ಸಾವಿರಾರು ವರ್ಷಗಳಿಂದ ಸವೆಯದ ಹಟ್ಟಿ ಚಿನ್ನದ ಗಣಿ ಈಗ ಲಾಭದತ್ತ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಸಾವಿರಾರು ವರ್ಷಗಳಿಂದ ಸವೆಯದ ಹಟ್ಟಿ ಚಿನ್ನದ ಗಣಿ ಈಗ ಲಾಭದತ್ತ.
ಬೆಂಗಳೂರು ಮೇ ೧೬: ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಮುಂದಿಟ್ಟುಕೊಂಡು ಈಗ ದೇಶಾದ್ಯಂತ ಚಿನ್ನ ಖರೀದಿಯ ಬಗ್ಗೆ ವ್ಯಾಪಕ ಚರ್ಚೆ ವಿಮರ್ಶೆ ಟೀಕೆಗಳು ಪರ ಮತ್ತು ವಿರೋಧ ಈ ಎರಡು ಮಗ್ಗಲುಗಳಲ್ಲಿಯೂ ನಡೆಯುತ್ತಿವೆ, ಹಾಗಾಗಿ ಇದು ಅವಿನ್ ಟಿವಿ ಸುದ್ದಿಜಾಲದ ನ ಇಂದಿನ ಚಿನ್ನದ ಮಾತು.
ಇಡೀ ಭಾರತದಲ್ಲಿರುವುದು ಹತ್ತರಿಂದ ಹದಿನೈದು ಚಿನ್ನದ ಗಣಿಗಳು ಮಾತ್ರ, ಅದರಲ್ಲಿ ಸಕ್ರಿಯವಾಗಿ ಚಿನ್ನವನ್ನು ಉತ್ಪಾದನೆ ಮಾಡುತ್ತಿರುವುದು ಕೇವಲ ಮೂರು ಚಿನ್ನದ ಗಣಿಗಳು ಮಾತ್ರ ಎನ್ನಲಾಗುತ್ತದೆ, ಈ ಮೂರು ಚಿನ್ನದ ಗಣಿಯಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿರುವ ಹಟ್ಟಿ ಚಿನ್ನದ ಗಣಿಯು ಒಂದು.
ಕರ್ನಾಟಕ ಸಾಂಸ್ಕೃತಿಕ ಮತ್ತು ಚಾರಿತ್ರಿಕ ರಾಯಭಾರಿಯಂತಿರುವ ಹಟ್ಟಿ ಚಿನ್ನದ ಗಣಿಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇದೆ ಎನ್ನಲಾಗುತ್ತದೆ, ಮೌರ್ಯರ ದೊರೆ ಅಶೋಕನ ಕಾಲಕ್ಕೂ ಮುಂಚೆ ಹಟ್ಟಿ ಚಿನ್ನದ ಗಣಿ ಕಾರ್ಯರಂಭ ಮಾಡಿತ್ತು ಎನ್ನಲಾಗುತ್ತದೆ, ಅದೆಷ್ಟೋ ರಾಜ ಮನೆತನದ ವೈಭವಕ್ಕೆ ಮೆರುಗು ನೀಡಿದ್ದ ಹಟ್ಟಿ ಚಿನ್ನದ ಗಣಿಗೆ ವಿಶ್ವದಲ್ಲಿಯೇ ಅತೀ ದೊಡ್ಡ ಹೆಗ್ಗಳಿಕೆ ಇದೆ.
ಇಂತಹ ಹಟ್ಟಿ ಚಿನ್ನದ ಗಣಿ ಕಂಪನಿ 2025-26ನೇ ಸಾಲಿನಲ್ಲಿ 1,691.50 ಕೆ.ಜಿ ಚಿನ್ನ ಉತ್ಪಾದಿಸಿ, ಇದೇ ಮೊದಲ ಬಾರಿಗೆ ರೂ.1,910 ಕೋಟಿ ವಹಿವಾಟು ನಡೆಸಿ, ರೂ.844 ಕೋಟಿ ನಿವ್ವಳ ಲಾಭ ಗಳಿಸಿದ ಹಿನ್ನೆಲೆಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷರಾದ ಜೆ.ಟಿ ಪಾಟೀಲ ಅವರು ಇಂದು ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಅಭಿನಂದಿಸಿ, ಸನ್ಮಾನಿಸಿದರು.
ಗೃಹ ಸಚಿವರಾದ ಜಿ.ಪರಮೇಶ್ವರ, ಹಟ್ಟಿ ಚಿನ್ನದ ಗಣಿಯ ವ್ಯವಸ್ಥಾಪಕ ನಿರ್ದೇಶಕಿಯಾದ ಆರ್.ಶಿಲ್ಪ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
•••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

