ತಾಲ್ಲೂಕಿಗೆ 650 ಕೋಟಿ ರೂ. : ಮಲ್ಲೇಶ್….
1 min read
ತಾಲ್ಲೂಕಿಗೆ 650 ಕೋಟಿ ರೂ. : ಮಲ್ಲೇಶ್
ಚಿಕ್ಕಮಗಳೂರು: ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಸಾರಿಗೆ ಬಸ್‌ಗಳನ್ನು ಸುಗಮ ವಾಗಿ ಸಂಚರಿಸಬೇಕು. ಪ್ರಯಾಣಿಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನಿಗಾವಹಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ತಾಲ್ಲೂಕಿಗೆ ಒಟ್ಟು 650 ಕೋಟಿ ರೂ. ಫಲಾನು ಭವಿಗಳಿಗೆ ನೀಡಿದೆ. ಅಲ್ಲದೇ ಬಹುದೊಡ್ಡ ಆರ್ಥಿಕ ಸಹಕಾರ ಒದಗಿಸುವ ಮೂಲಕ ಜನಸಾಮಾನ್ಯರಿಗೆ ನೀ ಡಿದ ಭರವಸೆಯಂತೆ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಈ ಮಧ್ಯೆ ಮುಖ್ಯಮಂತ್ರಿಗಳು ಸರ್ಕಾರಿ ಶಾಲೆಗಳಿಗೆ ಎಂಟು ಗ್ಯಾರಂಟಿ ಘೋಷಿಸುವ ಮೂಲಕ ಶಾಲೆಯನ್ನು ಸುಭದ್ರಗೊಳಿಸಲು ಹೊರಟಿದ್ದಾರೆ ಎಂದರು.
ಇದೇ ವೇಳೆ ತಾಲ್ಲೂಕು ಗ್ಯಾರಂಟಿ ಸದಸ್ಯರು ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ಕುಮಾರ್, ಗ್ಯಾರಂಟಿ ಸದಸ್ಯರುಗಳು ಉಪಸ್ತಿತರಿದರು.

