लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ರೈತರ ಹಿತ ಕಾಪಾಡಲು ಮೇ.23ರಂದು ರೈತರ ಸಮಾವೇಶ: ಬಿ.ಕೆ.ಲಕ್ಷ್ಮಣ್‌ ಕುಮಾ‌ರ್…

1 min read

‎ರೈತರ ಹಿತ ಕಾಪಾಡಲು ಮೇ.23ರಂದು ರೈತರ ಸಮಾವೇಶ: ಬಿ.ಕೆ.ಲಕ್ಷ್ಮಣ್‌ ಕುಮಾ‌ರ್
‎
‎ಮೂಡಿಗೆರೆ: ರೈತ ಹಿತರಕ್ಷಣಾ ವೇದಿಕೆಯಿಂದ ಕಡೂರು, ಮೂಡಿಗೆರೆ ಹಾಗೂ ಕಳಸ ತಾಲೂಕಿನ ರೈತರ ಹಿತಾಸಕ್ತಿ ಕಾಪಾಡಿಕೊಳ್ಳುವ ಸಲುವಾಗಿ ಮೂಡಿಗೆರೆ ಪಟ್ಟಣದ ರೈತ ಭವನದಲ್ಲಿ ಮೇ.23.ರಂದು ಬೆಳಗ್ಗೆ 10. ಗಂಟೆಗೆ ರೈತ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್‌ ಕುಮಾರ್ ಹೇಳಿದರು.
‎
‎ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಫಾ.ನಂ 50, 53 ಮಂಜೂರಾದ ರೈತರ ಭೂಮಿಯನ್ನು ಕಂದಾಯ ಕಾರ್ಯದರ್ಶಿಗಳು ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಭೂ ಹಗರಣವಾಗಿದೆ ಎಂದು ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ ತನಿಖೆ ನಡೆಸಿದ ಅಧಿಕಾರಿಗಳು ವರದಿ ಸಲ್ಲಿಸುವುದನ್ನು ಬಿಟ್ಟು ಅರ್ಜಿಗಳನ್ನೇ ವಜಾ ಮಾಡಿ ರೈತರನ್ನು ಸಂಕಷ್ಟಕ್ಕೆ ತಳ್ಳಲಾಗಿತ್ತು.
‎ ಇದರಿಂದ ಬ್ಯಾಂಕ್. ರಸಗೊಬ್ಬರ ಪಡೆಯಲು ಸಾಧ್ಯವಾಗುತ್ತಿಲ್ಲ. ಇದನ್ನು ಪ್ರಶ್ನಿಸಿ ರೈತ ಹಿತರಕ್ಷಣಾ ವೇದಿಕೆಯು ಹೈಕೋರ್ಟ್ ಮೊರೆ ಹೋಗಿದ್ದರಿಂದ ಅಧಿಕಾರಿಗಳು ಅರ್ಜಿ ವಜಾ ಮಾಡಿರುವುದು ತಪ್ಪೆಂದು ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ನಮ್ಮ ಹೋರಾಟದಲ್ಲಿ ನ್ಯಾಯವಿದೆ ಎಂದು ಅರ್ಥ ಮಾಡಿಕೊಂಡು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರ ನೆರವಿಗೆ ನಿಲ್ಲಬೇಕು. ಇಲ್ಲವಾದರೆ ಮುಂದಿನ ಹೋರಾಟಕ್ಕೆ ಅಡಿಪಾಯ ಹಾಕುವ ಸಲುವಾಗಿ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
‎
‎ಸಮಾವೇಶದಲ್ಲಿ ಚರ್ಚಿಸಲು ಹೈಕೋರ್ಟ್‌ ಹಿರಿಯ ವಕೀಲರಾದ ಎಂ.ಶಿವಪ್ರಸಾದ್ ಹಾಗೂ ಎಚ್.ಎಂ.ಪ್ರಸಾದ್ ಭಾಗವಹಿಸಲಿದ್ದಾರೆ. ಅಲ್ಲದೇ ಮುಂದಿನ ಕಾನೂನು ಸಮರ ನಡೆಸಲು ನಮ್ಮೊಡನೆ ಚರ್ಚಿಸಿ ಸಲಹೆ ನೀಡಲಿದ್ದಾರೆ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಇಂದು ರೈತರು ಸಂಕಷ್ಟ ಪಡುವಂತಾಗಿದೆ. ರೈತರು ಮೋಸ ಮಾಡಿ ಭೂಮಿ ಪಡೆದಿರಲಿಲ್ಲ.
‎
‎ಅಪರಾಧ ಕೂಡ ಮಾಡಿಲ್ಲ. ಹಾಗಾಗಿ ಯಾರೂ ಕೂಡ ಭಯಪಡೆದೇ ಅಂದು ನಡೆಯುವ ಸಮಾವೇಶಕ್ಕೆ ಕಡೂರು ಮತ್ತು ಮೂಡಿಗೆರೆ, ಕಳಸ ತಾಲೂಕಿನ ಎಲ್ಲಾ ಎಲ್ಲಾ ಫಲಾನುಭವಿಗಳು ಹಾಗೂ ರೈತ ಬಂಧುಗಳು ಆಗಮಿಸಬೇಕು. ಜತೆಗೆ ಮುಂದಿನ ಕಾನೂನು ಸಮರಕ್ಕೆ ತಮ್ಮ ಆಧಾರ್ ಕಾರ್ಡ್ ಮತ್ತು ಪಹಣಿ ತರಬೇಕಾಗಿ ಮನವಿ ಮಾಡಿ ದರು.
‎
‎ವೇದಿಕೆ ಉಪಾಧ್ಯಕ್ಷ ಸುರೇಶ್ ಬಂಕೇನಹಳ್ಳಿ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಹ್ಯಾರಗುಡ್ಡೆ, ರವಿ ಮಗ್ಗಲಮಕ್ಕಿ, ನವೀಜ್ ಮರೇಬೈಲ್, ಅನಿಲ್ ಗುರುದೇವ್ ಜನ್ನಾಪುರ, ಪ್ರಸನ್ನ ಗೌತಳ್ಳಿ, ಅಬ್ದುಲ್ ರೆಹಮಾನ್ ಇಂದ್ರವಳ್ಳಿ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed