ಹೆದರಬೇಡಿ ಮಕ್ಕಳೇ…… ಹೀಗೆ ಅನ್ಯಾಯ ಮಾಡಿದ ಶಿಕ್ಷಕರಿಗೆ ಕಠಿಣ ಶಿಕ್ಷೆ & ದಂಡ ವಿಧಿಸಿ,….! ಮುಂದೇನು ಮಾಡಬಹುದು.. ತಿಳಿಸಿ…?
1 min read
ಆತ್ಮೀಯ ಸ್ನೇಹಿತರೇ ಮೂಡಿಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿರುವ ನಂದಿನಿ.N.P.ವಿದ್ಯಾರ್ಥಿನಿ ವಿಜ್ಞಾನ ವಿಷಯದಲ್ಲಿ 24 ಅಂಕ ಲಿಖಿತವಾಗಿ ಬಂದಿದ್ದಕ್ಕೆ ಬೇಸರವಾಗಿದ್ದಳು, ನಂತರ ತರಗತಿ ಶಿಕ್ಷಕರು, ವಿಷಯ ಶಿಕ್ಷಕರ ಮೂಲಕ ತಿಳಿದು ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿ ನೋಡಿದರೆ ಜೀವ ಶಾಸ್ತ್ರದ 24 ಅಂಕಗಳು ಪರಿಗಣನೆ ಆಗಿದ್ದು , ಭೌತ ಶಾಸ್ತ್ರ& ರಸಾಯನ ಶಾಸ್ತ್ರ ಅಂಕಗಳು ಪರಿಗಣನೆ ಆಗಿಲ್ಲ & ಮೌಲ್ಯ ಮಾಪನವು ಸರಿಯಾಗಿ ನಡೆದಿಲ್ಲ, ಲೆಕ್ಕದ ಪ್ರಕಾರ 58 ಅಂಕಗಳು ಆಗಬೇಕು, ಈ ವಿದ್ಯಾರ್ಥಿನಿ 460ಅಂಕಗಳು ಬಂದಿದ್ದು ಈಗ 500 ದಾಟುತ್ತದೆ. ವರ್ಷ ಪೂರ್ತಿ ಓದಿದ ವಿದ್ಯಾರ್ಥಿಗಳಿಗೆ ಈ ರೀತಿ ಅನ್ಯಾಯ ಆದರೆ ಬೇಜಾರಾಗುತ್ತೆ, ಮೌಲ್ಯ ಮಾಪಕರು & ಡಿ. ಸಿ. ಕೂಡಾ ಗಮನಿಸಿಲ್ಲ, ಮಕ್ಕಳ ಜೀವನದ ಜೊತೆ ಶಿಕ್ಷಕರು ಚೆಲ್ಲಾಟ ಆಡಬಾರದು, ಈ ರೀತಿ ಅನುಮಾನಗಳಿದ್ದಲ್ಲಿ ದಯವಿಟ್ಟು ಶಿಕ್ಷಕರ ಸಹಾಯ ಪಡೆದು ನಕಲು ಪ್ರತಿ ತರಿಸಿ ಹೆದರಬೇಡಿ ಮಕ್ಕಳೇ…… ಹೀಗೆ ಅನ್ಯಾಯ ಮಾಡಿದ ಶಿಕ್ಷಕರಿಗೆ ಕಠಿಣ ಶಿಕ್ಷೆ & ದಂಡ ವಿಧಿಸಿ,….! ಮುಂದೇನು ಮಾಡಬಹುದು.. ತಿಳಿಸಿ…?

