ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಬಸ್‌ಗಳ ಸಂಚಾರ ವ್ಯವಸ್ಥೆಗೆ ಕ್ರಮ….
1 min read
- ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಬಸ್‌ಗಳ ಸಂಚಾರ ವ್ಯವಸ್ಥೆಗೆ ಕ್ರಮ
ನಗರದ ಜಿ.ಪಂ. ಮಿನಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ
ಚಿಕ್ಕಮಗಳೂರು: ದೈನಂದಿನ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಬಸ್ ಗಳು ಸಂಚರಿಸಲು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.
ನಗರದ ಜಿ.ಪಂ. ಮಿನಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾವಾರು ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲಿ 6.75 ಕೋಟಿ ಟ್ರಿಪ್ ಗಳಲ್ಲಿ ಮಹಿಳೆಯರು ಸಂಚರಿಸಿದ್ದು ಇದಕ್ಕೆ ಸರ್ಕಾರ 258 ಕೋಟಿ ರೂ.ಗಳನ್ನು ನಿಗಮಕ್ಕೆ ಭರಿಸಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ 7728 ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಜನ್ಮಡಾಟ್ ಕಾಂನಲ್ಲಿ ಮಾಹಿತಿ ದೊರೆತಿದೆ. ಆದರೆ ವರೆಗೆ 3712 ಮಂದಿಯ ಮಾಹಿತಿ ಮಾತ್ರ ಲಭ್ಯವಾಗಿದ್ದು ಮಾಹಿತಿ ಸಂಗ್ರಹಿಸುವ ಉಳಿದವರ ಜೊತೆಗೆ ಸಂದಾಯವಾಗಿರುವ ಹಣವನ್ನು ಸರ್ಕಾರಕ್ಕೆ ವಾಪಸ್ ಪಡೆಯಲು ಕ್ರಮ ವಹಿಸಬೇಕಲ್ಲದೆ, ಮುಂದೆ ಅವರ ಖಾತೆಗೆ ಹಣ ಸಂದಾಯವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿ ದರು.
ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ. ಪರಿಷ್ಕರಣೆ ಹೆಸರಿನಲ್ಲಿ ಅರ್ಹರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು
ಭರವಸೆ ನೀಡಿದ್ದಾರೆ. ಮರಣ ಹೊಂದಿರುವವರ ಹೆಸರಿನಲ್ಲಿ ಈ ಯೋಜನೆಯಡಿ ಸವಲತ್ತು ಪಡೆದಿರುವ ಫಲಾನುಭವಿಗಳನ್ನು ಗುರುತಿಸಿ ಕೈಬಿಡಲಾಗುವುದು. ಈ ಸಂಬಂಧ ಜಿಲ್ಲಾ ಗ್ಯಾರಂಟಿ ಸಮಿತಿಯು ಕೂಡ ಅರ್ಹರು ಸೌಲಭ್ಯದಿಂದ ಗಮನಹರಿಸಲಾಗುವುದು ಎಂದು ತಿಳಿಸಿದರು.
ಇದುವರೆಗೆ ಜಿಲ್ಲೆಯ 3.24 ಲಕ್ಷ ಆರ್ ಆರ್ ಸಂಖ್ಯೆ ಪೈಕಿ ಸುಮಾರು 10 ಲಕ್ಷ ಮಂದಿಗೆ ಉಚಿತ ವಿದ್ಯುತ್ ಒದಗಿಸುತ್ತಿದ್ದು ಇದಕ್ಕೆ ಸರ್ಕಾರ 365 ಕೋಟಿ ರೂ. ಮೆಸ್ಕಾಂಗೆ ಭ-ರಿಸಿದೆ. ಒಟ್ಟಾರೆ ಜಿಲ್ಲೆಯ 10 ಲಕ್ಷ ಜನರಿಗೆ ಗ್ಯಾರಂಟಿ ಯೋಜನೆಯಡಿ 2055 ಕೋಟಿ ರೂ.ಗಳ ಆರ್ಥಿಕ ಶಕ್ತಿ ತುಂಬುವ ಮೂಲಕ ಬಹುದೊಡ್ಡ ಸಂಚಲನ ಮೂಡಿಸಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ,
ಸಾವಿಗೀಡಾದ ಮಹಿಳೆಯರನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಜೊತೆಗೆ 30 ಕಂತುಗಳ ಮೂಲಕ ಜಿಲ್ಲೆಯ 2.73 ಲಕ್ಷ ಕುಟುಂಬದ ಯಜಮಾನಿಯರ ಖಾತೆಗೆ ಸರ್ಕಾರ 1527 ಕೋಟಿ ರೂ.ಗಳನ್ನು ಜಮೆ ಮಾಡಿದೆ ಎಂದು ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಸರ್ವರ್ ಸಮಸ್ಯೆ ಬಗ್ಗೆ ಗ್ಯಾರಂಟಿ ಸಮಿತಿ ಸದಸ್ಯರು ಪ್ರಸ್ತಾಪಿಸಿದಾಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಯೋಗಾನಂದ್ ಮಾತನಾಡಿ, ಮೇ ಮತ್ತು ಜೂನ್ ತಿಂಗಳ ಪಡಿತರ ಒಟ್ಟಿಗೆ ವಿತರಣೆಯಾಗುತ್ತಿದೆ. ಅಲ್ಲದೇ ಪಡಿತರ ವಿತರಣೆಗೆ ಇಡೀ ದೇಶದಲ್ಲಿ ಒಂದೇ ಸರ್ವರ್ ಬಳಸುತ್ತಿರುವ ಕಾರಣ ತಂತ್ರಾಂಶದ ತೊಂದರೆಯಾಗಿದ್ದು ಮುಂದೆ ಜಿಲ್ಲೆಯಲ್ಲಿ ಈ ಸಮಸ್ಯೆ ಮರುಕಳಿಸದಂತೆ ಕ್ರಮ ವಹಿಸುವುದಾಗಿ ಹೇಳಿದರು.
