लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಾಡಿನ ಖ್ಯಾತ ಪತ್ರಕರ್ತರಾಗಿದ್ದ ದಿವಂಗತ. ಪಿ ಲಂಕೇಶ್ ಅವರ ಜೀವನ ಸಂಗಾತಿ ಇಂದಿರಾ ಲಂಕೇಶ್ ನಿಧನ :

1 min read

ಅವಿನ್ ಟಿವಿ ಸುದ್ಧಿಜಾಲ ✍️: ನಾಡಿನ ಖ್ಯಾತ ಪತ್ರಕರ್ತರಾಗಿದ್ದ ದಿವಂಗತ. ಪಿ ಲಂಕೇಶ್ ಅವರ ಜೀವನ ಸಂಗಾತಿ ಇಂದಿರಾ ಲಂಕೇಶ್ ನಿಧನ :ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯ ಹಾಗೂ ರಾಜಕೀಯ ಗಣ್ಯರಿಂದ ಸಂತಾಪ.

ಬೆಂಗಳೂರು ಜೂನ್ ೧೫: ಖ್ಯಾತ ಪತ್ರಕರ್ತ ಪಿ. ಲಂಕೇಶ್‌ ಅವರ ಮಡದಿ, ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್‌ ಅವರು ಇಂದು ಜೂನ್ 15ರ ಸೋಮವಾರ ನಿಧನರಾಗಿದ್ದಾರೆ.

84 ವರ್ಷದ ಇಂದಿರಾ ಲಂಕೇಶ್ ಅವರು ವಯೋಸಹಜ ಅನಾರೋಗ್ಯ ದಿಂದ ಬಳಲುತ್ತಿದ್ದರು,ಇಂದು ಬೆಳಗ್ಗೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ತಮ್ಮ ಪುತ್ರಿ ಕವಿತಾ ಲಂಕೇಶ್‌ ಅವರ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಇಂದಿರಾ ಲಂಕೇಶ್ ಅವರು ಪುತ್ರಿ ಕವಿತಾ ಲಂಕೇಶ್‌ ಮತ್ತು ಪುತ್ರ ಇಂದ್ರಜಿತ್ ಲಂಕೇಶ್‌ ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.

ಕನ್ನಡ ಪತ್ರಿಕೋದ್ಯಮದಲ್ಲಿ ಇತಿಹಾಸ ಸೃಷ್ಟಿಸಿದ ‘ಲಂಕೇಶ್ ಪತ್ರಿಕೆ’ಯ ಆರಂಭದ ದಿನಗಳಿಂದಲೂ ಪಿ. ಲಂಕೇಶ್ ಅವರಿಗೆ ಇಂದಿರಾ ಲಂಕೇಶ್ ಅವರು ದೊಡ್ಡ ಬೆಂಬಲವಾಗಿ ನಿಂತಿದ್ದರು. ಲಂಕೇಶ್ ಅವರ ನಿಧನದ ನಂತರವೂ ಪತ್ರಿಕೆ ಮುನ್ನಡೆಸುವಲ್ಲಿ ಹಾಗೂ ಲಂಕೇಶ್ ಪ್ರಕಾಶನದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಸರಳ ಸಜ್ಜನಿಕೆ ಮತ್ತು ದಿಟ್ಟ ವ್ಯಕ್ತಿತ್ವ ಹೊಂದಿದ್ದ ಇಂದಿರಾ ಲಂಕೇಶ್ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮ ವಲಯದ ಅನೇಕ ಗಣ್ಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.

ಇಂದಿರಾ ಅವರು ‘ಹುಳಿ ಮಾವು ಮತ್ತು ನಾನು’ ಎಂಬ ಆತ್ಮಕಥನವನ್ನೂ ಬರೆದಿದ್ದರು.

ಇಂದಿರಾ ಲಂಕೇಶರ ಅಂತ್ಯಕ್ರಿಯೆಯು ನಾಳೆ ಮಂಗಳವಾರ ಬೆಳಗ್ಗೆ ಚಾಮರಾಜಪೇಟೆಯಲ್ಲಿರುವ ಸ್ಮಶಾನದಲ್ಲಿ ನೆರವೇರಲಿದೆ ಎಂದು ಅವರ ಪುತ್ರಿ ಕವಿತಾ ಲಂಕೇಶ್ ಮಾಹಿತಿ ನೀಡಿದ್ದಾರೆ.

*ಸ್ವಾವಲಂಬನೆ ಮತ್ತು ಉದ್ಯಮಶೀಲತೆ*

ಪಿ. ಲಂಕೇಶ್‌ ಅವರು ವಿಶ್ವವಿದ್ಯಾಲಯದ ಪ್ರೊಫೆಸರ್ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. “ನೀನು ಕೇವಲ ಪಿಯುಸಿ ಓದಿದ್ದಾಕೆ, ನಿನಗೆ ಯಾರು ಕೆಲಸ ಕೊಡ್ತಾರೆ?” ಎಂದು ಲಂಕೇಶರು ಲೇವಡಿ ಮಾಡಿದ್ದನ್ನೇ ಸವಾಲಾಗಿ ಸ್ವೀಕರಿಸಿದ ಇಂದಿರಾ, ಬ್ಯಾಂಕ್ ಮತ್ತು ಸ್ನೇಹಿತರಿಂದ ಸಾಲ ಪಡೆದು ಬೆಂಗಳೂರಿನಲ್ಲಿ ಸೀರೆ ಅಂಗಡಿಯನ್ನು ಆರಂಭಿಸಿ ಕುಟುಂಬಕ್ಕೆ ನೆರವಾಗಿದ್ದರು.

2017 ರಲ್ಲಿ ಮಗಳು ಗೌರಿ ಲಂಕೇಶ್ ಹತ್ಯೆ ಬಳಿಕ ಕವಿತಾ ಅವರ ಜೊತೆ ವಾಸಿಸಲು ಶುರು ಮಾಡಿದ್ದ ಅವರು, ಮಗಳ ಸಾವಿನಿಂದ ಬಹಳ ನೊಂದಿದ್ದರು. ಕೆಲ ಸಂದರ್ಶನದಲ್ಲಿ ಗೌರಿ ತನ್ನ ಮಗಳಲ್ಲ ತಾಯಿ ಎಂದು ಹೇಳಿಕೊಂಡಿದ್ದರು.
•••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed