ಒಕ್ಕಲಿಗ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಅವಕಾಶ ನೀಡಿರುವುದು ಒಳ್ಳೆಯ ಬೆಳವಣಿಗೆ….
1 min read
ಒಕ್ಕಲಿಗ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಅವಕಾಶ ನೀಡಿರುವುದು ಒಳ್ಳೆಯ ಬೆಳವಣಿಗೆ
ಕಡೂರು: ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಒಕ್ಕಲಿಗ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಅವಕಾಶ ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವಲ್ಲಿ ಡಿಕೆ ಶಿವಕುಮಾರ್ ಪಾತ್ರವೇ ಹೆಚ್ಚಿನದು ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಬೆಂಗಳೂರಿನಿಂದ ತರೀಕೆರೆ ಖಾಸಗಿ ಮುನ್ನ ಕಾರ್ಯಕ್ರಮಕ್ಕೆ ತೆರಳುವ ಕಡೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸೋನಿಯಾ ಗಾಂಧಿಯವ ರಿಗೆ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಲಾಭವೇನು ಎಂಬುದರ ಬಗ್ಗೆ ವಿವರವಾಗಿ ತಿಳಿಸಿದ್ದರು, ಒಕ್ಕಲಿಗ ಮುಖಂಡರುಗಳು ಸಿದ್ದರಾಮಯ್ಯನವರಿಗೆ ಬೆಂಬಲ ನೀಡಿದ್ದರು, ಈಗ ಒಕ್ಕಲಿಗರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತಿರುವುದು ಸಾಮರಸ್ಯದ ರಾಜಕಾರಣ ಆಗಲಿದೆ. ಪ್ರಜಾಪ್ರಭುತ್ವದಲ್ಲಿ ಇದ್ದೇವೆ ಯಾವುದೇ ಒಂದು ಜಾತಿಯ ಮತಗಳಿಂದ ಗೆಲ್ಲಲು ಸಾಧ್ಯವಿಲ್ಲ, ಎಲ್ಲಾ ಜಾತಿ ಜನಾಂಗ ಎಲ್ಲ ಧರ್ಮದವರ ಸಹಕಾರದಿಂದ ಮಾತ್ರ ಗೆಲ್ಲಲು ಸಾಧ್ಯ ಎಂದರು.
“ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವ-ರಿಗೆ ಯಾವುದೇ ಜವಾಬ್ದಾರಿ ನೀಡಿದರೂ ಅವರು ಸಮರ್ಥವಾಗಿ ನಿಭಾಯಿಸುತ್ತಾರೆ, ಜನರ ಜೊತೆಯಲ್ಲಿ ಬೆರೆಯುವ ಪಕ್ಷಗಳು ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು, ಜನರ ಜೊತೆಯಲ್ಲಿ ಬೆರೆಯದ ಪಕ್ಷ ಬಿಜೆಪಿ ಧರ್ಮ ಜಾತಿಯ ಹೆಸ-ರಿನಲ್ಲಿ ರಾಜಕೀಯ ಮಾಡುತ್ತಾರೆ, ಜನತೆ ಇವರಿಗೆ ಲೆಕ್ಕಕ್ಕಿಲ್ಲ. ಅಕ್ಷರ, ಅನ್ನ ಜನರಿಗೆ ಅವಶ್ಯ, ಧರ್ಮವನ್ನು ಇಟ್ಟುಕೊಂಡು ಇನ್ನು ಎಷ್ಟು ದಿನ ರಾಜಕಾರಣ ಮಾಡುತ್ತೀರಿ ಜನರ ಜೊತೆಯಲ್ಲಿ ಬರೆಯುವುದನ್ನು ಸಲಹೆ ರೂಢಿಸಿಕೊಳ್ಳುವಂತೆ ನೀಡಿದರು. ನಾವುಗಳು ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆವು, ಅವರು ನಮಗೆ ಕೈ ಕೊಟ್ಟರು, ಧರ್ಮ ಭಾಷೆ ಜಾತಿ ಎಂದಿಗೆ ಕೈಹಿಡಿಯುವುದಿಲ್ಲ ದೇಶದ ಅಭಿವೃದ್ಧಿಗೆ ಅಕ್ಷರ, ಆರೋಗ್ಯ, ಅನ್ನಕ್ಕೆ ಕೊರತೆ ಇರಬಾರದು ಎಂದರು.
