ಜಾನಪದ ಕಲಾವಿದೆ ಡಾ. ಮೊಟಮ್ಮನವರಿಗೆ ಜಿಲ್ಲಾ ಸಿರಿಗನ್ನಡ ವೇದಿಕೆ ವತಿಯಿಂದ ಸನ್ಮಾನ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಜಾನಪದ ಕಲಾವಿದೆ ಡಾ. ಮೊಟಮ್ಮನವರಿಗೆ ಜಿಲ್ಲಾ ಸಿರಿಗನ್ನಡ ವೇದಿಕೆ ವತಿಯಿಂದ ಸನ್ಮಾನ.
ಚಿಕ್ಕಮಗಳೂರು ಏ ೨೬: ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಗಾಧವಾದ ಜನಪದ ಬಂಡಾರದ ಕಣಜವಿದ್ದರೂ ಸಹ ,ಅಷ್ಟಾಗಿ ಜಾನಪದೀಯ ಚಟುವಟಿಕೆಗಳು ಕಾಣಿಸಿಕೊಳ್ಳದಿದ್ದ ಕಾಲದಲ್ಲಿಯೇ ಅಂದರೆ ಸುಮಾರು ಎರಡು ದಶಕಗಳ ಹಿಂದೆ ಮಲೆನಾಡಿನ ಮೂಡಿಗೆರೆಯ ಪಟ್ಟಣದಲ್ಲಿ ಡಾ. ಮೋಟಮ್ಮನವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ *ಆದಿದಿನೋತ್ಸವದ* ಹೆಸರಿನಲ್ಲಿ ಆಚರಿಸಿದ ಆ ಜಾನಪದ ಉತ್ಸವವನ್ನು ಕಂಡವರು ಅದರ ಸೊಬಗು ಮತ್ತು ಸೌಂದರ್ಯವನ್ನು ಎಂದಿಗೂ ಮರೆಯಲಾರರು.
ಮೂಡಿಗೆರೆಯ ಮಲೆನಾಡಿನ ಹಳ್ಳಿಯ ಪ್ರತಿ ಮನೆಮನೆಗಳಲ್ಲಿ ಇದ್ದ ಜನಪದ ಪರಿಕರಗಳನ್ನೆಲ್ಲ ಒಟ್ಟುಗೂಡಿಸಿ ವಸ್ತು ಪ್ರದರ್ಶನಕಿಟ್ಟು, ಕಾಡಿನ ಮೂಲೆಯ ಕೊನೆಯಂಚಿನಲ್ಲಿದ್ದ ಜನಪದ ಕಲೆಯನ್ನು ಕಲಾವಿದರನ್ನು ಒಂದುಗೂಡಿಸಿ,ಗ್ರಾಮೀಣ ಸೊಗಡಿನೊಂದಿಗೆ ಅಂದು ಆಚರಿಸಿದ ಅ *ಆದಿದಿನೋತ್ಸವ* ಜನ ಮನದ ಮನ್ನಣೆಗೆ ಪಾತ್ರವಾಗಿತ್ತು, ಆದಿದಿನೋತ್ಸವದ ಪ್ರತಿ ಸಂದರ್ಭವು ಹಳ್ಳಿಯ ಸೊಗಡಿನೊಂದಿಗೆ ಕೂಡಿತ್ತು.
ರಾಜಕಾರಣಿಯಾಗಿ , ಮಂತ್ರಿಯಾಗಿ ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ಮಧ್ಯದಲ್ಲಿಯೂ ರಕ್ತಗತವಾಗಿ ತನ್ನೊಳಗೆ ಬಂದಿದ್ದ ಜಾನಪದವನ್ನು ಮರೆಯದೆ, ಸಮಯ ಸಿಕ್ಕಾಗ, ಸಮಯ ಮಾಡಿಕೊಂಡು ಜಾನಪದದ ಬಗ್ಗೆ ತನ್ನೊಳಗಿರುವ ನೆಲಮೂಲದ ರಾಗದೊಂದಿಗೆ ಸದ್ದು ಮಾಡುತ್ತಲೇ ಬರುತ್ತಿರುವ ಕಾರಣ ಡಾ. ಮೋಟಮ್ಮನವರನ್ನು, ವಿಶ್ವಸಂಸ್ಥೆಯ ಮಾನ್ಯತೆ ಪಡೆದಿರುವ ಕರ್ನಾಟಕ ಜಾನಪದ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಘಟಕವು 6ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ತನ್ನ ಗೌರವವನ್ನು ಸಲ್ಲಿಸಿದೆ.
ನಗರದ ಕುವೆಂಪು ಕಲಾಮಂದಿರದಲ್ಲಿ ನೆನ್ನೆ ಏಪ್ರಿಲ್ 26ರ ಭಾನುವಾರದಂದು ನಡೆದ ಸಮ್ಮೇಳನದ ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಸಿರಿಗನ್ನಡ ವೇದಿಕೆ ವತಿಯಿಂದ ಅಧ್ಯಕ್ಷರಾದ ಎಂ ಆರ್ ಪ್ರಕಾಶ್ ಮತ್ತು ಪದಾಧಿಕಾರಿಗಳು ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಮೋಟಮ್ಮನವರನ್ನು ಅಭಿನಂದಿಸಿದರು.
•••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

