लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದೇವರ ಅಂಗಳದಲ್ಲಿ ಆಣೆ ಪ್ರಮಾಣಕ್ಕೆ ಇಳಿದಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರದ ಫಲಿತಾಂಶದ ರಿಟ್ ಅರ್ಜಿ ಇಂದು ಸುಪ್ರೀಂ ಕೋರ್ಟ್ ನ ಅಂಗಳದಲ್ಲಿ ವಿಚಾರಣೆ…..

1 min read

ಅವಿನ್ ಟಿವಿ ಸುದ್ದಿಜಾಲ ✍️:   ದೇವರ ಅಂಗಳದಲ್ಲಿ ಆಣೆ ಪ್ರಮಾಣಕ್ಕೆ ಇಳಿದಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರದ ಫಲಿತಾಂಶದ ರಿಟ್ ಅರ್ಜಿ ಇಂದು ಸುಪ್ರೀಂ ಕೋರ್ಟ್ ನ ಅಂಗಳದಲ್ಲಿ ವಿಚಾರಣೆ.

ಚಿಕ್ಕಮಗಳೂರು ಮೇ ೧೧: 2003ರಲ್ಲಿ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಪರಿಶೀಲನೆಗೆ  ಆದೇಶ ನೀಡಿದ್ದು ರಾಜ್ಯ ಉಚ್ಚ ನ್ಯಾಯಾಲಯ,ಆದರೆ ಈ ಮರು ಪರಿಶೀಲನೆಯ  ಎಣಿಕೆಯಲ್ಲಿ  ಮೇಲುಗೈ ಸಾಧಿಸಿದ ಅಭ್ಯರ್ಥಿಗೆ  ಶಾಸಕ ಎಂದು  ದೃಢೀಕರಣ ಪತ್ರ ನೀಡುವ ಅಧಿಕಾರ ಮತ್ತು ಅವಕಾಶ ಚುನಾವಣಾ ಅಧಿಕಾರಿಗೆ ಇದೆಯೇ ಅಥವಾ ನ್ಯಾಯಾಲಯವೇ ಈ ಫಲಿತಾಂಶವನ್ನು ಘೋಷಣೆ ಮಾಡಬೇಕಿತ್ತೆ   ಎಂಬ ಪ್ರಶ್ನೆಗೆ ಘನ ನ್ಯಾಯಾಲಯದಿಂದ ಏನು ಉತ್ತರ ಬರುತ್ತದೆ ನೋಡಬೇಕಾಗಿದೆ.

‎ಇಂದು ಸುಪ್ರೀಂ ಕೋರ್ಟ್ ನ ಮುಂದೆ  ವಿಚಾರಣೆಗೊಳ ಪಡುತ್ತಿರುವ ರಿಟ್ ಅರ್ಜಿಯ ವಿಚಾರಣೆಗೆ ಸಂಬಂಧಪಟ್ಟಂತೆ ಹಿರಿಯ ಪತ್ರಕರ್ತ ಸ್ನೇಹಿತರೊಬ್ಬರ   ಈ ಕೆಳಕಂಡ ಸುದ್ದಿಯನ್ನು ಅವಿನ್ ಟಿವಿ ಸುದ್ದಿಜಾಲವು ಯಥವತ್ತಾಗಿ  ತನ್ನ ಓದುಗರಿಗಾಗಿ ನೀಡಿದೆ.👇
•••••••••••
ಶೃಂಗೇರಿ ವಿಧಾನಸಭಾ ಕ್ಷೇತ್ರ    *ಇಂದು ಏನಾಗಬಹುದು*
ದಿನಾಂಕ 02-05-2026 ಮತ್ತು 03-05-2026 ನಡುವೆ ಹಗಲು ರಾತ್ರಿ ಆಗುವುದರೊಳಗೆ
‎ಶೃಂಗೇರಿ ವಿಧಾನಸಭಾ ಕ್ಷೇತ್ರದ
‎ಜನತೆ ಇಬ್ಬರು ಶಾಸಕರನ್ನು ಕಾಣಬೇಕಾಯಿತು.ಹಾಲಿ ಶಾಸಕರಾದ ಟಿ.ಡಿ.ರಾಜೇಗೌಡರು  ಮಾಜೀಯಾದರು.
ಮಾಜೀ ಶಾಸಕರಾದ ಡಿ.ಎನ್.ಜೀವರಾಜ್ ಹಾಲಿ ಶಾಸಕರಾದರು.

