लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಎನ್‌ಡಿಎ ಸರ್ಕಾರ ಮಂಡಿಸಿರುವುದು ನಿಜವಾದ ಮಹಿಳಾ ಮೀಸಲಾತಿ ಮಸೂದೆ ಅಲ್ಲ….

1 min read

‎ಎನ್‌ಡಿಎ ಸರ್ಕಾರ ಮಂಡಿಸಿರುವುದು ನಿಜವಾದ ಮಹಿಳಾ ಮೀಸಲಾತಿ ಮಸೂದೆ ಅಲ್ಲ
‎
‎ ಚಿಕ್ಕಮಗಳೂರು: ಎನ್ ಡಿ ಎ  ಸರ್ಕಾರ ಮಂಡಿಸಿರುವುದು ನಿಜವಾದ ಮಹಿಳಾ ಮೀಸಲಾತಿ ಮಸೂದೆ ಅಲ್ಲ. ಇದು ಲೋಕಸಭೆ ಕ್ಷೇತ್ರ ಪುನರ್ ವಿಂಗಡಣೆಯನ್ನು ಮುನ್ನಲೆಗೆ ತರುವ ರಾಜಕೀಯ ಕುತಂತ್ರವಾಗಿದೆ. ಮಾಜಿ ಸಚಿವೆ ಮೋಟಮ್ಮ ಆರೋಪಿಸಿದರು.
‎
‎ನಗರದ ಪ್ರೆಸ್ ಕ್ಲಬ್‌ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಮಹಿಳಾ ಮೀಸಲಾತಿಯನ್ನು ಭವಿಷ್ಯದ ಜನಗಣತಿ ಮತ್ತು ಡಿಲಿಮಿಟೇಷನ್ಗೆ ಕಟ್ಟಿ ಹಾಕಲಾಗಿದೆ. ತಕ್ಷಣ ಜಾರಿಗೆ ತರಬಹುದಾದ ಶೇ.33 ಮೀಸಲಾತಿಯನ್ನು ಉದ್ದೇಶಪೂರ್ವಕವಾಗಿ ಮುಂದೂಡಲಾಗಿದೆ ಎಂದರು.
‎
‎ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಯತ್ನಿಸಿದ್ದು, ಮಹಿಳೆಯರ ಮಮತೆಯ ಕಾರಣಕ್ಕಲ್ಲ ಮಹಿಳಾ ಮೀಸಲಾತಿ ಕಾಯ್ದೆ ಮಂಡನೆಯ ಸೋಗಿನಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯ ಜಾ ಜಾರಿಗೊಳಿಸುವ ಹುನ್ನಾರ ಎಂದರು.
‎
‎2023 ರಲ್ಲಿ ಸರ್ವಾನುಮತದಿಂದ ಪಾಸಾದ ಮಹಿಳಾ ಮೀಸಲಾತಿ ಬಿಲ್ಲನ್ನು ಲೋಕಸಭೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲು ಮತ್ತೊಮ್ಮೆ ಮಂಡಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮಹಿಳೆಯರಿಗೆ ಮಾಡಿರುವ ದೊಡ್ಡ ಮೋಸವಾಗಿದೆ ಎಂದು ಕಿಡಿಕಾರಿದರು
‎
‎2011 ರ ಜನಗಣತಿಯ ಮೂಲಕ ಸರಿಯಾದ ಮಾರ್ಗಸೂಚಿ ಇಲ್ಲದೆ, ಸರ್ವಾಧಿಕಾರ ಧೋರಣೆಯಿಂದ ಲೋಕಸಭೆ ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿದ್ದು,
‎ಆಗ ಏಕೆ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು. ಮಹಿಳೆಯರ ಹಕ್ಕುಗಳನ್ನು ಚುನಾವಣಾ ಆಯುಧವಾಗಿ ಬಳಸುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರೋಧವಾಗಿದೆ. ಮಹಿಳಾ ಮೀಸಲಾತಿಯನ್ನು ಕೇಂದ್ರ ಸರ್ಕಾರ ಮುಖವಾಡವಾಗಿ ಬಳಸುತ್ತಿದೆ. ಸಂವಿಧಾನಾತ್ಮಕ ಪ್ರಶ್ನೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದು ದೂರಿದರು.
‎
‎ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮಹಿಳೆಯರ ಏಳಿಗೆಗೆ, ಆರ್ಥಿಕ ಸ್ವಾವಲಂಬನೆಗೆ, ರಕ್ಷಣೆಗೆ ಉತ್ತಮವಾದ ಜನಪರವಾದ ಕಾನೂನನ್ನು ಜಾರಿಗೆ ತರಲಾಗಿತ್ತು. ಮಹಿಳೆಯರು ದುರ್ಬಲರಲ್ಲ ಸಬಲರು ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ ಎಂದು ಹೇಳಿದರು.
‎
‎ಕೇಂದ್ರ ಎನ್‌ಡಿಎ ಸರ್ಕಾರದ ರಾಜಕೀಯ ನಾಟಕ ಸತ್ಯ ಬಯಲಾಗಿದೆ. ಬಿಜೆಪಿ, ಕಾಂಗ್ರೆಸ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿದೆ. ಕಾಂಗ್ರೆಸ್ ಮಹಿಳಾ ವಿರೋಧಿಯಾಗಿದ್ದರೆ, ಮೀರಾಕುಮರ್.ಇಂದಿರಾಗಾಂದಿ.   ಅತ್ಯುನ್ನತ ಹುದ್ದೆಗೇರಲು ಸಾಧ್ಯವೇ ಎಂದು ಹೇಳಿದರು.
‎
‎ನಾರಿ ಶಕ್ತಿ ವಂದನಾ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯ ಮೊಸಳೆ ಕಣ್ಣೀರಿಗೆ ದೇಶದ ಮಹಿಳೆಯರು ಮರುಳಾಗಬಾರದು. ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲು ಬಿಜೆಪಿ ಮೀನಾ ಮೇಷ ಏಣಿಸುತ್ತಿದೆ ಎಂದು ದೂರಿದರು.
‎
‎ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾಹುಲಿಯಪ್ಪಗೌಡ ಮಾತನಾಡಿ, ಲೋಕಸಭೆ ಕ್ಷೇತ್ರ ಪುನರ್ ವಿಂಗಡನೆ ಹೆಸರಿನಲ್ಲಿ ಯಾವುದೇ ನಿಯಮಾವಳಿಯನ್ನು ಪಾಲಿಸದೇ ಶೈಕ್ಷಣಿಕವಾಗಿ ದಕ್ಷಿಣ ಭಾರತ ಮುಂದುವರೆಯುತ್ತಿರುವುದರಿಂದ ಇಲ್ಲಿನ ಮೀಸಲಾತಿಯನ್ನು ಕಡಿತಗೊಳಿಸಿ. ಉತ್ತರ ಭಾರತದ ಕಡೆ ಹೆಚ್ಚು ಸ್ಥಾನಗಳನ್ನು ಪಡೆಯಲು ಎನ್‌ಡಿಎ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು `ದೂರಿದರು. 2011 ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಜನಸಂಖ್ಯೆ ಮತ್ತು ಭೌಗೋಳಿಕ ಪ್ರದೇಶವನ್ನು ಆಧರಿಸಿ ಕ್ಷೇತ್ರ ಪುನರ್ ವಿಂಗಡನೆ ಮಾಡಿ ತಕ್ಷಣವೇ ಮಹಿಳಾ ಮೀಸಲಾತಿ ಮಸೂದೆಯನ್ನು ಪಾಸ್ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದಿಂದ ಒತ್ತಾಯ ಮಾಡುತ್ತೇವೆ ಎಂದರು.
‎
ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಬನಾ ಸುಲ್ತಾನ್, ಜಿಲ್ಲಾ ಉಪಾಧ್ಯಕ್ಷೆ ಕಲ್ಪನಾ ಶ್ರೀನಿವಾಸ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಹೇಮಾವತಿ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed