ಬೀರೂರು ಆರಕ್ಷಕ ಠಾಣಾಧಿಕಾರಿ ತಿಪ್ಪೇಶ್ ಪತ್ನಿ ಪದ್ಮಾ ನೇಣಿಗೆ ಶರಣು. …
1 min read
ಅವಿನ್ ಟಿವಿ ಸುದ್ದಿಜಾಲ ✍️: ಬೀರೂರು ಆರಕ್ಷಕ ಠಾಣಾಧಿಕಾರಿ ತಿಪ್ಪೇಶ್ ಪತ್ನಿ ಪದ್ಮಾ ನೇಣಿಗೆ ಶರಣು.
ಬೀರೂರು ಏ ೨೯: ಇಲ್ಲಿನ ಪೊಲೀಸ್ ಠಾಣಾಧಿಕಾರಿ ತಿಪ್ಪೇಶ್ ರವರ ಪತ್ನಿ ಪದ್ಮಾ(38) ಮಧ್ಯರಾತ್ರಿ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಿಪ್ಪೇಶ್ ಮತ್ತು ಪದ್ಮಾ ಪ್ರೀತಿಸಿ ಮದುವೆಯಾದ ಜೋಡಿ ಇವರಿಗೆ ಚೆಂದದ ಎರಡು ಮಕ್ಕಳು ಇವೆ.ಬೇಸಿಗೆ ರಜಾ ಆಗಿರುವುದರಿಂದ ಮಕ್ಕಳ ಸಹಿತ ತವರು ಮನೆಗೆ ಹೋಗಿಬರುತ್ತೇನೆ ಎಂದಿದ್ದಾರೆ ಎನ್ನಲಾಗಿದೆ.
ಅದರೆ ತಿಪ್ಪೇಶ್ ಇದಕ್ಕೆ ಒಪ್ಪದೆ ಇರುವುದು ಸಾವಿಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ , ಮೃತ ಪದ್ಮಾ ಅವರ ಸಂಬಂಧಿಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆದ ಮೇಲೆ ನಿಜ ಸ್ಥಿತಿ ಏನು ಎಂಬುದನ್ನು ತಿಳಿಯಬೇಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಬ್ ಇನ್ಸ್‌ಪೆಕ್ಟರ್ ತಿಪ್ಪೇಶ್ ಜನರೊಟ್ಟಿಗೆ ಉತ್ತಮ ಸಂಬಂಧ ಇಟ್ಟುಕೊಂಡವರು ಈ ಹಿಂದೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಇದ್ದಾಗಲೂ ಉತ್ತಮ ಹೆಸರು ಗಳಿಸಿದವರು ಅಂತಹ ಗುರುತರ ಆರೋಪಗಳು ತಿಪ್ಪೇಶ್ ಮೇಲೆ ಇಲ್ಲ ಎನ್ನಲಾಗಿದೆ.
ಆದರೆ ಕೌಟುಂಬಿಕ ವಿಚಾರದಲ್ಲಿ ಪದ್ಮಾ ಸಾವು ಹಲವು ಸಂಶಯಕ್ಕೆ ಕಾರಣಾವಾಗಿದೆ.ಈಗಾಗಲೇ ಡಿ.ವೈ.ಎಸ್.ಪಿ ಪರುಶುರಾಮಪ್ಪ,ಇನ್ಸ್‌ಪೆಕ್ಟರ್ ಶ್ರೀಕಾಂತ್ ಸ್ಥಳದಲ್ಲಿದ್ದು ಎಸ್.ಪಿ.ದಯಾಮಾ ಕೂಡ ಆಗಮಿಸಲ್ಲಿದ್ದಾರೆ ಎನ್ನಲಾಗಿದೆ, ಸಾವಿಗೆ ನಿಖರವಾದ ಕಾರಣ ಏನು ಎಂಬುದು ಹೆಚ್ಚಿನ ತನಿಕೆಯಿಂದ ಹೊರಬೀಳಬೇಕಾಗಿದೆ.
••••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

