ಅಥಣಿ ಪಟ್ಟಣದ ಶಟ್ಟರ್ ಮಠ್ ಮೂಲ ಶ್ರೀ ದಾನಮ್ಮ ದೇವಿಯ 60ನೇ ಜಾತ್ರಾ ಮಹೋತ್ಸವ ಅತಿ ಸರಳವಾಗಿ ನೆರವೇರಿತು. #avintvcom
1 min readಶ್ರೀ ದಾನಮ್ಮ ದೇವಿಯ ಅರವತ್ತನೆಯ ಜಾತ್ರಾ ಮಹೋತ್ಸವ
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಶಟ್ಟರ್ ಮಠ್ ಗಲ್ಲಿಯ ಮೂಲ ಶ್ರೀ ದಾನಮ್ಮ ದೇವಿಯ 60ನೇ ಜಾತ್ರಾ ಮಹೋತ್ಸವ ಅತಿ ಸರಳವಾಗಿ ನೆರವೇರಿತು.
ಭಕ್ತರ ಹೃದಯ ತನು ಮನ ದಲ್ಲಿ ವಾಸ ವಾಗಿರುವ ಮಹಾತಾಯಿಯ ಮಹೋತ್ಸವ ಕೋವಿಡ -19 ಇರುವ ಕಾರಣ ಅತೀ ಸರಳವಾಗಿ ಆಚರಣೆ ಮಾಡಲಾಯಿತು . ಬೆಳಿಗ್ಗೆ 6:00 ಗಂಟೆಗೆ ಶ್ರೀ ದೇವಿಗೆ ರುದ್ರಾಭಿಷೇಕ ನಂತರ ಮಹಾ ತಾಯಿಯ ಅಲಂಕಾರ ಪುಜೆ ಹಾಗು ಮಂಗಳಾರತಿ ನೆರವೇರಿತು.
ಅನಂತರದಲ್ಲಿಶ್ರೀ ದಾನಮ್ಮ ದೇವಿ, ಸೋಮನಾಥನ ಪಲ್ಲಕ್ಕಿಗೆ ಪೂಜೆ ಹಾಗು ಮಂಗಳಾರತಿ ನೆರವೇರಿತು ಭಕ್ತರು ಶ್ರೀ ದೇವಿಯ ದರುಶನ ಪಡೆದರು. ಬಂದ ಭಕ್ತರಿಗೆ ಸೆನಿಟ್ಜರ್ ಸಿಂಪಡಲಿಸಿ ದರ್ಶನಕ್ಕೆ ಅವಕಾಶ ನೀಡಿ, ಪ್ರಸಾದ ವನ್ನು ಹಂಚಲಾಯಿತು,
ವಿವಿಧ ಬಗೆಯ ಮಾಲೆ ಪುಷ್ಪ ದೊಂದಿಗೆ ಮಹಾ ಶಿವ ಶರಣೆ ಶ್ರೀ ದಾನಮ್ಮ ದೇವಿಯ ಅಲಂಕಾರ ಪೂಜೆ ಭಕ್ತರ ಕಂಗೊಳಿಸುವಂತೆ ಅಲಂಕೃತ ಗೊಂಡ್ದಿದ್ದು ವಿಶೇಷ ವಾಗಿತ್ತು .
ಸಕಲ ಸದ್ಬಕರು ಮೂಲ ಶ್ರೀ ದಾನಮ್ಮ ದೇವಿ ದೇವಸ್ಥಾನ ಶಟ್ಟರ್ ಮಠ್ ಗಲ್ಲಿ ಅಥಣಿ
ವರದಿ ಪೀರು ನಂದೇಶ್ವರ್


