लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀಕಂಠಪ್ಪ ಮಾದರಿಯ ಕೆಲಸ ಮಾಡುತ್ತಿದ್ದೇನೆ
‎
‎ಚಿಕ್ಕಮಗಳೂರು: ಜಾತಿ, ಪಕ್ಷ ರಹಿತವಾಗಿ ಕೆಲಸ ಮಾಡಿರುವ ಡಿ.ಸಿ. ಶ್ರೀಕಂಠಪ್ಪ ಅವರ ರೀತಿಯಲ್ಲಿ ಮಾದರಿಯ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.
‎
‎ವಿಶೇಷ ಅನುದಾನದಡಿ ನಿರ್ಮಾಣ ಮುಖ್ಯಮಂತ್ರಿಗಳ ಮಾಡಲಾಗಿರುವ ಭಕ್ತರಹಳ್ಳಿಯಿಂದ ಕೆಳದೇವರಹಳ್ಳಿಗೆ ಹೋಗುವ ನೂತನ ಕಾಂಕ್ರೀಟ್ ರಸ್ತೆಯನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
‎
‎ಡಿ.ಸಿ. ಶ್ರೀಕಂಠಪ್ಪ ಅವರು ಎಂದಿಗೂ ಜಾತಿ, ಪಕ್ಷದ ರಾಜಕಾರಣ ಮಾಡಲಿಲ್ಲ, ಅವರನ್ನು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಜನರು ಇಷ್ಟಪಡುತ್ತಿದ್ದರು. ಅದೇ ಮಾದರಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.
‎
‎ಜನಪ್ರತಿನಿಧಿಯಾಗಲು ನನ್ನನ್ನು ನೀವು ಆಶೀರ್ವಾದ ಮಾಡಿದ್ದೀರಾ, ಮತ್ತೆ ನೀವು ನನ್ನನ್ನು ಆಶೀರ್ವಾದ ಮಾಡಿ. ‘ನಾನು’ ಎಂಬ ಅಹಂಕಾರವನ್ನು ಕೊಡಬೇಡ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಹಂ ಇದ್ದವರಿಗೆ ದೇವರು ಎಲ್ಲಿಗೆ ಕಳುಹಿಸಿದ್ದಾರೆ ಎಂಬುದು ನೋಡಿದ್ದೇವೆ ಎಂದು ಹೇಳಿದರು.
‎
‎ರಾಜ್ಯ ಸರ್ಕಾರ, ಆರ್ಥಿಕ ಹಾಗೂ ಸಮ ಸಮಾಜ ನಿರ್ಮಾಣ ಮಾಡಲು 57,000 ಕೋಟಿ ರು.ಗಳ ಪಂಚ ಗ್ಯಾರಂಟಿ ನೀಡಿದೆ. ಇದರ ಜತೆಗೆ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರು ವಿಶೇಷ ಅನುದಾನವನ್ನು ನೀಡಿದ್ದಾರೆ ಎಂದರು.
‎
‎ಚಿಕ್ಕಮಗಳೂರು ನಗರದ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದವು. ‘ಸೈಕಲ್ ತುಳಿ, ಸಮಸ್ಯೆ ತಿಳಿ’ ಕಾರ್ಯಕ್ರಮ ಹಮ್ಮಿಕೊಂಡು ಸಮಸ್ಯೆ ತಿಳಿಯುವ ಜತೆಗೆ ಇಂಜಿನಿಯರ್ ಅವರೊಂದಿಗೆ ನಗರ ಪ್ರದಕ್ಷಣೆ ಮಾಡಿ ಆದ್ಯತೆಯ ಮೇಲೆ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
‎
‎ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ನಮ್ಮ ದೇಶದ ಮೇಲು ದುಷ್ಪರಿಣಾಮ ಬೀರಿದೆ. ಡಾಂಬರ್ ಬೆಲೆ ಮೂರು ಪಟ್ಟು ಹೆಚ್ಚಳವಾಗಿದೆ. ಕಮರ್ಷಿಯಲ್ ಗ್ಯಾಸ್ ಬೆಲೆ ದುಬಾರಿಯಾಗಿದೆ ಎಂದರು.
‎
‎ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ, ಜಿಪಂ ಮಾಜಿ ಅಧ್ಯಕ್ಷ “ಕೆ.ಮಹಮದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಪರ್ವತೇಗೌಡ, ಶಿವಕುಮಾರ್, ಕಲ್ಲೇಶ್‌ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed