लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸತ್ಯ ಯಾವಾಗಲೂ ಘನವಾಗಿರುತ್ತದೆ, ಹಾಗಾಗಿ  ಸತ್ಯಕ್ಕೆ ಘನತೆ ಜಾಸ್ತಿ,ಇಂತಹ ಘನತೆಯ ಜಗಲಿಯ ಮೇಲೆ ಜನಪದವು ಅರಳಿದೆ…..*

1 min read

‎*ಸತ್ಯ ಯಾವಾಗಲೂ ಘನವಾಗಿರುತ್ತದೆ, ಹಾಗಾಗಿ  ಸತ್ಯಕ್ಕೆ ಘನತೆ ಜಾಸ್ತಿ,ಇಂತಹ ಘನತೆಯ ಜಗಲಿಯ ಮೇಲೆ ಜನಪದವು ಅರಳಿದೆ…..*
‎
‎ಮನುಷ್ಯರಿಗೆ ಮಾತ್ರವಲ್ಲ  ಮಣ್ಣಿಗೂ ಜೀವವಿದೆ, ಜೀವವಿರುವ ಇಂತಹ ಮಣ್ಣು ಮಾತನಾಡತೊಡಗಿದಾಗ ಆ ಮಾತು ಕಥೆಯಾಗುತ್ತದೆ, ಈ ಕಥೆಯು ಹಾಡಾದಾಗ ಅದು ಜನಪದ ಸಮುದಾಯದ  ಜಾನಪದವಾಗುತ್ತದೆ, ಇಂತಹ ಮಣ್ಣಿಗೂ ಮಾತು ಕೊಟ್ಟು ಮಣ್ಣಿನೊಂದಿಗೆ ಬದುಕು ಕಟ್ಟಿಕೊಂಡವರು ನಮ್ಮ ಜನಪದರು.
‎
‎ಜನಪದರ ಇಂತಹ ಮಣ್ಣಿನ ಮಾತಿನಲ್ಲಿ ಅಲಂಕಾರವಿರುವುದಿಲ್ಲ, ಅಲಂಕಾರವಿಲ್ಲದಿದ್ದರೂ ಕೂಡ ಅದಕ್ಕೆ ನೇರವಾಗಿ ಹೃದಯವನ್ನು ಮುಟ್ಟಿ ತಟ್ಟಿ ಮಾತನಾಡಿಸುವ ಧ್ವನಿ ಇರುತ್ತದೆ, ಇಂತಹ ಧ್ವನಿಯನ್ನು ಜೀವದ್ವನಿ ಎನ್ನುತ್ತಾರೆ.
‎
‎ಬದುಕಿಗೆ ಊರುಗೋಲಾಗಿ , ದಾರಿಗೆ ದೀಪವಾಗಿ, ಒಂದು ನಾಡಿನ ಉಗಮಕ್ಕೆ   ಕಾರಣವಾದ ಜನಕೋಟಿಯ ಜೀವದುಸಿರೆ ಜನಪದ ಎನ್ನಬಹುದು.
‎
‎ಇಂತಹ ಜಾನಪದ ಸಾಹಿತ್ಯವು  ಶತಶತಮಾನಗಳ ಗತಿಯಲ್ಲಿ ,ಲಿಪಿಕಾಣದ ಪೂರ್ವದಿಂದ ಹಿಡಿದು,ತಲೆಮಾರಿನಿಂದ ತಲೆಮಾರಿಗೆ ದಾಟಿ, ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಗೊಂಡು, ಕಂಠಸ್ತ್ಯವಾಗಿ ಸಾಗಿ ಬರುತ್ತಿರುವ ಜಾನಪದವು  ಈ ನಾಡಿನ ಪಂಡಿತರಿಗಾಗಿ ಅಲ್ಲ, ಅದು ಸಾಮಾನ್ಯ ಜನರಿಗಾಗಿ ಎಂಬ ಸತ್ಯ ಸಂಗತಿಯನ್ನು ಸಾಮಾನ್ಯ ಜನರು ಅತ್ಯಂತ ತುರ್ತಾಗಿ ಅರಿತು ಆಚರಿಸಿ  ಭವಿಷ್ಯದ ಜನಾಂಗಕ್ಕೆ ಜತನದಿಂದ ವರ್ಗಾಯಿಸಬೇಕಾಗಿದೆ.
‎
‎ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಘಟಕವು ಇತ್ತೀಚಿಗೆ ನಗರದ ಕುವೆಂಪು ಕಲಾಮಂದಿರದಲ್ಲಿ 6ನೇ ಜಿಲ್ಲಾ ಸಮ್ಮೇಳನವನ್ನು ಹಮ್ಮಿಕೊಂಡಿತ್ತು.
‎
‎ ಈ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನು ಪಡೆದುಕೊಂಡವರು   ಸೋಬಾನೆ ಪದದ ಸಿರಿ ಸಂಪದವನ್ನು ತನ್ನಲ್ಲಿ ಮೇಳಯ್ಸಿಕೊಂಡಿರುವ  ಮೂಡಿಗೆರೆಯ  ಹಿರಿಯ ಜಾನಪದ ಕಲಾವಿದೆ, ಮಾಜಿ ಮಂತ್ರಿ ಡಾ. ಮೋಟಮ್ಮನವರು.
‎
‎ಡಾ.ಮೋಟಮ್ಮನವರ   ಸರ್ವಾಧ್ಯಕ್ಷತೆಯಲ್ಲಿ  ಜನಪದ ಜಗಲಿಯ ಮೇಲೆ ಕುಳಿತು, ಜನಪದ ಸಾಹಿತ್ಯದ ಜಾಡು ಹಿಡಿದು ಚಿಂತನ ಮಂಥನ ನಡೆಸಲಾಯಿತು.
‎       ••••••••••••••••✍️
‎ಡಿ.ಎಂ.ಮಂಜುನಾಥಸ್ವಾಮಿ

About Author

Leave a Reply

Your email address will not be published. Required fields are marked *

You may have missed