ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಣೆ…
1 min read
ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಣೆ
ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 2026-27 ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾಸಿಂಧು ಪೋರ್ಟಲ್ ಮೂಲಕ ಮೇ. 29 ರಿಂದ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಸಿ ಶಿವಾನಂದ ಸ್ವಾಮಿ ತಿಳಿಸಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸರ್ಕಾರದ 4 ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಿಸಲು ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಆದೇಶ ನೀಡಿದೆ ಎಂದರು.
ಜೂ. 12 ರಿಂದ ಉಚಿತ ಬಸ್ ಪಾಸ್‌ಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಪಾಸ್ ವಿತರಣೆಯಲ್ಲಿ ಹಾಲಿ ಅನುಸರಿಸುತ್ತಿರುವ ನಿಯಮಗಳನ್ನು ಮುಂದುವರೆಸಲಾಗಿದೆ, ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಸಂಬಂಧಿಸಿದ ಶಾಲಾ-ಕಾಲೇಜುಗಳಿಂದ ದಾಖಲಾತಿಗಳನ್ನು ಪಡೆದು ಸಲ್ಲಿಸುವುದು ಕಡ್ಡಾಯವಾಗಿದೆ ಎಂದರು.ಕರಾರಸಾ ನಿಗಮ ವ್ಯಾಪ್ತಿಯ 123 ಕೌಂಟರ್‌ಗಳನ್ನು
ವಿದ್ಯಾರ್ಥಿಗಳಿಗೆ ತೆರೆಯಲಾಗಿದ್ದು ಅನುಕೂಲವಾಗುವಂತೆ ರಾಜ್ಯದ (https: //sevasindhuser-vies. karnataka. gov. in/buspassservices/) ವೆಬ್ ಸೈಟ್ ವಿಳಾಸ (https:// ksrtc. kar-nataka. gov. in/ student pass ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷ 2026-27 ನೇ ಸಾಲಿನಲ್ಲಿ ಶುಲ್ಕ ಪಡೆದು ವಿತ-ರಿಸಲಾಗಿರುವ ಪಾಸುಗಳ ಸಂಪೂರ್ಣ ಶುಲ್ಕವನ್ನು ಇನ್ನೂ 15 ದಿನಗಳ ಒಳಗಾಗಿ ಈಗ ಮರುಪಾವತಿಸಲಾಗುವುದು ಪಡೆದುಕೊಂಡ ಉಚಿತ ಬಸ್‌ಪಾಸನ್ನು ಕಳೆದುಕೊಂಡಲ್ಲಿ 100 ರೂಗಳನ್ನು ಪಾವತಿಸಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ಯುವಕ ಸಂಘಗಳನ್ನು ಆರಂಭಿಸಲು ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ರವರು ಘೋಷಿಸಿರುವ ಹಿನ್ನಲೆಯಲ್ಲಿ 16 ರಿಂದ 35 ವಯಸ್ಸಿನವರು ಸದಸ್ಯರಾಗಬಹುದಾಗಿದ್ದು, ಜಿಲ್ಲೆಯ ಭಾರತ್ ಜೋಡೋ ಸಂಘ ಒಂದರಂತೆ ಆರಂಭಿಸಲಿದ್ದು ಸರ್ಕಾರ 10 ಲಕ್ಷ ರೂ ನೀಡುವ ಅನುದಾನದಲ್ಲಿ ಸಾಮಾಜಿ-ಕ ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಸಮಿತಿ ಅಧ್ಯಕ್ಷ ಮಲ್ಲೇಶ್ ಸ್ವಾಮಿ. ಸದಸ್ಯರುಗಳಾದ ಬಸವರಾಜು, ಜೇಮ್ಸ್ ಡಿಸೋಜಾ, ನಾಗೇಶ್ ರಾಜ್ ಅರಸ್, ಜಯಂತಿ.ಜಿ ಶಿವಾಜಿ ಉಪಸ್ಥಿತರಿದ್ದರು.