ಕರ್ನಾಟಕ ಹೈಕೋರ್ಟ್ ನ ಈ ಆದೇಶ ದೇಶದ ಇತಿಹಾಸದಲ್ಲಿ ಈ ಐತಿಹಾಸಿಕ ಬದಲಾಬಣೆಯೊಂದಕ್ಕೆ
ಕಾರಣವಾಗಿದೆ.

‎ಹೈಕೋರ್ಟ್ ತನ್ನ ಆದೇಶದಲ್ಲಿ 2023 ಮೇ 13ರ
ಫಲಿತಾಂಶದಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದ ಡಿ ಎನ್ ಜೀವರಾಜ್
ಸಲ್ಲಿಸಿದ ಕೋರಿಗೆಯಂತೆ ತಿರಸ್ಕೃತ 279 ಅಂಚೆ ಮತಗಳನ್ನು ಮರು ಪರಿಶೀಲಿಸಿ,
‎ಇದರಲ್ಲಿ ಪುರಸ್ಕೃತ ಮತಗಳು ಕಂಡು ಬಂದರೆ ಉಳಿದ ಪುರಸ್ಕೃತ ಅಂಚೆ ಮತಗಳೊಂದಿಗೆ ಎಣಿಕೆ ಮಾಡಿ
‎ಫಲಿತಾಂಶ ತಿಳಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.ಆದರೆ
‎ಚುನಾವಣಾ ಆಯೋಗ 279
ಮತಗಳನ್ನು ಪರಿಶೀಲಿಸಿ ಅದರಲ್ಲಿ ಪುರಸ್ಕೃತವಾದ 05 ಮತಗಳೊಂದಿಗೆ 2023 ರಲ್ಲಿ
‎ಪುರಸ್ಕೃತವಾದ ಮತಗಳೊಂದಿಗೆ ಎಣಿಸಬೇಕಿತ್ತು.ಈ ಬಗ್ಗೆ ನ್ಯಾಯಾಲಯ  ಏನು ಹೇಳುತ್ತದೆ ನೋಡಬೇಕು.

‎2023 ರಲ್ಲಿ ಪುರಸ್ಕೃತವಾದ
ಮತಗಳು 2026 ರ ಮರು ಪರಿಶೀಲನೆಯಲ್ಲಿ ಹೇಗೆ ತಿರಸ್ಕೃತ ಮತಗಳಾಯಿತು ಎಂದು ತನಿಖೆಗೆ ಕೋರ್ಟ್ ಆದೇಶಿಸಿಲು ಸಾಧ್ಯವಿದೆ.

ಹೈಕೋರ್ಟ್ ನ್ಯಾಯಾಧೀಶರು
‎2023 ಚುನಾವಣೆ ಫಲಿತಾಂಶ
ವಜಾ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಚುನಾವಣಾಧಿಕಾರಿ ತಿರಸ್ಕೃತ 279 ಮತಗಳ ಮರು ಪರಿಶೀಲನೆ ಮತ್ತು ಪುರಸ್ಕೃತ
ಮತಗಳ ಮರು ಎಣಿಕೆಯಲ್ಲಿ
ವ್ಯತ್ಯಾಸ ಕಂಡು ಬಂದಿದ್ದರಿಂದ
‎ಫಲಿತಾಂಶದ ಘೋಷಣೆ ಮಾಡಿದರು. ಆದರೆ ತೀರ್ಪಿತ್ತ
‎ಹೈಕೋರ್ಟ್ ಗಮನಕ್ಕೆ ತರದೆ
‎ಚುನಾವಣಾಧಿಕಾರಿ ಮರು ಪರಿಶೀಲನೆ ಮತ್ತು ಮರು ಎಣಿಕೆಯಲ್ಲಿ ಮೇಲುಗೈ ಸಾಧಿಸಿದ ಅಭ್ಯರ್ಥಿಗೆ ಶಾಸಕ ಎಂದು ಧೃಡೀಕರಣ ಪತ್ರ ನೀಡಲು ಅವಕಾಶ ಇತ್ತೆ ಎನ್ನುವುದು ಪ್ರಶ್ನಾರ್ಹ.

