ನಗರದ ಒಳಗೆ ರಸ್ತೆಯುದ್ದಕ್ಕು ಪೈಪ್ಲೈನ್ ಅಳವಡಿಸಲು ತೆಗೆದಿರುವ ಗುಂಡಿಯನ್ನು ಶೀಘ್ರವಾಗಿ ಮುಚ್ಚಿಸಲು ಕೋರಿ…
1 min read
ಮೂಡಿಗೆರ.ನಗರದ ಒಳಗೆ ರಸ್ತೆಯುದ್ದಕ್ಕು ಪೈಪ್ಲೈನ್ ಅಳವಡಿಸಲು ತೆಗೆದಿರುವ ಗುಂಡಿಯನ್ನು ಶೀಘ್ರವಾಗಿ ಮುಚ್ಚಿಸಲು ಕೋರಿ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಹಲವಾರು ತಿಂಗಳಿನಿಂದ ಮೂಡಿಗೆರೆ ಪಟ್ಟಣದ ಒಳಗೆ ಹಲವಾರು ಕಡೆ ಪೈಪ್ ಲೈನ್ ಅಳವಡಿಸಲು ರಸ್ತೆಯ ಉದ್ದಕ್ಕು ಮೀಟರ್ಗಳ ಅಂತರದಲ್ಲಿ ಗುಂಡಿಗಳನ್ನು ತೆಗೆದಿರುತ್ತಾರೆ. ಗುಂಡಿಗಳು ವಾಹನಗಳ ಸಂಚಾರದಿಂದಾಗಿ ಅಡಿಗಳಷ್ಟು ಉದ್ದ ಮತ್ತು ಅಗಲದ ಗುಂಡಿಗಳಾಗಿ ಮಾರ್ಪಟ್ಟಿರುತ್ತವೆ.
ಈ ಗುಂಡಿಗಳಿಂದಾಗಿ ದ್ವಿ-ಚಕ್ರ ವಾಹನಗಳಲ್ಲಿ ಸಂಚರಿಸುವವರು ಪದೆ ಪದೆ ಆಯಾ ತಪ್ಪಿ ಬಿಳುವುದು. ಎಲ್ಲಾ ವಾಹನಗಳ ಬಿಡಿ ಭಾಗಗಳು ಅತಿಯಾಗಿ ಹಾಳಾಗಿ ರಿಪೇರಿಗೆ ಬರುತ್ತಿವೆ. ಈ ಕಾಮಗಾರಿಯು ಆಮೇಗತಿಯಲ್ಲಿ ಸಾಗುತ್ತಿದ್ದು, ಗುಂಡಿಗಳನ್ನು ಮುಚ್ಚದೆ ಸರ್ವಾಜನಿಕರಿಗೆ ಮತ್ತು ಸವಾರರಿಗೆ ದಿನ ನಿತ್ಯ ಸಮಸ್ಯೆಗಳು ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಒಂದು ವಾರದ ಒಳಗೆ ಪರಿಹರಿಸದಿದ್ದಲ್ಲಿ ವಿಶ್ವ ಹಿಂದೂ ಪರಿಷದ್, ಭಜರಂಗದಳ ಮೂಡಿಗೆರೆ ಪಟ್ಟಣ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸುತ್ತಿದ್ದೇವೆ.
ದಯಮಾಡಿ ಈ ಮನವಿಯನ್ನು ತಾವುಗಳು ತುರ್ತಾಗಿ ಗಮನಿಸಿ ಸಮಸ್ಯೆ ಬಗೆಹರಿಸಿ ಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
ವಿಶ್ವ ಹಿಂದೂ ಪರಿಷದ್,
ಭಜರಂಗದಳ..ಮೂಡಿಗೆರೆ

