ಚಂದ್ರಪ್ಪ ಕೆ ಎನ್ ರವರಿಗೆ ವೃತ್ತಿ ನಿವೃತ್ತಿಗೆ “ಭಾವ ತುಂಬಿದ ಬೀಳ್ಕೊಡುಗೆ”
1 min read
ಚಂದ್ರಪ್ಪ ಕೆ ಎನ್ ರವರಿಗೆ ವೃತ್ತಿ ನಿವೃತ್ತಿಗೆ “ಭಾವ ತುಂಬಿದ ಬೀಳ್ಕೊಡುಗೆ”
ಮೂಡಿಗೆರೆ ಪಟ್ಟಣದ ಬಾಲಿಕಾ ಸರ್ಕಾರಿ ಕಾಲೇಜು ಪ್ರೌಢ ಶಾಲಾ ವಿಭಾಗದ ಇಂಗ್ಲಿಷ್ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಪ್ಪ ಕೆ ಎನ್ ರವರಿಗೆ ಶಾಲೆಯ ಆಡಳಿತ ಮಂಡಳಿ ಹಾಗೂ ವಿಧ್ಯಾರ್ಥಿಗಳು ಬುಧವಾರ ಶಾಲೆಯಲ್ಲಿ ನಿವೃತ್ತಿಯ ಸಾರ್ಥಕತೆಯ ಭಾವ ತುಂಬಿದ ಬೀಳ್ಕೊಡುಗೆ ಸಮಾರಂಭ ನಡೆಯಿತು.. ಎಲ್ಲ ಮಕ್ಕಳ ಪ್ರೀತಿಯ ಶಿಕ್ಷಕರಾಗಿ, ಹವ್ಯಾಸಿ ಗಾಯಕರಾಗಿ ಎಲ್ಲರ ಪ್ರೀತಿಯ ಗಳಿಸಿದ್ದ ಸರಳತೆಯ ಗುರುಗಳಾಗಿ ಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ ಎಲ್ಲ ಶಿಕ್ಷಕರು ನಿವೃತ್ತಿಯ ಬದುಕಿನ ಉತ್ತಮ ದಿನಗಳು ಬರಲೆಂದು ಎಲ್ಲರೂ ಹಾರೈಸಿದರು.
ವೃತ್ತಿ ಬದುಕಿಗೆ ಸಹಕರಿಸಿದ ಸರ್ವರಿಗೂ ಧನ್ಯವಾದ ತಿಳಿಸಿದ ಚಂದ್ರಪ್ಪ ರವರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ರಾಜ ಅರಸು, ತೋಟಪ್ಪ ಗೌಡ, ಸುಬ್ಬಯ್ಯ, ಈಶನ ಗೌಡ ಪಾಟೀಲ್, ವೆಂಕಟೇಶ್, ಯೋಗೇಶ್, ಅನುಸೂಯ, ಸುನೀತಾ, ತೃಪ್ತಿ, ಸ್ಪೂರ್ತಿ, ವಿದ್ಯಾ, ವಿನುತಾ, ಕಾಲೇಜಿನ ಪ್ರಾಂಶುಪಾಲರಾದ ಪೂರ್ಣೇಶ್ , ಯಾಕೂಬ್ ಹಾಗೂ ಚಂದ್ರಪ್ಪ ರವರ ಶ್ರೀಮತಿ ರೂಪಾ ಮತ್ತು ಮಗ ಅವರ ಒಡನಾಡಿಗಳು ವೃತ್ತಿ ಬಂಧುಗಳು ಭಾಗವಹಿಸಿದ್ದರು.