ಅಂತ್ಯೋದಯ ಮತ್ತು ಇತರೆ ಯೋಜನೆಗಳ
ಫಲಾನುಭವಿಗಳ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಯ ಒಟ್ಟು 530 ಪಡಿತರ ಅಂಗಡಿಗಳಲ್ಲಿ ಈ ಬಗ್ಗೆ ವಿವರ ಪ್ರಕಟಿಸಲಾಗಿದೆ. ಈವರೆಗೆ ಜಿಲ್ಲೆಯ 8.23 ಲಕ್ಷ ಫಲಾನುಭವಿಗಳಿಗೆ 369 ಕೋಟಿ ರೂ.ಗಳಷ್ಟು ನಗದು ಮತ್ತು ಅಕ್ಕಿಯನ್ನು ಸರ್ಕಾರ ವಿತರಣೆ ಮಾಡಿದೆ ಎಂದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಬಾಗಿಯ ನಿಯಂತ್ರಣಾದಿಕಾರಿ ಸತೀಶ್ ಮಾತನಾಡಿ ಜಿಲ್ಲೆಯಲ್ಲಿ 10ನೇ ತರಗತಿವರೆಗೆ 93,489, 2 14,900. . ಸ್ನಾತಕೋತ್ತರ, , ಡಿಪ್ಲೋಮಾ, ವೈದ್ಯಕೀಯ ಮತ್ತು ಇಂಜಿನಿಯರ್ ಪೈಕಿ 19.000 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಪೈಕಿ 67,700 ಗಂಡು ಮಕ್ಕಳಿಗೆ ಉಚಿತ ಬಸ್ ಪಾಸ್ ದೊರೆಯುತ್ತಿದ್ದು ಈ ದಾಖಲಾತಿಗೆ ಒಂದು ತಿಂಗಳ ಕಾಲಾವಕಾಶವಿದೆ ಎಂದರು.
ಉದ್ಯೋಗ ವಿನಿಮಯ ಖಲಂಧರ್ ಮಾತನಾಡಿ, ಜಿಲ್ಲೆಯ 54,706 ನಿರುದ್ಯೋಗಿಗಳಿಗೆ ಹಂತ ಹಂತವಾಗಿ 16.41 ಕೋಟಿ ರೂ.ಗಳನ್ನು ಯುವನಿಧಿ ಯೋಜನೆಯಡಿ ಸಹಾಯಧನ ದೊರಕಿಸುವ ಮೂಲಕ ರಾಜ್ಯದಲ್ಲಿ ನಿರುದ್ಯೋಗಿಗಳಿಗೆ ಆಸರೆಯಾಗಿ ಯೋಜನೆ ರೂಪುಗೊಂಡಿದೆ ಎಂದರು.
ಹೆಚ್. ಈ ಸಂದರ್ಭದಲ್ಲಿ ಗ್ಯಾರಂಟಿ ಜಿಲ್ಲಾ ಉಪಾಧ್ಯಕ್ಷರಾದ ಎಸ್.ಎನ್.ಮಂಜುನಾಥ್, ಹೇಮಾವತಿ, ಚಂದ್ರಮೌಳಿ, ಎಸ್.ಕೃಷ್ಣಗೌಡ, ಜಿಲ್ಲಾ ಯೋಜನಾಧಿಕಾರಿ ರಾಜಗೋಪಾಲ್, ವಿವಿಧ ತಾಲ್ಲೂಕು ಅಧ್ಯಕ್ಷರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

