लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ಆದಂತ ನಯನ ಮೊಟಮ್ಮನವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು ಕಾರಣ ಕೆಳಕಂಡಂತಿದೆ…

1 min read

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ಆದಂತ ನಯನ ಮೊಟ್ಟಮ್ಮ ನವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು ಕಾರಣ ಕೆಳಕಂಡಂತಿದೆ

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಯನ ಮೊಟಮ್ಮನವರ ತಾಯಿ ಶ್ರೀಮತಿ ಮೊಟ್ಟಮ್ಮನವರು ಶಾಸಕರು ಮತ್ತು ಸಚಿವರಾಗಿ ಮೂಡಿಗೆರೆ ಕ್ಷೇತ್ರಕ್ಕೆ ಹಾಗೂ ಚಿಕ್ಕಮಗಳೂರು ಜಿಲ್ಲೆ ಮತ್ತು ಕರ್ನಾಟಕ ರಾಜ್ಯವನ್ನ ಸಚಿವೆಯಾಗಿ ಪ್ರತಿನಿಧಿಸಿ ರಾಜ್ಯಕ್ಕೆ ಶ್ರೀ ಶಕ್ತಿ ಎಂಬ ದೊಡ್ಡ ಸಂಘವನ್ನು ನೀಡಿ ಮಹಿಳೆಯರು ಕೂಡ ಸಬಲೀಕರಣ ಹೊಂದಬೇಕು ಮಹಿಳೆಯರಿಗೂ ಮೀಸಲಾತಿ ಬೇಕು ಎಂದು ಹೋರಾಡಿದ ದಿಟ್ಟ ತಾಯಿಯ ಮಗಳಾದ ನಯನ ಮೊಟ್ಟಮ್ಮ ಇವರು ಕಳೆದ 20 ವರ್ಷಗಳಿಂದ ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಗೆಲ್ಲಲು ಸಾಧ್ಯವಾಗದ ಸಂದರ್ಭದಲ್ಲಿ ಮರೀಚಿಕೆಯಂತೆಬಂದು,ನೇರ ನುಡಿಯೊಂದಿಗೆ, ದಿಟ್ಟತನದೊಂದಿಗೆ, ನನ್ನ ತಾಯಿ ಮೊಟ್ಟಮ್ಮನವರು ಮೂಡಿಗೆರೆ ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಇದ್ದರೂ ಇನ್ನೂ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಹೊಂದಬೇಕು ಎಂದು ತನ್ನ ತಾಯಿಯ ಉಳಿದ ಕನಸನ್ನು ನನಸು ಮಾಡಲು ಮೂಡಿಗೆರೆ ವಿಧಾನಸಭಾ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಮನಸು ಮಾಡಿ ರಾಜಕೀಯಕ್ಕೆ ಬಂದವರೇ ಶ್ರೀಮತಿ ನಯನ ಮೋಟಮ್ಮ. 20 ವರ್ಷಗಳಿಂದ ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಹುದೊಡ್ಡ ನಾಯಕರುಗಳು ಇದ್ದರೂ ಕೂಡ ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಆದರೆ ಸಣ್ಣ ವಯಸ್ಸಿನಲ್ಲೇ ನೇರ ನುಡಿ ಜನಪರ ಕಾಳಜಿ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ಬಂದಂತಹ ನಮ್ಮ ನಿಮ್ಮ ನೆಚ್ಚಿನ ಯುವನಾಯಕಿ ನಯನ 20 ವರ್ಷಗಳ ಸೋಲನ್ನು ಅವರ ಜಾಣ್ಮೆ
ಮತ್ತು ರಾಜಕೀಯ ತಂತ್ರ ಹಾಗೂ ಬಡಬಗ್ಗರನ್ನು, ದೀನದಲಿತರನ್ನು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರನ್ನು ಬಲಪಡಿಸುವ ನೆಟ್ಟಿನಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.

ನಯನ ಮೊಟ್ಟಮ್ಮನವರ ಜನಪರ ಕಾಳಜಿಯನ್ನು ನೋಡಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಜನತೆ ಅವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದು, ಇದರಿಂದ ನೆನೆಗುದಿಗೆ ಬಿದ್ದಿದಂತಹ ಹತ್ತಾರು ಕೆಲಸ ಕಾರ್ಯಗಳು 20 ವರ್ಷಗಳ ನಂತರ ಕಾಂಗ್ರೆಸ್ ಪಕ್ಷದ ಶಾಸಕಿಯಾಗಿ ನಯನ ಮೊಟಮ್ಮ ಮೊದಲು ಅಭಿವೃದ್ಧಿಪಡಿಸಿದ್ದಾರೆ. ಮುಂದೆ ರಚಿಸುವಂತಹ ಸರ್ಕಾರದಲ್ಲಿ ನಯನ ಮೊಟಮ್ಮನವರಿಗೆ ಸಚಿವ ಸ್ಥಾನ ನೀಡಿದ್ದಲ್ಲಿ ಖಂಡಿತವಾಗಿಯೂ ಮೂಡಿಗೆರೆ ವಿಧಾನಸಭಾ ಕ್ಷೇತ್ರವಲ್ಲದೆ, ಚಿಕ್ಕಮಗಳೂರು ಜಿಲ್ಲೆಯನ್ನ ಮುನ್ನಡೆಸುವ ಶಕ್ತಿ ತಾಳ್ಮೆ,, ಜಾಣ್ಮೆ, ಸಂಘಟನಾ ಮನೋಭಾವ ನಯನ ಮೋಟಮ್ಮರಲ್ಲಿ ಅಚಲವಾಗಿದೆ, ಹಾಗಾಗಿ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮತದಾರ ಬಂಧುಗಳು ಬಯಸುತ್ತಿರುವುದು ಒಂದೇ, ಅಭಿವೃದ್ಧಿಯ ಹರಿಕಾರಿ ನಯನ ಮೊಟಮ್ಮರಿಗೆ ಸಚಿವ ಸ್ಥಾನ ಸಿಗಲೆಂದು,ಹಾಗಾಗೇ ನಯನ ಮೊಟಮ್ಮನವರ ಅಭಿಮಾನಿಗಳು ಹತ್ತಾರು ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದಾರೆ ನಯನ ಸಚಿವ ಸ್ಥಾನ ದೊರೆತಿದ್ದಲ್ಲಿ ಇಡೀ ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಯನ್ನು ಕಾಣುವುದೆಂತು ಸತ್ಯ .

ಮತದಾರ ಬಂಧುಗಳ ಹಾಗೂ ಪಕ್ಷದ ಕಾರ್ಯಕರ್ತರ ಮತ್ತು ನಯನ ಮೋಟಮ್ಮನವರ ಅಭಿಮಾನಿಗಳ ಎಲ್ಲರ ಆಸೆ ಒಂದೇ ಸನ್ಮಾನ್ಯ ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಶ್ರೀಮತಿ ನಯನ ಮೊಟಮ್ಮನವರಿಗೆ ಸಚಿವ ಸ್ಥಾನ ದೊರಕಲಿ, ಮೂಡಿಗೆರೆ ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆ , ಅಭಿವೃದ್ಧಿ ಹೊಂದಲಿ ಎಂದು ಕಾತುರದಿಂದ ಕಾಯುತ್ತಿರುವ ಸಾವಿರಾರು ಮನಸುಗಳಿಗೆ ನಯನ ಮೊಟಮ್ಮನವರು ಸಚಿವೆಯಾಗಿ ಅಧಿಕಾರ ಮತ್ತು ಅಭಿವೃದ್ಧಿಗೆ ಹೆಸರಾಗಲಿ ಎಂದು ಹಾರೈಸುವ ಹಾಗೂ ಅಭಿಲಾಷಿಸುವ ಒಬ್ಬ ಮೂಡಿಗೆರೆ ಕ್ಷೇತ್ರದ ಮತದಾರನಾಗಿ ಕಾಂಗ್ರೆಸ್ ಪಕ್ಷದ ಒಬ್ಬ ಕಾರ್ಯಕರ್ತನಾಗಿ ಮೂಡಿಗೆರೆ ಶಾಸಕಿ ನಯನ ಮೊಟಮ್ಮನವರ ಅಭಿಮಾನಿಯಾಗಿ ನಾನು ನಯನ ಮೊಟಮ್ಮನವರಿಗೆ ಸಚಿವ ಸ್ಥಾನ ದೊರಕಲಿ ಕ್ಷೇತ್ರದ ಅಭಿವೃದ್ಧಿಯಾಗಲಿ ಎಂದು ಪ್ರಾರ್ಥಿಸುವೆ..

ಚಂದ್ರುಓಡೆಯಾರ್..ಬಿಳಗೊಳ.

ಮೂಡಿಗೆರೆ.

About Author

Leave a Reply

Your email address will not be published. Required fields are marked *

You may have missed