ಗೂಂಡಾ ವರ್ತನೆ ಸಿ.ಟಿ ರವಿ ಘನತೆಗೆ ದೋಭೆ ತರುವುದಿಲ್ಲ….
1 min read
ಗೂಂಡಾ ವರ್ತನೆ ಸಿ.ಟಿ ರವಿ ಘನತೆಗೆ ದೋಭೆ ತರುವುದಿಲ್ಲ
ಚಿಕ್ಕಮಗಳೂರು: ಆದಿಶಕ್ತಿ ನಗರದ ರಸ್ತೆ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನಡೆಸಿರುವ ಗೂಂಡಾ ವರ್ತನೆ ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಹೇಳಿದರು.
ನಗರದ ಪ್ರೆಸ್ ಕ್ಲಬ್ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಸಿಟಿ. ರವಿ ಅವರು ತಮ್ಮ ಗೂಂಡಾ ವರ್ತನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಕಾಮಗಾರಿಯ ಬಗ್ಗೆ ಸಿಟಿ ರವಿ ಅವರಿಗೆ ಕಾಳಜಿ ಇದಿದ್ದರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ನೀಡಬಹುದಿತ್ತು. ಅದನ್ನು ಬಿಟ್ಟು ಗೂಂಡಾಗಳನ್ನು ಉದ್ದೇಶಪೂರ್ವಕವಾಗಿ ಕರೆದುಕೊಂಡು ಹೋಗುವ ಅಗತ್ಯವಿರಲಿಲ್ಲ ಎಂದರು.
ಮಾರ್ಚ್ 31ರ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದ ಗುತ್ತಿಗೆದಾರ ಈವರೆಗೂ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸುತ್ತಾರೆಂಬ ಭಯದಿಂದ ತಮ್ಮ ಸಹೋದರ ಸಂಬಂಧಿ ಗುತ್ತಿಗೆ ದಾರನೆ ರಕ್ಷಣೆಗೆ ಸ್ಥಳಪರಿಶೀಲನೆ ನೆಪದಲ್ಲಿ ತೆರಳಿ ಗೊಂದಲ ಸೃಷ್ಟಿಸಿದ್ದಾರೆ ಎಂದರು.
ಶಾಸಕ ತಮ್ಮಯ್ಯನವವರ ಬಗ್ಗೆ ನಕಲಿ ಮಧ್ಯದ ಬಗ್ಗೆ ಸಿ.ಟಿ. ರವಿ ಆರೋಪಿಸಿದ್ದಾರೆ. 2008ರಲ್ಲಿ ಬೆಳವಾಡಿ ಕೆರೆಯ ಸಮೀಪ ನಗರದ ಜ್ಯುವೆಲರ್ ಶಾಪ್ ಮಾಲೀಕರ ತೋಟದ ಮನೆಯಲ್ಲಿ ನಕಲಿ ಮದ್ಯ ತಯಾ-ರಿಸಲು ಹೋಗಿ ಸಿಕ್ಕಿ ಬಿದ್ದವರು ಯಾರು, ಆ ಪ್ರಕರಣದಲ್ಲಿ ತಮ್ಮ ಭಾವಮೈದುನನ ಪಾತ್ರ ಏನು ಎಂದು ಪ್ರಶ್ನಿಸಿದರು.
ನಕಲಿ ಮಧ್ಯ ತಯಾರಿಸಲು ಹುಬ್ಬಳ್ಳಿಯಿಂದ ಬಂದಿದ್ದ ತಂಡಕ್ಕೆ ಜಾಮೀನು ಕೊಟ್ಟು ಬಿಡಿಸಿದವರು ಯಾರು, ಆ ಪ್ರಕರಣದಲ್ಲಿ ಸಂಬಂಧಿಯ ಹೆಸರು ಕೈ ಬಿಡಿಸಿ ಜ್ಯುವೆಲರ್ ಮಾಲೀಕನನ್ನು ಜೈಲಿಗೆ ತಳ್ಳಿದವರು ಯಾರು ಎಂದು ಪ್ರಶ್ನಿಸಿದರು.
ಗೋಷ್ಟಿಯಲ್ಲಿ ನಗರಸಭೆ ಸದಸ್ಯ ಪರಮೇಶ್ವರ ರಾಜ ಅರಸ್, ಮುಖಂಡರಾದ ಬೆಟ್ಟಗೆರೆ ಪ್ರವೀಣ್, ತನೋಜ್ ನಾಯ್ಡು, ರಾಜೇಶ್, ಶ್ರೀಕಾಂತ್, ಶಿವಕುಮಾರ್ ಇದ್ದರು.