ಶಾಲೆಗಳು ಮುಚ್ಚುತ್ತಿವೆ, ಬಡವರ ಮಕ್ಕಳಿಗೆ ಶಿಕ್ಷಣ ಇಲ್ಲದಾಗುತ್ತಿದೆ. ನನ್ನ ಅಧಿಕಾರ ಅವಧಿಯಲ್ಲಿ ಬಿಸಿ ಊಟ, ಯಶಸ್ವಿನಿ ಯೋಜನೆ ಜಾ-ರಿಗೆ ತರಲಾಯಿತು. ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತರುವಾಗ ಮಂತ್ರಿಗಳು ಜನರ ಜನರೊಂದಿಗೆ ಚರ್ಚೆ ಮಾಡಬೇಕು, ಗ್ಯಾರಂಟಿ ಯೋಜನೆಗಳ ಬಗ್ಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಸೀಸ ಬೇಕು ದುಡಿಯುವ ಕೈಗಳಿಗೆ ಕೆಲಸ ಬೇಕಿದೆ, ದೇವರಾಜ್ ಅರಸುರವರು ಮುಖ್ಯಮಂತ್ರಿಗಳಾಗಿದ್ದಾಗ 21 ಲಕ್ಷ ಎಕರೆ ಜಮೀನುಗಳನ್ನು ರೈತರಿಗೆ ನೀಡಿದರು, ಶಾಲೆಗಳನ್ನು ವಸತಿ ನಿಲಯಗಳನ್ನು ಕಟ್ಟಿಸಿದರು, ಗ್ಯಾರಂಟಿ ಯೋಜನೆಗಳು ಸರ್ಕಾರದ ನಿಯಮ ಅಲ್ಲ ಎಂದರು.
ಮುಖಮಂತಿಗಳಾಗಿ ಸಿದರಾಮಯನವರು ವಿಶೇಷ ವಿಮಾನ ಹಾರಾಟಕ್ಕೆ 38 ಕೋಟಿ ರೂ ಬಳಕೆ ಮಾಡಿಕೊಂಡಿರುತ್ತಾರೆ, ಸರ್ಕಾರದ ಹಣ ದುರುಪಯೋಗ ಹಾರಾಟಕ್ಕೆ ಆಗಬಾರದು.ವಿಮಾನ ಅಹಿಂದ ಬಳಕೆ ಮಾಡಿಕೊಂಡ ಹಣ ಯಾರಪ್ಪನೆ ಹಣ ಜನರ ಹಣವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ ವರ್ಗದವರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ಕೊಡುಗೆ ಏನು? ಕುರುಬರಲ್ಲಿಯೂ 10 ಲಕ್ಷ ಕುಟುಂಬಗಳು ಅಲೆಮಾರಿ ಕುರುಗಾಳಿಗಳಿದ್ದಾರೆ ಅವರ ಹೆಂಡತಿಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ, ಮುಖ್ಯಮಂತ್ರಿಗಳಾಗಿ ಏನು ರಕ್ಷಣೆ ದೊರಕಿದೆ. ಅಹಿಂದ ಕುರುಬರೇ ಅವರುಗಳಿಗೆ ವರ್ಗದವರನ್ನು ಮತಗಳಿಗೆ ಸೀಮಿತ ಮಾಡಿಕೊಂಡಿರುತ್ತಾರೆ. ಜನರ ಹಣ ದುರ್ಬಳಕೆಯಾಗಿದೆ. ಮದ್ಯದ ದರ ಏರಿಕೆಯಾಗಿದೆ ಇದರಿಂದ ಯುವಕರಗಳು ಗಾಂಜಾಕ್ಕೆ ಮೊರೆ ಹೋಗುತ್ತಿದ್ದಾರೆ. ಯುವಶಕ್ತಿ ಹಾಳಾಗುತ್ತಿದೆ ಎಂದರು.
ಕೆ.ಬಿ.ಸೋಮೇಶ್, ಕೆ.ಎಚ್. ಶಂಕರ್, ಸವಿತಾ ಸತ್ಯನಾರಾಯಣ್, ಲೋಕೇಶ್ವರ್, ನಂಜುಂಡಸ್ವಾಮಿ, ನಾಗರಾಜ್ ಹಾಗೂ ಹಲವಾರು ಮುಖಂಡರುಗಳು ಉಪಸ್ಥಿತರಿದರು.

