ದಿನಾಂಕ 8/05/2026 ಶುಕ್ರವಾರದಂದು ಮೂಡಿಗೆರೆ ಜೇಸಿ ಭವನದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲಿಜನ್ ಮೂಡಿಗೆರೆ ವತಿಯಿಂದ….
1 min read
ದಿನಾಂಕ 8/05/2026 ಶುಕ್ರವಾರದಂದು ಮೂಡಿಗೆರೆ ಜೇಸಿ ಭವನದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲಿಜನ್ ಮೂಡಿಗೆರೆ ವತಿಯಿಂದ 2026-27 ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅತ್ಯಂತ ಯಶಸ್ವಿಯಾಗಿ ನೆರವೇರಿತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮೂಡಿಗೆರೆ ವತಿಯಿಂದ ಹಾಗೂ ದಾನಿಗಳ ಸಹಾಯದಿಂದ ಸುಮಾರು ನಲವತ್ತಐದು ಸಾವಿರ ರೂಪಾಯಿಗಳ ಬೆಳೆಬಾಳುವ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಯಿತು
ಗಾಲಿ ಕುರ್ಚಿಗಳು 3
2 ಶ್ರವಣ ಸಾಧನ ಪ್ರಾಯಶಕತ್ವವನ್ನು ( ಚಿಕ್ಕಮಗಳೂರು ರೆಡ್ ಕ್ರಾಸ್ ಸೊಸೈಟಿ ಪ್ರಾಯೋಜಕತ್ವದಲ್ಲಿ ) ವಿತರಿಸಲಾಯಿತು
ಕಂಕುಳ ಕೂಲು 2
ವಾಕರ್ 1
ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಯಿತು
ಸಭೆಯ ಅಧ್ಯಕ್ಷತೆಯನ್ನು Snr ಡಾ||ರಾಮಚರಣ ಅಡ್ಯಾoತಾಯ ವಹಿಸಿದ್ದರು ನಿಕಟಪೂರ್ವ ಅಧ್ಯಕ್ಷರಾದ snr ಬಸವರಾಜ್ B. ಸ್ವಾಗತಿಸಿದರು ಮುಖ್ಯ ಅತಿಥಿಯಾಗಿ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ Snr PPF ಜಯೇಶ M.R., ಹಾಗೂ ಗೌರವಾನ್ವಿತ ಅತಿಥಿಗಳಾಗಿ Snr PPF ಸಿದ್ದಗಂಗಯ್ಯ, ರಾಷ್ಟ್ರೀಯ ಉಪಾಧ್ಯಕ್ಷ Snr PPPF ಶಶಿಕಲಾ ಶೆಟ್ಟಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಚಿಕ್ಕಮಗಳೂರು ಜಿಲ್ಲೆ , ಅಧ್ಯಕ್ಷರಾದ ಶ್ರೀ ಪ್ರದೀಪ್ ಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 2026 27ರ ನೂತನ ಅಧ್ಯಕ್ಷರಾಗಿ Snr ಅಮೀನ್ ಅಹಮದ್ ಪ್ರಮಾಣವಚನ ಸ್ವೀಕರಿಸಿದರು ಕಾರ್ಯದರ್ಶಿಯಾಗಿ ಚಂದ್ರಶೇಖರ್ ಕುನ್ನಹಳ್ಳಿ, ಖಜಾಂಚಿಯಾಗಿ Snr ರವಿಕುಮಾರ್ ಉಪಾಧ್ಯಕ್ಷರುಗಳಾಗಿ Snr ಜಗಮೋಹನ್ B.K., snr ಪ್ರದೀಪ್ ಕುಮಾರ್, Snr ಮನಮೋಹನ್,Snr ವಿನೋದ್ ಕುಮಾರ್ ಶೆಟ್ಟಿ, Snr ಸತ್ಯನಾರಾಯಣ ಮತ್ತು ನಿರ್ದೇಶಕರುಗಳಾಗಿ Snr ತೇಜಸ್ವಿ KlS,snr ಅತುಲರಾವ್, Snr ವಿಜಯ್ ಕುಮಾರ್, Snr ರವಿಶಂಕರ್,Snr ಶಶೀಕಣ್ ಪ್ರಮಾಣವಚನ ಸ್ವೀಕರಿಸಿದರು ಮೂಡಿಗೆರೆ ಸೀನಿಯರ್ ಚೇಂಬರ್ ಸಂಸ್ಥಾಪಕ ಅಧ್ಯಕ್ಷರಾದ Snr ಪುಣ್ಯ ಮೂರ್ತಿ N.L. ರವರಿಗೆ PPF ಫೆಲೋಶಿಪ್ ಅನ್ನು ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ Snr PPF ಜಯೇಶ್ ವಿತರಿಸಿದರು ಸೀನಿಯರ್ ಚೇಂಬರ್ ಮೂಡಿಗೆರೆಯ 2025 ರ ಕಾರ್ಯದರ್ಶಿ Srn ಮನಮೋಹನ್ B.N. ಕಾರ್ಯಕ್ರಮವನ್ನು ನಿರೂಪಿಸಿದರು 2026ರ ಕಾರ್ಯದರ್ಶಿsnr ಚಂದ್ರಶೇಖರ್ ಕುನ್ನಳ್ಳಿ ವoದಿಸಿದರು.







