಯದ ಜನರಿಗೆ ಭೂಮಿ ಮಂಜೂರು ಮಾಡಿಕೊಟ್ಟಿದ್ದಾರೆ. ಅಲ್ಲದೇ ನೂರಾರು ಏಕರೆ ಭೂಮಿ ಉಳ್ಳವರಿಗೂ ಭೂಮಿ ಮಂಜೂರು ಮಾಡಿಕೊಡ ಲಾಗಿದೆ. ಈ ಎಲ್ಲಾ ಅಕ್ರಮದ ಬಗ್ಗೆ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ಹಾಗೂ ದಾಖಲೆಯನ್ನು ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ನೀಡಿದ್ದು, ಜತೆಗೆ ನ್ಯಾಯಾಲಯದಲ್ಲೂ ಕೂಡ ಕಾನೂನು ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಒಕ್ಕೂಟದ ಮುಖಂಡ ಶಿವಪ್ರಸಾದ್ ಭಾರತೀಬೈಲ್, ಕೆ.ಕೆ.ಕೃಷ್ಣಪ್ಪ ಬಿಳಗುಳ. ಜಗದೀಶ್ ಭಾರತೀಬೈಲ್, ಸಂತೋಷ್ ಕಮ್ಮರಗೂಡು, ಹರೀಶ್ ಕೆಲ್ಲೂರು, ರಾಜೇಶ್ ಕಮ್ಮರಗೂಡು, ಉಮೇಶ್.ಇದ್ದರು.