02-05-2026 ಎಣಿಕೆ ಸಂಧರ್ಭದಲ್ಲಿ ಮತಪತ್ರಗಳನ್ನು
‎ಸಂಗ್ರಹಿಸಿಡಲಾಗಿದ್ದ ಸ್ಟ್ರಾಂಗ್ ರೂಂ ನಲ್ಲಿ ಮತ ಪೆಟ್ಟಿಗೆಗಳ ಅಭದ್ರತೆ,ಸೀಲ್ ಹಾಕದಿರುವುದು,ಮತ ಪೆಟ್ಟಿಗೆಗಳು ತೆರೆದಂತೆ ಇರುವುದು ಹೀಗೆ ಮೇಲ್ನೋಟಕ್ಕೆ ಅಕ್ರಮ
‎ನಡೆದಿರುವ ಸಂಶಯ ಕಂಡು ಬಂದಿದೆ ಎಂದು ಟಿ ಡಿ ರಾಜೇಗೌಡ ಅವರು ಆರೋಪಿಸಿದ್ದಾರೆ, ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸದೆ, ಮುಖ್ಯವಾಗಿ ಮರು ಪರಿಶೀಲನೆಗೆ ಆದೇಶ ನೀಡಿರುವ ಹೈಕೋರ್ಟ್ ಗಮನಕ್ಕೆ ತರದೆ ಡಿ ಎನ್
ಜೀವರಾಜ್ ಅವರನ್ನು ಶಾಸಕ ಎಂದು ಘೋಷಿಸಿದೆ ಎಂಬ ತಕರಾರು ರಾಜೇಗೌಡರದ್ದು.

ಹೈಕೋರ್ಟ್ ನ್ಯಾಯಾಧೀಶರು
ತೆರೆದ ಕೋರ್ಟಿನಲ್ಲಿ ಫಲಿತಾಂಶ
‎Set aside ಮಾಡುವುದಿಲ್ಲ ಎಂದು ಹೇಳಿದ್ದರೂ ಅದರ
ವಿರುದ್ಧವಾಗಿ ಶಾಸಕ ರಾಜೇಗೌಡರ ಶಾಸಕ ಸ್ಥಾನವನ್ನು ರದ್ದುಗೊಳಿಸಿ ಪರಾಜಿತ ಡಿ.ಎನ್.ಜೀವರಾಜ್
‎ಜಯ ಗಳಿಸಿದ್ದಾರೆ ಎಂದು ಘೋಷಣೆ ಮಾಡಿರುವುದು ಕೂಡ ಪ್ರಶ್ನಾರ್ಹವಾಗಿದೆ.

ಸುಪ್ರೀಂಕೋರ್ಟ್ ಮುಂದೆ
ಇಂದು ಬರಲಿರುವ ರಿಟ್ ಅರ್ಜಿ
‎ಟಿ.ಡಿ.ರಾಜೇಗೌಡರಿಗೆ ನ್ಯಾಯ
ಒದಗಿಸುತ್ತದೋ ಅಥವಾ ಜೀವರಾಜ್ ಶಾಸಕರಾಗಿ ಯಾವುದೇ ಸಾಂವಿಧಾನಿಕ ಕರ್ತವ್ಯ ನಿಭಾಯಿಸದಂತೆ
ತಡೆ ನೀಡುತ್ತದೆಯೋ ಎಂದು
‎ಕಾದು ನೋಡಬೇಕು.

ಘನ ನ್ಯಾಯಾಲಯದ ತೀರ್ಪು ಏನೇ ಇರಲಿ ಅದನ್ನು ಸ್ವಾಗತಿಸೋಣ.

ಆದರೆ *ಕೊನೆಗೂ ಉಳಿಯುವ ಪ್ರಶ್ನೆ*
‎*ಇದ್ದವರಲ್ಲಿ*
‎‌ ‌              *ಮತಪತ್ರ*
‎                   *ಕದ್ದವರಾರು ಎಂಬುದು?*
‎       •••••••••••••
‎ಡಿ.ಎಂ.ಮಂಜುನಾಥಸ್ವಾಮಿ ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed